Site icon newsroomkannada.com

ನಿತ್ಯಾನಂದನ ಕೈಲಾಸ ದೇಶದ ಪ್ರಧಾನಿ ಯಾರು ಗೊತ್ತಾ

ಭಾರತದಿಂದ ಪಾಲಾಯನಗೈದಿರುವ  ಸ್ವಯಂ ಘೋಷಿತ ದೇವ ಮಾನವ ನಿತ್ಯಾನಂದ ತನ್ನ ಅತೀ ಆತ್ಮೀಯ ಶಿಷ್ಯೆ ರಂಜಿತಾಳನ್ನು ತನ್ನದೇ ದೇಶ ಕೈಲಾಸದ ಪ್ರಧಾನಿಯನ್ನಾಗಿ ಮಾಡಿದ್ದಾನೆ ಎಂಬ ವಿಚಾರ ವಿಚಾರ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಈತ ಈಕ್ವೆಡಾರ್‌ ದ್ವೀಪವೊಂದನ್ನು ಖರೀದಿಸಿ ತನ್ನದೇ ಆದ ದೇಶವನ್ನಾಗಿ ಪರಿವರ್ತಿಸಿ ತನ್ನ ಶಿಷ್ಯೆಯರೊಂದಿಗೆ ವಾಸವಾಗಿದ್ದಾನೆ. ನಟಿ ರಂಜಿತಾ ಮತ್ತು ನಿತ್ಯಾನಂದ ಅವರ ಖಾಸಗಿ ವಿಡಿಯೋವೊಂದು ಈ ಹಿಂದೆ ವೈರಲ್‌ ಆಗಿದ್ದು, ಇದೇ ವಿಚಾರವಾಗಿ ಆತ ನ್ಯಾಯಾಲಯ ಮೆಟ್ಟಿಲು ಏರಬೇಕಾಗಿ ಬಂದಿತ್ತು. ನಂತರ ಭಾರತ ತೊರೆದು ಈಕ್ವೆಡಾರ್ನಲ್ಲಿ ತಮ್ಮದೇ ಕೈಲಾಸ ದೇಶ ಘೋಷಿಸಿಕೊಂಡಿದ್ದ. ಈ ಹಿಂದೆ ನಿತ್ಯಾನಂದ ತನ್ನ ದೇಶದ ಕರೆನ್ಸಿಯನ್ನು ನಿತ್ಯಾನಂದ ಬಿಡುಗಡೆ ಮಾಡಿದ್ದ ಅಲ್ಲದೆ ದೇಶದ ವೀಸಾವನ್ನು ಘೋಷಿಸಿದ್ದ.

ಇದೀಗ ತಮ್ಮ ಅತ್ಯಾಪ್ತ ಶಿಷ್ಯೆ ರಂಜಿತಾಳನ್ನು ಕೈಲಾಸದ ಪ್ರಧಾನ ಮಂತ್ರಿಯನ್ನಾಗಿ ನೇಮಿಸಿದ್ದಾರೆ. ಈ ಸಂಬಂಧ ಅಧಿಕೃತ ಘೋಷಣೆ ಮಾಡಲಾಗಿದೆ ಎನ್ನಲಾಗಿದೆ.

Exit mobile version