ಕೊಚ್ಚಿನ್: ಕೋವಿಡ್ ನಂತೆಯೇ ಕೇರಳದಲ್ಲಿ ನಿಫಾ ವೈರಸ್ ಅಬ್ಬರ ಹೆಚ್ಚಿದೆ. ಈ ಹಿಂದೆ ನಿಫಾ ವೈರಸ್ ಜ್ವರದಿಂದ 2 ಮಂದಿ ಸಾವನ್ನಪ್ಪಿದ್ದರು. ಈಗ ನಿಫಾ ವೈರಸ್ ನ ಐದನೇ ಪ್ರಕರಣ ವರದಿಯಾಗಿದೆ. 24 ವರ್ಷದ ಆರೋಗ್ಯ ಕಾರ್ಯಕರ್ತರೊಬ್ಬರು ಕೇರಳದ ಐದನೇ ನಿಫಾ ವೈರಸ್ ಸೋಂಕಿಗೆ ತುತ್ತಾಗಿರುವುದು ದೃಢಪಟ್ಟಿದೆ. ಪ್ರಸ್ತುತ ಸೋಂಕಿತರ ಸಂಪರ್ಕಿತರನ್ನು ಪತ್ತೆ ಮಾಡುವ ಕಾರ್ಯ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೋಝಿಕ್ಕೋಡ್‌ನ ಖಾಸಗಿ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಆರೋಗ್ಯ ಕಾರ್ಯಕರ್ತೆಯ ಸ್ಯಾಂಪಲ್‌ಗಳು ಪಾಸಿಟಿವ್ ಆದ ಬಳಿಕ ನಿಫಾ ವೈರಸ್ ಸೋಂಕು ಇರುವುದು ದೃಢಪಟ್ಟಿದೆ ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿಕೆ ನೀಡಿದ್ದಾರೆ. 9 ವರ್ಷದ ಬಾಲಕ ಕೋಝಿಕ್ಕೋಡ್‌ನ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಬೆಂಬಲದಲ್ಲಿದ್ದು, ಆತನ ಸ್ಥಿತಿ ಗಂಭೀರವಾಗಿದೆ ಎಂದು ಜಾರ್ಜ್ ತಿಳಿಸಿದ್ದಾರೆ.
ಈಗಾಗಲೇ ಮಾರಣಾಂತಿಕ ಸೋಂಕಿನಿಂದ ಬಳಲುತ್ತಿರುವ 9 ವರ್ಷದ ಬಾಲಕನನ್ನು ಗುಣಪಡಿಸಲು ಸರ್ಕಾರವು ತನ್ನ ಪ್ರಯತ್ನಗಳನ್ನು ಹೆಚ್ಚಿಸಿದೆ ಮತ್ತು ಲಭ್ಯವಿರುವ ಏಕೈಕ ಆಂಟಿವೈರಲ್ ಚಿಕಿತ್ಸೆಯನ್ನು ನೀಡುವಂತೆ ಆದೇಶಿಸಿದ್ದು, ಮಗುವಿಗೆ ಚಿಕಿತ್ಸೆ ನೀಡಲು ಸರ್ಕಾರ ಐಸಿಎಂಆರ್‌ನಿಂದ ಮೊನೊಕ್ಲೋನಲ್ ಆ್ಯಂಟಿಬಾಡಿಗೆ ಆದೇಶಿಸಿದೆ. ನಿಫಾ ವೈರಸ್ ಸೋಂಕಿಗೆ ಇದು ಲಭ್ಯವಿರುವ ಏಕೈಕ ಆಂಟಿವೈರಲ್ ಚಿಕಿತ್ಸೆಯಾಗಿದೆಯಾದರೂ ಇದು ಇನ್ನೂ ಪ್ರಾಯೋಗಿಕವಾಗಿ ಸಾಬೀತಾಗಿಲ್ಲ