ಹೊಸದಿಲ್ಲಿ: ಇತ್ತೀಚೆಗೆ ಆನ್‌ಲೈನ್ ಡೇಟಿಂಗ್ ಗೆ ಯುವ ಪೀಳಿಗೆ ಭಾರೀ ಅಟ್ರಾಕ್ಟ್ ಆಗುತ್ತಿದೆ. ಅದರಲ್ಲೂ ಟಿಂಡರ್ ಸಿಕ್ಕಾಪಟ್ಟೆ ಫೇಮಸ್ ಆಗಿದೆ. ಇಂತಹ ಡೇಟಿಂಗ್ ಆ್ಯಪ್ ಗಳಿಂದ ಒಳಿತಿಗಿಂತ ಕೆಡುಕೆ ಹೆಚ್ಚು. ಆನ್‌ಲೈನ್ ಡೇಟಿಂಗ್ ನಿಂದ ಸಮಸ್ಯೆ ಮಾಡಿಕೊಂಡ ಘಟನೆ ನಡೆದಿದೆ.
ದುಶ್ಯಂತ್ ಶರ್ಮಾ (28) ಟಿಂಡರ್‌ನಲ್ಲಿ ಪ್ರಿಯಾ ಸೇಠ್ ಎಂಬುವರೊಂದಿಗೆ ಟಿಂಡರ್‌ನಲ್ಲಿ ಮ್ಯಾಚ್ ಅದ ಬಳಿಕ ತುಂಬಾ ಖುಷಿಯಲ್ಲಿದ್ದ. 3 ತಿಂಗಳ ಕಾಲ ಆ್ಯಪ್‌ನಲ್ಲಿ ಮಾತನಾಡಿದ ನಂತರ, ಇಬ್ಬರೂ ವೈಯಕ್ತಿಕವಾಗಿ ಭೇಟಿಯಾಗಲು ನಿರ್ಧರಿಸಿದರು. 27 ವರ್ಷ ವಯಸ್ಸಿನ ಯುವತಿ ಆತನನ್ನು ಮನೆಯೊಂದಕ್ಕೆ ಕರೆದಳು, ಈ ಪ್ರಸ್ತಾಪವನ್ನು ದುಶ್ಯಂತ್ ತಕ್ಷಣವೇ ಒಪ್ಪಿಕೊಂಡನು. ಆದರೆ ಫೆಬ್ರವರಿ 2018 ರಲ್ಲಿ ಪ್ರಾರಂಭವಾದ ಸಂಬಂಧವು ಎರಡು ಸುಳ್ಳಿನ ಮೇಲೆ ನಿರ್ಮಿಸಲ್ಪಟ್ಟಿತು. ವಿವಾಹಿತರಾದ ದುಶ್ಯಂತ್ ತಾನು ದೆಹಲಿಯ ಶ್ರೀಮಂತ ಉದ್ಯಮಿ ವಿವಾನ್ ಕೊಹ್ಲಿ ಎಂದು ಹೇಳಿದ್ದ. ಮತ್ತೊಂದೆಡೆ ಪ್ರಿಯಾ, ಆತನನ್ನು ಅಪಹರಿಸಿ ಹಣ ವಸೂಲಿ ಮಾಡುವ ಉದ್ದೇಶದಿಂದ ಮಾತ್ರ ಮಾತುಕತೆ ನಡೆಸಿದ್ದಳು.
ಇಬ್ಬರು ಸಹಚರರಾದ ದೀಕ್ಷಾಂತ್ ಕಮ್ರಾ ಮತ್ತು ಲಕ್ಷ್ಯ ವಾಲಿಯಾ ಸಹಾಯದಿಂದ ದುಶ್ಯಂತ್ ಮನೆಗೆ ಕಾಲಿಟ್ಟ ತಕ್ಷಣ ಪ್ರಿಯಾ ಅವರನ್ನು ಅಪಹರಿಸಿದ್ದಾರೆ. ಹಣಕ್ಕೆ ಕರೆ ಮಾಡಿದ ನಂತರ ‘ದೆಹಲಿ ಉದ್ಯಮಿ’ ತಾನು ಹೇಳಿಕೊಳ್ಳುವಷ್ಟು ಶ್ರೀಮಂತನಲ್ಲ ಎಂದು ಅವರು ಅರಿತುಕೊಂಡರು. ದುಶ್ಯಂತ್ ಕುಟುಂಬವು 10 ಲಕ್ಷ ರೂ. ಪಾವತಿಸಲು ವಿಫಲವಾದ ನಂತರ, ಆರೋಪಿ ಅನೇಕ ಬಾರಿ ಚೂರಿಯಿಂದ ಇರಿದು ಕೊಚ್ಚಿ ಕೊಲೆ ಮಾಡಿದ್ದಾರೆ. ದುಶ್ಯಂತ್ ಅಕೌಂಟ್‌ಗೆ 10 ಲಕ್ಷ ಹಾಕುವಂತೆ ಡಿಮ್ಯಾಂಡ್ ಮಾಡಿದ್ದಾರೆ. ಆದರೆ, ತಂದೆ 3 ಲಕ್ಷ ರೂ. ಹಾಕಿದ್ದಾರೆ. ಈ ಪೈಕಿ 20,000 ರೂ. ಡ್ರಾ ಮಾಡಲು ಕಾರ್ಡ್ ಬಳಸಿದ್ದರು. ತಮ್ಮ ಅಪರಾಧ ಬೆಳಕಿಗೆ ಬರಬಹುದೆಂಬ ಭಯದಿಂದ ಮೂವರು ಆರೋಪಿಗಳು ದುಷ್ಯಂತ್‌ನನ್ನು ಕೊಂದಿದ್ದಾರೆ. ಬಳಿಕ ಆತನ ಮೃತದೇಹ ಮೇ 4, 2018 ರಂದು ಜೈಪುರದ ಹೊರಗಿನ ಹಳ್ಳಿಯಲ್ಲಿ ಸೂಟ್‌ಕೇಸ್‌ನಲ್ಲಿ ಪತ್ತೆಯಾಗಿತ್ತು. ಅಪರಾಧಿ ಎಂದು ಸಾಬೀತಾದ ನಂತರ ಪ್ರಿಯಾ ಸೇಠ್ ಅಪರಾಧವನ್ನು ಒಪ್ಪಿಕೊಂಡಿದ್ದಾಳೆ.