main logo

ಅಯೋಧ್ಯೆ ರಾಮ ಮಂದಿರದ ಅರ್ಚಕರ ಅಶ್ಲೀಲ ವಿಡಿಯೋ ವೈರಲ್‌

ಅಯೋಧ್ಯೆ ರಾಮ ಮಂದಿರದ ಅರ್ಚಕರ ಅಶ್ಲೀಲ ವಿಡಿಯೋ ವೈರಲ್‌

ಅಹಮದಾಬಾದ್: ಸಮಸ್ತ ಹಿಂದುಗಳ ಶ್ರದ್ಧಾ ಕೇಂದ್ರವಾಗಿರುವ ಅಯೋಧ್ಯೆ ಶ್ರೀರಾಮ ಮಂದಿರ ಉದ್ಘಾಟನೆಗೆ ಕೆಲವೇ ದಿನಗಳು ಬಾಕಿ ಉಳಿದಿದೆ. ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ ರಾಮಮಂದಿರದ ಅರ್ಚಕರೆಂದು ಹೇಳುವ ನಕಲಿ ಅಶ್ಲೀಲ ವಿಡಿಯೋ ಹಾಗೂ ಫೋಟೋಗಳು ವೈರಲ್ ಆಗಿದ್ದು ಆಕ್ರೋಶಕ್ಕೆ ಗುರಿಯಾಗಿದೆ. ಅಶ್ಲೀಲ ಚಿತ್ರಗಳಲ್ಲಿ ಕಂಡುಬರುವ ವ್ಯಕ್ತಿ ಮೋಹಿತ್ ಪಾಂಡೆ ಎಂದು ಹೇಳಲಾಗುತ್ತಿದೆ.

ಮೋಹಿತ್ ಪಾಂಡೆ ಇತ್ತೀಚೆಗೆ ಅಯೋಧ್ಯೆಯ ಶ್ರೀರಾಮ ಮಂದಿರದ ಮುಖ್ಯ ಅರ್ಚಕರಾಗಿ ಆಯ್ಕೆಯಾಗಿದ್ದರು. ಕೆಲವು ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳು ಮೋಹಿತ್ ಪಾಂಡೆ ಅವರ ಹೆಸರಿನಲ್ಲಿ ನಕಲಿ ಫೋಟೋಗಳನ್ನು ಹಂಚಿಕೊಳ್ಳುತ್ತಿವೆ. ಕಾಂಗ್ರೆಸ್ ನಾಯಕ ಹಿತೇಂದ್ರ ಪಿತಾಡಿಯಾ (Hitendra Pithadiya) ಅವರು ಕೂಡ ಮೋಹಿತ್ ಪಾಂಡೆಯ ಎಂದು ಹೇಳುವ ಮೂಲಕ ‘ಅಶ್ಲೀಲ’ ಮತ್ತು ‘ನಕಲಿ’ ಫೋಟೋಗಳು ಮತ್ತು ವೀಡಿಯೊಗಳನ್ನು ಹಂಚಿಕೊಂಡಿದ್ದಾರೆ. ಅರ್ಚಕ ಆಕ್ಷೇಪಾರ್ಹ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಕ್ಕಾಗಿ ಹಿತೇಂದ್ರ ಪಿತಾಡಿಯಾ ಅವರನ್ನು ಗುಜರಾತ್ ಪೊಲೀಸರು ಬಂಧಿಸಿದ್ದಾರೆ.

Related Articles

Leave a Reply

Your email address will not be published. Required fields are marked *

error: Content is protected !!