Site icon newsroomkannada.com

GOOGLE DOODLE: ಭಾರತದ ಶ್ರೀಮಂತ ಜವಳಿ ಕ್ಷೇತ್ರಕ್ಕೆ ‘ಗೂಗಲ್ ಡೂಡಲ್’ ಗೌರವ

On Independence Day Google doodle pays tribute to India’s rich textile heritage

ನವದೆಹಲಿ: ದೇಶಕ್ಕೆ ದೇಶವೇ ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿದೆ. ಈ ಸಂಭ್ರಮಕ್ಕೆ ಇನ್ನಷ್ಟು ಮೆರುಗು ನೀಡುವ ನಿಟ್ಟಿನಲ್ಲಿ ಗೂಗಲ್ ವಿಶಿಷ್ಟ ಡೂಡಲ್ ಒಂದುನ್ನು ರಚಿಸಿದ್ದು ಇದು ಭಾರತೀಯರಿಗೆ ಸ್ವಾತಂತ್ರ್ಯೋತ್ಸವದ ಡಿಜಿಟಲ್ ಕೊಡುಗೆಯಾಗಿದೆ.

ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ 76 ವರ್ಷಗಳು ಪೂರ್ಣಗೊಂಡ ಹಿನ್ನಲೆಯಲ್ಲಿ ನಮ್ಮ ದೇಶದ ಭವ್ಯ ಜವಳಿ ಪರಂಪರೆ ಮತ್ತು ದೇಶದ ಅಸ್ಮಿತೆಯಲ್ಲಿ ಅದರ ಪಾತ್ರವನ್ನು ಗುರುತಿಸುವ ಕೆಲಸವನ್ನು ಗೂಗಲ್ ತನ್ನ ಡೂಡಲ್ ಮೂಲಕ ಮಾಡಿದೆ.

ಈ ಡೂಡಲನ್ನು ದೆಹಲಿ ಮೂಲದ ಕಲಾವಿದೆ ನಮ್ರತಾ ಕುಮಾರ್ ಅವರು ರಚಿಸಿದ್ದಾರೆ.

ಈ ಡೂಡಲ್ ನ ವಿಶೇಷತೆಯನ್ನು ವಿವರಿಸುತ್ತಾ ಗೂಗಲ್ 1947ರ ಐತಿಹಾಸಿಕ ಘಟನೆಯ ಸಂಕ್ಷಿಪ್ತ ವಿವರಣೆಯನ್ನು ನೀಡಿದೆ.

“ಭಾರತದಲ್ಲಿರುವ ವಿವಿಧ ಪ್ರಕಾರದ ಜವಳಿ ಉದ್ಯಮದ ವಿಧಗಳ ಬಗ್ಗೆ ಸಂಶೋಧನೆ ನಡೆಸಿ ಗುರುತಿಸಿ ಮಾಹಿತಿಯನ್ನು ಪಡೆದುಕೊಂಡೆ. ಇದರಲ್ಲಿ ಕೈಮಗ್ಗ, ಎಂಬ್ರಾಯ್ಡರಿ ಸೇರಿದಂತೆ ದೇಶಾದ್ಯಂತ ಇರುವ ವಸ್ತ್ರೋದ್ಯಮ ವಿಧಗಳನ್ನು ಪ್ರಾತಿನಿಧಿಕವಾಗಿ ರೂಪಿಸುವ ಕೆಲಸವನ್ನು ಮಾಡಿದ್ದೇನೆ’ ಎಂದು ನಮ್ರತಾ ಹೇಳಿದ್ದಾರೆ.

ಈ ಮೂಲಕ ಭಾರತದ ಶ್ರೀಮಂತ ಜವಳಿ ಉದ್ಯಮ ಕ್ಷೇತ್ರದ ಮೇಲೆ ಬೆಳಕು ಚೆಲ್ಲುವ ಪ್ರಯತ್ನವನ್ನು ನಾನಿಲ್ಲಿ ಮಾಡಿದ್ದೇನೆಂಬ ಹೆಮ್ಮೆಯಿದೆ ಎಂದು ಕಲಾವಿದೆ ನಮ್ರತಾ ಹೇಳಿದ್ದಾರೆ.

Exit mobile version