Site icon newsroomkannada.com

ಅಮೆರಿಕ ಮಾಜಿ ಅಧ್ಯಕ್ಷ ಬರಾಕ್‌ ಒಬಾಮ ಮಂಡ್ಯಕ್ಕೆ ಬರ್ತಿರೋದು ಯಾಕೆ ಗೊತ್ತಾ

ಬೆಂಗಳೂರು: ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಮತ್ತು ಟಿಬೆಟಿಯನ್ ಧಾರ್ಮಿಕ ಮುಖ್ಯಸ್ಥ ದಲೈಲಾಮಾ ಅವರು ಡಿಸೆಂಬರ್‌ನಲ್ಲಿ ಕರ್ನಾಟಕದ ಮಂಡ್ಯಕ್ಕೆ ಭೇಟಿ ನೀಡಿ ಅಂತಾರಾಷ್ಟ್ರೀಯ ಯೋಗ ಮತ್ತು ಧ್ಯಾನ ಕೇಂದ್ರಕ್ಕೆ ಶಂಕುಸ್ಥಾಪನೆ ನಡೆಸಲಿದ್ದಾರೆ.
ಮಂಡ್ಯದ ಹಲ್ಲೆಗೆರೆ ಗ್ರಾಮದಲ್ಲಿ ಭೂತಾಯಿ ಟ್ರಸ್ಟ್ ಈ ಆಧ್ಯಾತ್ಮಿಕ ಕೇಂದ್ರವನ್ನು ನಿರ್ಮಿಸಿದೆ ಎಂದು ಮುಖ್ಯಮಂತ್ರಿ ಕಚೇರಿ ಗುರುವಾರ ತಿಳಿಸಿದೆ. ಹಲ್ಲೇಗೆರೆ ಗ್ರಾಮಕ್ಕೆ ಹೆಲಿಪ್ಯಾಡ್, ರಸ್ತೆ, ಚರಂಡಿ, ವಿದ್ಯುತ್, ಕುಡಿಯುವ ನೀರು ಮತ್ತಿತರ ಸೌಲಭ್ಯ ಕಲ್ಪಿಸಲು ನೆರವು ನೀಡುವಂತೆ ಕೋರಿ ಅಮೆರಿಕದ ವೈದ್ಯ ಡಾ.ಲಕ್ಷ್ಮೀನರಸಿಂಹಮೂರ್ತಿ ನೇತೃತ್ವದ ನಿಯೋಗ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದೆ ಎಂದು ಸಿಎಂಒ ತಿಳಿಸಿದ್ದಾರೆ

ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಿಎಂ ಶೀಘ್ರವೇ ಅಧಿಕಾರಿಗಳ ಸಭೆ ನಡೆಸುವುದಾಗಿ ಭರವಸೆ ನೀಡಿದರು. ಕೇಂದ್ರದ ಕಾರ್ಯವೈಖರಿಯನ್ನು ವಿವರಿಸಿದ ನಿಯೋಗದ ಸದಸ್ಯರು ಹಲ್ಲೇಗೆರೆ ಮತ್ತು ಮಂಡ್ಯ ಜಿಲ್ಲೆಗೆ ಮಾತ್ರವಲ್ಲದೆ ಇಡೀ ರಾಜ್ಯಕ್ಕೆ ದೊಡ್ಡ ಕೊಡುಗೆಯಾಗಲಿದೆ. ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸೂಕ್ತ ಸಮಸ್ಯೆಗಳ ಕುರಿತು ಚರ್ಚಿಸುವುದಾಗಿ ಸಿದ್ದರಾಮಯ್ಯ ನಿಯೋಗಕ್ಕೆ ಭರವಸೆ ನೀಡಿದರು.

ಮಂಡ್ಯ ತಾಲೂಕಿನ ಹಲ್ಲೇಗೆರೆ ಗ್ರಾಮದಲ್ಲಿ ಭೂದೇವಿ ಆಧ್ಯಾತ್ಮಿಕ ಕೇಂದ್ರ ನಿರ್ಮಾಣ ಮಾಡಲಾಗುತ್ತಿದೆ. ಇದನ್ನು ಜಗತ್ತಿನಲ್ಲಿ ಮೊಟ್ಟ ಮೊದಲನೆಯದಾಗಿ ನಿರ್ಮಾಣ ಮಾಡಲಾಗುತ್ತಿರುವ ಸರ್ವಧರ್ಮ ಸಮನ್ವಯ ಕೇಂದ್ರವೆಂದೂ (ಮದರ್ ಅರ್ಥ್) ಕರೆಯಬಹುದು. ಇದು ಒಂದು ಧರ್ಮಕ್ಕೆ ಸೀಮತವಾಗದೇ ಎಲ್ಲಾ ಧರ್ಮದವೂ ಸಮಾನ ಎಂದು ಸಾರುವ ಸದುದ್ದೇಶದೊಂದಿಗೆ ನಿರ್ಮಾಣ ಮಾಡಲಾಗುತ್ತಿದೆ.

ಇದನ್ನು ಅಮೇರಿಕಾದ ಖ್ಯಾತ ಸರ್ಜನ್ ಜನರಲ್ ಡಾ.ವಿವೇಕ್ ಮೂರ್ತಿ ಹಾಗೂ ಅವರ ತಂದೆ ಡಾ.ಮೂರ್ತಿ ಜಂಟಿಯಾಗಿ ಮದರ್ ಅರ್ಥ್ ನಿರ್ಮಾಣ ಮಾಡುತ್ತಿದ್ದಾರೆ. ಅಮೇರಿಕಾದ ಖ್ಯಾತ ವೈದ್ಯ ಡಾ.ಮೂರ್ತಿ ಅವರು ಹಲ್ಲೇಗೆರೆ ಗ್ರಾಮದವರೇ ಆಗಿದ್ದಾರೆ. ಸದ್ಯ ಅಮೇರಿಕದಲ್ಲಿ ಡಾ.ಮೂರ್ತಿ ಹಾಗೂ ಕುಟುಂಬ ವಾಸವಾಗಿದೆ.

Exit mobile version