main logo

ಪುತ್ತೂರು ದೇವಳದೊಳಗೆ ಅನ್ಯಮತೀಯರಿಗೆ ಪ್ರವೇಶ ನೀಡಿದ್ರೆ ಹೋರಾಟ ಮಾಡ್ತೀವಿ

ಪುತ್ತೂರು ದೇವಳದೊಳಗೆ ಅನ್ಯಮತೀಯರಿಗೆ ಪ್ರವೇಶ ನೀಡಿದ್ರೆ ಹೋರಾಟ ಮಾಡ್ತೀವಿ

ಪುತ್ತೂರು: ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದೊಳಗೆ ಅನ್ಯಮತೀಯರ ಪ್ರವೇಶವನ್ನು ಕಡ್ಡಾಯವಾಗಿ ನಿಷೇಧಿಸುವಂತೆ ಪುತ್ತಿಲ ಪರಿವಾರ ಒತ್ತಾಯಿಸಿದ್ದು, ಪುತ್ತಿಲ ಪರಿವಾರದ ನಗರಾಧ್ಯಕ್ಷರು ದೇವಸ್ಥಾನದ ಅಧ್ಯಕ್ಷರಿಗೆ ಮನವಿ ಸಲ್ಲಿಸಿದ್ದಾರೆ.

ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಅವರಿಗೆ ಪುತ್ತಿಲ ಪರಿವಾರದ ಪದಾಧಿಕಾರಿಗಳು ಮನವಿ ಪತ್ರ ನೀಡಿದ್ದಾರೆ. ಜೂ.25 ರಂದು ದೇವಸ್ಥಾನದ ಒಳಗೆ ಅನ್ಯಮತೀಯರು ಪ್ರವೇಶಿಸಿದ್ದು, ದೇವಸ್ಥಾನದ ಒಳಗೆ ಕ್ಯಾಮರಾ ಬಳಕೆ ನಿಷೇಧವಾಗಿದ್ದರೂ ಭಾವಚಿತ್ರವನ್ನು ತೆಗೆಯುತ್ತಿರುವುದು ಭಕ್ತರ ಗಮನಕ್ಕೆ ಬಂದಿರುತ್ತದೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಅವರ ಭಾವಚಿತ್ರದ ಜತೆಗೆ ವ್ಯಾಪಕ ಚರ್ಚೆಯಾಗುತ್ತಿದೆ. ಈ ಘಟನೆ ನಿಜವಾಗಿದ್ದಲ್ಲಿ ಪುತ್ತಿಲ ಪರಿವಾರ ಇದನ್ನು ತೀವ್ರವಾಗಿ ಖಂಡಿಸುತ್ತದೆ. ಹಿಂದೂಗಳ ಪವಿತ್ರವಾದ ದೇವಳದಲ್ಲಿ ಅನ್ಯಮತೀಯರ ಪ್ರವೇಶವನ್ನು ಸಹಿಸುವುದಿಲ್ಲ.

ಪುತ್ತೂರು ಶಾಸಕ ಅಶೋಕ್ ರೈ ಅವರು ನಿನ್ನೆ ದೇವಸ್ಥಾನಕ್ಕೆ ಭೇಟಿ ನೀಡಿದ ವೇಳೆ ಅವರ ಜತೆ ಅನ್ಯಕೋಮಿನ ವ್ಯಕ್ತಿ ಇದ್ದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಮುಂದಿನ ದಿನಗಳಲ್ಲಿ ಈ ರೀತಿಯಾದಲ್ಲಿ ಇದಕ್ಕೆ ದೇವಳದ ಆಡಳಿತ ಮಂಡಳಿಯೇ ನೇರ ಹೊಣೆಯಾಗಿರುತ್ತದೆ. ದೇವಗಳಲ್ಲಿ, ಭಕ್ತರ ಭಾವನೆ, ನಂಬಿಕೆಗೆ ಧಕ್ಕೆಯಾದಲ್ಲಿ ಪುತ್ತಿಲ ಪರಿವಾರದಿಂದ ತೀವ್ರ ಹೋರಾಟ ನಡೆಸಲಾಗುವುದು. ತಕ್ಷಣ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಅವರು ಮನವಿ ಪತ್ರದಲ್ಲಿ ಆಗ್ರಹಿಸಿದ್ದಾರೆ.

Related Articles

Leave a Reply

Your email address will not be published. Required fields are marked *

error: Content is protected !!