Site icon newsroomkannada.com

ಫಂಡ್‌ ಇಲ್ಲಾ ಅಂದ್ರೆ ಆಗುತ್ತದೆಯೇ ಎಂದು ಕೈ ಮುಖಂಡರಿಗೆ ಮೀನುಗಾರರ ತರಾಟೆ

ಮಂಗಳೂರು: ಮಂಗಳೂರಿನ ಉಚ್ಚಿಲದ ಮಳೆಹಾನಿ ಪ್ರದೇಶಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ ವೇಳೆ ಮಾತನಾಡಲು ಅವಕಾಶ ನೀಡದಿರುವುದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಸ್ಥಳೀಯ ಕಾಂಗ್ರೆಸ್‌ ಮುಖಂಡ ಸದಾಶಿವ ಉಳ್ಳಾಲ್‌ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸಿಎಂಗೆ ನಮ್ಮ ಸಮಸ್ಯೆ ಹೇಳಬೇಕಿತ್ತು ಅದಕ್ಕೆ ಅವಕಾಶ ಸಿಕ್ಕಿಲ್ಲ. ಸುಮ್ಮನೆ ಬಂದು ಹೋಗುವುದಾದರೆ ನಮಗೆ ಪರಿಹಾರವಿಲ್ಲವೇ ಎಂದು ಮುಖಂಡರೆದುರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಲ್ಲರೂ ಸುಮ್ಮನೆ ಬಂದು ಭರವಸೆ ಅಷ್ಡೇ ನೀಡುತ್ತಾರೆ. ಶಾಶ್ವತ ಪರಿಹಾರ ನಮಗೆ ಯಾವಾಗ? ಎಂದು ಪ್ರಶ್ನಿಸಿದ್ದಾರೆ.

ಸಿದ್ದರಾಮಯ್ಯ ಕೂಡ ಭರವಸೆ ಕೊಟ್ಟು ಹೋಗಿದ್ದಾರೆ. ನಾವು ಮೀನುಗಾರ ಕುಟುಂಬದವರು ಇಲ್ಲಿ ಹೇಗೆ ಬದುಕುವುದು ಹೇಗೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಡಲ್ಕೊರೆತ ಹೆಚ್ಚಾದಾಗ ಗಂಜಿ ಕೇಂದ್ರಕ್ಕೆ ಹೋಗಿ ಎನ್ನುತ್ತಾರೆ. ನಮಗೆ ನಿಮ್ಮ ಗಂಜಿ ಬೇಡ, ಸರಿಯಾಗಿ ಬದುಕಲು ಬಿಡಿ ಎಂದು ಸ್ಥಳೀಯ ಕಾಂಗ್ರೆಸ್ ಮುಖಂಡರ ವಿರುದ್ಧ ಗರಂ ಆಗಿದ್ದಾರೆ.

Exit mobile version