ಪುತ್ತೂರು: ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ (ರಿ.) (Sri Mookambika Cultural Academy) ಅರ್ಪಿಸುವ ‘ಚೆಂಬರ್ ಕನ್ಸರ್ಟ್’ (Chamber Concert0 ಅಥವಾ ‘ಗೃಹ ಮಾಲಿಕೆ’ ಪರಿಕಲ್ಪನೆಯ ಭರತ ನಾಟ್ಯ (Bharatanatyam_ ಪ್ರದರ್ಶನ ಕಾರ್ಯಕ್ರಮ ‘ನೃತ್ಯಾಂತರಂಗ’ (Nruthyantaranga) ಸರಣಿಯ 104ನೇ ಕಾರ್ಯಕ್ರಮ ಸೆ,16ರಂದು ಇಲ್ಲಿನ ಶಶಿಶಂಕರ (Shashi Shankara) ಸಭಾಂಗಣದಲ್ಲಿ ಯಶಸ್ವಿಯಾಗಿ ಸಂಪನ್ನಗೊಂಡಿತು..
ನೃತ್ಯ ಗುರುಗಳಾಗಿರುವ ವಿದ್ವಾನ್ ದೀಪಕ್ ಪುತ್ತೂರು (Deepak Puttur) ಅವರ ಪರಿಕಲ್ಪನೆಯಾಗಿರುವ ಈ ನೃತ್ಯಾಂತರಂಗ ಸರಣಿ ಕಾರ್ಯಕ್ರಮದ 104ನೇ ಅವೃತ್ತಿಯಲ್ಲಿ, ಶ್ರೀಮತಿ ಪ್ರತಿಮಾ ಶ್ರೀಧರ್ ಮತ್ತು ಶ್ರೀಧರ್ ಹೊಳ್ಳ ಅವರ ಶಿಷ್ಯೆಯಾಗಿರುವ ವಿದುಷಿ ಅನ್ನಪೂರ್ಣ ರಿತೇಶ್ (Annapoorna Ritesh) ಅವರು ನಾಟ್ಯ ಪ್ರದರ್ಶನ ನೀಡಿದರು.
ಶಂಖನಾದ ಮತ್ತು ಓಂಕಾರ ಹಾಗೂ ಕಲಾಶಾಲೆಯ ವಿದ್ಯಾರ್ಥಿಗಳ ಪ್ರಾರ್ಥನೆಯ ಬಳಿಕ ಈ ಕಾರ್ಯಕ್ರಮದ ಮುಖ್ಯ ಅಭ್ಯಾಗತರಾಗಿದ್ದ ಪತ್ರಕರ್ತ ಹರಿಪ್ರಸಾದ್ ನೆಲ್ಯಾಡಿ ದೀಪ ಪ್ರಜ್ವಲಿಸಿ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬಳಿಕ, ವಿದುಷಿ ಅನ್ನಪೂರ್ಣ ರಿತೇಶ್ ಅವರ ನೃತ್ಯ ಪ್ರದರ್ಶನ ಶಶಿಶಂಕರದಲ್ಲಿ ನೆರೆದಿದ್ದ ಕಲಾಸಕ್ತರ ಮುಂದೆ ಅನಾವರಣಗೊಂಡಿತು.
ಸಂಪೂರ್ಣ ಕಾರ್ಯಕ್ರಮವನ್ನು ಕಲಾಶಾಲೆಯ ವಿದ್ಯಾರ್ಥಿಗಳೇ ನಿರ್ವಹಿಸಿ ಗಮನ ಸೆಳೆದರು. ಗುರುಗಳಾದ ದೀಪಕ್ ಪುತ್ತೂರು, ವಿದ್ವಾನ್ ಗಿರೀಶ್ ಮತ್ತು ವಿದುಷಿ ಪ್ರೀತಿಕಲಾ ಅವರು ಸೂಕ್ತ ಮಾರ್ಗದರ್ಶನ ನೀಡಿದರು.
ಮೋನಿಷ್ಕ, ನೈಮಿಷ, ರಿಯಾ, ಯಶ್ವಿ, ಪ್ರಾರ್ಥನಾ, ಶ್ರೀರಕ್ಷಾ , ಹಿಮಾನಿ, ಮಾನ್ವಿ ಕಜೆ, ಮನೀಷಾ ಕಜೆ ಪ್ರಾರ್ಥನೆ ನೆರವೇರಿಸಿಕೊಟ್ಟರು.
ವಿದುಷಿ ಅನ್ನಪೂರ್ಣ ರಿತೇಶ್ ಮತ್ತು ಮುಖ್ಯ ಅಭ್ಯಾಗತರ ಪರಿಚಯವನ್ನು ಅಪೇಕ್ಷ ಮತ್ತು ಹಿಮನೀಶ್ ಮಾಡಿಕೊಟ್ಟರೆ, ಅಕ್ಷಯ ಪಾರ್ವತಿ ಸರೋಳಿ ಅವರ ತುಳು ಭಾಷೆಯ ನಿರೂಪಣೆ ಗಮನ ಸೆಳೆಯಿತು.
ಈಗಾಗಲೇ ‘ಗೃಹ ಮಾಲಿಕೆ’ ಪರಿಕಲ್ಪನೆಯಲ್ಲಿ ತಿಂಗಳು ನಡೆಯುತ್ತಿರುವ ಈ ‘ನೃತ್ಯಾಂತರಂಗ’ ಕಾರ್ಯಕ್ರಮ ಇದೀಗ ಶತಕದ ಗಡಿಯನ್ನು ದಾಟಿ 104 ಕಾರ್ಯಕ್ರಮಗಳನ್ನು ಪೂರ್ಣಗೊಳಿಸಿರುವುದು ಪುತ್ತೂರು ಮಾತ್ರವಲ್ಲದೇ ದಕ್ಷಿಣ ಕನ್ನಡ ಜಿಲ್ಲೆಯ ಮಟ್ಟಿಗೆ ಒಂದು ಹೆಗ್ಗಳಿಕೆಯೇ ಸರಿ. ನೃತ್ಯಾಂತರಂಗದಲ್ಲಿ, ರಾಜ್ಯ ಮತ್ತು ದೇಶ-ವಿದೇಶಗಳಲ್ಲೂ ಹೆಸರುವಾಸಿಯಾಗಿರುವ ಭರತನಾಟ್ಯ ಕಲಾವಿದರು ತಮ್ಮ ಕಲಾ ಪ್ರದರ್ಶನವನ್ನು ನೀಡಿರುವುದು ‘ನೃತ್ಯಾಂತರಂಗ’ದ ಹೆಗ್ಗಳಿಕೆಯಾಗಿದೆ.
ಈ ಸಂದರ್ಭದ ಫೊಟೋಗಳ ಸಂಗ್ರಹ ಇಲ್ಲಿದೆ..