main logo

ಕರ್ನಾಟಕದ ಪ್ರಸಿದ್ಧ ಯುವ ಉದ್ಯಮಿ ನಿಖಿಲ್ ಕಾಮತ್ ಅವರ ಆರೋಗ್ಯಕ್ಕೆ ಆಗಿದ್ದೇನು

ಕರ್ನಾಟಕದ ಪ್ರಸಿದ್ಧ ಯುವ ಉದ್ಯಮಿ ನಿಖಿಲ್ ಕಾಮತ್ ಅವರ ಆರೋಗ್ಯಕ್ಕೆ ಆಗಿದ್ದೇನು

ಟ್ವಿಟರ್‌ ನಲ್ಲಿ ಅವರು ಹಂಚಿಕೊಂಡ ಸಂದೇಶವೇನು?

ಬೆಂಗಳೂರು: ಭಾರತದ ಯುವ ಉದ್ಯಮಿ, ವಿಶ್ವ ಮಟ್ಟದಲ್ಲಿ ಭಾರಿ ಪ್ರಖ್ಯಾತಿ ಪಡೆದಿರುವ ಕರ್ನಾಟಕದ ನಿಖಿಲ್ ಕಾಮತ್ ಸ್ಟ್ರೋಕ್‌ನಿಂದ ಆಸ್ಪತ್ರೆ ದಾಖಲಾಗಿರುವ ಮಾಹಿತಿ ಬಹಿರಂಗವಾಗಿದೆ. 6 ವಾರಗಳ ಹಿಂದೆ ಸ್ಟ್ರೋಕ್‌ಗೆ ತುತ್ತಾಗಿ ಆಸ್ಪತ್ರೆ ದಾಖಲಾಗಿದ್ದೆ, ಇದೀಗ ನಿಧಾನವಾಗಿ ಚೇತರಿಸಿಕೊಳುತ್ತಿದ್ದೇನೆ. ಕನಿಷ್ಠ 3 ರಿಂದ 6 ತಿಂಗಳ ಅವಶ್ಯಕತೆ ಇದೆ ಎಂದು ನಿಖಿಲ್ ಕಾಮತ್ ಹೇಳಿದ್ದಾರೆ. ಇದೀಗ ಆಸ್ಪತ್ರೆಯಿಂದ ಬಿಡುಗಡೆಯಾಗಿರುವ ನಿಖಿಲ್ ಕಾಮತ್ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. 42 ವರ್ಷದ ಯುವ ಉದ್ಯಮಿ ತಮ್ಮ ಆರೋಗ್ಯ ಕುರಿತ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.

ಬಿಡುವಿಲ್ಲದ ಕೆಲಸ, ಒತ್ತಡ, ಪ್ರಯಾಣ ಜೊತೆಗೆ, ಕಡಿಮೆ ನಿದ್ದೆಯಿಂದ ನಿಖಿಲ್ ಕಾಮತ್ ಆರೋಗ್ಯ ಹದಗೆಟ್ಟಿದೆ. ಇದರ ಜೊತೆಗೆ ತಂದೆಯ ನಿಧನ ನಿಖಿಲ್ ಕಾಮತ್‌ರನ್ನು ಮತ್ತಷ್ಟು ಕಾಡಿದೆ. ಇದರ ಪರಿಣಾಮ ಮೈಲ್ಡ್ ಸ್ಟ್ರೋಕ್‌ಗೆ ತುತ್ತಾಗಿದ್ದಾರೆ. ಕಳೆದ ಒಂದು ತಿಂಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಿಖಿಲ್ ಕಾಮತ್ ಇದೀಗ ಬಿಡುಗಡೆಯಾಗಿದ್ದಾರೆ. ನಿಧಾನವಾಗಿ ಚೇತರಿಸಿಕೊಳ್ಳುತ್ತಿರುವ ನಿಖಿಲ್ ಕಾಮತ್‌ಗೆ ಕನಿಷ್ಠ 3 ರಿಂದ 6 ತಿಂಗಳ ವಿಶ್ರಾಂತಿಗೆ ವೈದ್ಯರು ಸೂಚಿಸಿದ್ದಾರೆ.
ತಮ್ಮ ಆರೋಗ್ಯದ ಕುರಿತು ನಿಖಿಲ್ ಕಾಮತ್ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ. 6 ವಾರಗಳ ಹಿಂದೆ ಪಾರ್ಶ್ವವಾಯುಗೆ ತುತ್ತಾಗಿದ್ದೆ. ತಂದೆಯ ನಿಧನ, ಕಡಿಮೆ ನಿದ್ರೆ, ನಿಶ್ಯಕ್ತಿ, ನಿರ್ಜಲೀಕರಣ, ಅತಿಯಾದ ಕೆಲಸ, ಒತ್ತಡಗಳಲ್ಲಿ ನನ್ನಗೆ ಭಾದಿಸಿದ ಮೈಲ್ಡ್ ಸ್ಟ್ರೋಕ್‌ಗೆ ಕಾರಣವಾಗಿರಬದು. ಇದರಿಂದ ನಾನು ಸೊರಗಿ ಹೋದೆ. ಓದಲು-ಬರೆಯಲು ಸಾಧ್ಯವಾಗದ ಪರಿಸ್ಥಿತಿಗೆ ತಲುಪಿದ್ದೇನೆ. ನಿಧಾನವಾಗಿ ಓದಲು ಬರೆಯಲು ಪ್ರಯತ್ನಿಸುತ್ತಿದ್ದೇನೆ. ಆ್ಯಬ್ಸೆಂಟ್ ಮೈಂಡ್‌ನಿಂದ ಪ್ರೆಸೆಂಟ್ ಮೈಂಡ್‌ಗೆ ಬರುತ್ತಿದ್ದೇನೆ. ಚೇತರಿಕೆಗೆ ಕನಿಷ್ಠ 3 ರಿಂದ 6 ತಿಂಗಳ ಅವಶ್ಯಕತೆ ಇದೆ. ಫಿಟ್ ಆಗಿರುವ ವ್ಯಕ್ತಿಗೆ ಈ ರೀತಿ ಆಗಿದೆ ಅನ್ನೋದು ನನ್ನನ್ನು ಆಶ್ಚರ್ಯ ಚಕಿತರನ್ನಾಗಿ ಮಾಡಿದೆ. ಒಂದೇ ವೇಗ, ವೇಗ ಹೆಚ್ಚಿಸುತ್ತಾ ಓಡುತ್ತಿರುವಾಗ ಗೇರ್ ಬದಲಿಸುವುದು ತಿಳಿದೊಳ್ಳಬೇಕು. ಅವಶ್ಯಕತೆ ಬಿದ್ದಾಗ ನಿಧಾನವಾಗಬೇಕು ಎಂದು ವೈದ್ಯರು ಸೂಚಿಸಿದ್ದಾರೆ. ಸ್ವಲ್ಪ ಮುರಿದಿದೆ, ಆದರೆ ಟ್ರೆಡ್ ಮಿಲ್ ಕೌಂಟ್ ಆರಂಭಿಸುತ್ತಿದ್ದೇನೆ ಎಂದು ನಿಖಿಲ್ ಕಾಮತ್ ಸುದೀರ್ಘ ಪೋಸ್ಟ್ ಮಾಡಿದ್ದಾರೆ.

Related Articles

Leave a Reply

Your email address will not be published. Required fields are marked *

error: Content is protected !!