main logo

ಜೆಡಿಎಸ್‌ ಬಿಜೆಪಿ ದೋಸ್ತಿಗೆ ಅಧಿಕೃತ ಮುದ್ರೆ: ಎನ್‌ ಡಿಎ ಕುಟುಂಬಕ್ಕೆ ಸ್ವಾಗತ ಎಂದ ಶಾ

ಜೆಡಿಎಸ್‌ ಬಿಜೆಪಿ ದೋಸ್ತಿಗೆ ಅಧಿಕೃತ ಮುದ್ರೆ: ಎನ್‌ ಡಿಎ ಕುಟುಂಬಕ್ಕೆ ಸ್ವಾಗತ ಎಂದ ಶಾ

ನವದೆಹಲಿ: ಲೋಕಸಭೆ ಚುನಾವಣೆಯ ದೃಷ್ಟಿಯಿಂದ ಕರ್ನಾಟಕದಲ್ಲಿ ಮೈತ್ರಿ ಮಾಡಿಕೊಳ್ಳುವ ವಿಚಾರವಾಗಿ ಜೆಡಿಎಸ್ ಹಾಗೂ ಬಿಜೆಪಿ ಒಮ್ಮತಕ್ಕೆ ಬಂದಿವೆ. ಇದರ ಬೆನ್ನಲ್ಲೇ, ಆ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಸಾಮಾಜಿಕ ಮಾಧ್ಯಮ ‘ಎಕ್ಸ್​​​’ನಲ್ಲಿ ಪೋಸ್ಟ್​ ಮಾಡಿದ್ದು, ಎನ್​ಡಿಎ ಕುಟುಂಬಕ್ಕೆ ಜೆಡಿಎಸ್​ಗೆ ಹೃತ್ಪೂರ್ವಕ ಸ್ವಾಗತ ಎಂದು ಉಲ್ಲೇಖಿಸಿದ್ದಾರೆ. ಇದಕ್ಕೂ ಮನ್ನ ದೆಹಲಿಯಲ್ಲಿರುವ ಅಮಿತ್ ಶಾ ನಿವಾಸದಲ್ಲಿ ಕುಮಾರಸ್ವಾಮಿ, ಅಮಿತ್ ಶಾ, ನಡ್ಡಾ, ನಿಖಿಲ್ ಕುಮಾರಸ್ವಾಮಿ ಕುಪೇಂದ್ರ ರೆಡ್ಡಿ, ಗೋವಾ ಸಿಎಂ ಪ್ರಮೋದ್ ಸಾವಂತ್ ಮಾತುಕತೆ ನಡೆಸಿದ್ದರು.
ಕರ್ನಾಟಕದ ಮಾಜಿ ಮುಖ್ಯಮಂತ್ರಿ ಮತ್ತು ಜೆಡಿಎಸ್ ನಾಯಕರಾದ ಹೆಚ್​​ಡಿ ಕುಮಾರಸ್ವಾಮಿ ಅವರೊಂದಿಗೆ ಮಾತುಕತೆ ನಡೆಸಿದೆ. ಈ ಸಂದರ್ಭದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಸಹ ಇದ್ದರು. ಪ್ರಧಾನಿ ನರೇಂದ್ರ ಮೋದಿಯವರ ಅಭಿವೃದ್ಧಿ ಹೊಂದಿದ ಭಾರತದ ದೃಷ್ಟಿಕೋನದ ಮೇಲೆ ತಮ್ಮ ನಂಬಿಕೆಯನ್ನು ವ್ಯಕ್ತಪಡಿಸಿರುವ ಜೆಡಿಎಸ್ ಮುಂದೆ ಎನ್‌ಡಿಎ ಮೈತ್ರಿಕೂಟದ ಭಾಗವಾಗಿರಲು ನಿರ್ಧರಿಸಿದೆ. ಎನ್​ಡಿಎ ಕುಟುಂಬಕ್ಕೆ ಜೆಡಿಎಸ್​ ಅನ್ನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ’ ಎಂದು ಅಮಿತ್ ಶಾ ‘ಎಕ್ಸ್​’ ಪೋಸ್ಟ್​​ನಲ್ಲಿ ಉಲ್ಲೇಖಿಸಿದ್ದಾರೆ.

Related Articles

Leave a Reply

Your email address will not be published. Required fields are marked *

error: Content is protected !!