Site icon newsroomkannada.com

ವಾಟ್ಸ್​ಆ್ಯಪ್​​ನಲ್ಲಿ ಬರಲಿದೆ ಹೊಸ ಫೀಚರ್‌: ಅದೇನು ಅಂತೀರಾ ಈ ಸುದ್ದಿ ಓದಿ

ಮುಂಬೈ: ಕಾಲಕಾಲಕ್ಕೆ ತಂತ್ರಜ್ಞಾನವನ್ನು ಅಪ್‌ಡೇಟ್‌ ಮಾಡುವ ಮೂಲಕ ಯೂಸರ್‌ ಫ್ರೆಂಡ್ಲಿಯಾಗಿರುವ ವಾಟ್ಸ್​ಆ್ಯಪ್ ಇದೀಗ ದೊಡ್ಡ ಗ್ರೂಪ್​ಗಳಿಗೆಂದೇ ಹೊಸ ವಾಯ್ಸ್​​ ಚಾಟ್ ಫೀಚರ್ ಅನ್ನು ಪರಿಚಯಿಸುತ್ತಿದೆ. ವಾಟ್ಸ್​​ಆ್ಯಪ್ ಹೊಸ ವಾಯ್ಸ್ ಚಾಟ್ ಫೀಚರ್ ಈಗಾಗಲೇ ಅಸ್ತಿತ್ವದಲ್ಲಿರುವ ಗ್ರೂಪ್​​ ಕಾಲ್​​ಗೆ ಸರಿಸಮನಾಗಿ ಇರಲಿದೆ. ಆದರೆ, ಗ್ರೂಪ್​ನ ಪ್ರತಿಯೊಬ್ಬ ಮೆಂಬರ್​​​ನ ಮೊಬೈಲ್​​ನಲ್ಲಿಯೂ ರಿಂಗ್ ಆಗುವುದಿಲ್ಲ. ಇನ್​ ಚಾಟ್ ಪಾಪ್​ಅಪ್ ನೊಟಿಫಿಕೇಷನ್ ಬರಲಿದ್ದು, ಸದ್ದಿಲ್ಲದೇ ವಾಯ್ಸ್ ಚಾಟ್​​ನಲ್ಲಿ ಸೇರಿಕೊಳ್ಳಬಹುದು. ಹೊಸ ವಾಯ್ಸ್ ಚಾಟ್ ಫೀಚರ್ ಆರಂಭಿಸಲು ಬಳಕೆದಾರರು ಮೊದಲಿಗೆ ಗ್ರೂಪ್​ ಚಾಟ್​ ಅನ್ನು ತೆರೆಯಬೇಕು. ನಂತರ ಸ್ಕ್ರೀನ್​​​ನ ಮೇಲ್ಭಾಗದ ಬಲಬದಿಯಲ್ಲಿರುವ ನೀಲಿ ಬಣ್ಣದ ವಾಯ್ಸ್​ ಚಾಟ್ ಐಕಾನ್​ ಅನ್ನು tap ಮಾಡಬೇಕು. ನಂತರ ಸಂಭಾಷಣೆ ಆರಂಭಿಸಲು ‘Start Voice Chat’ ಆಯ್ಕೆಯನ್ನು tap ಮಾಡಬೇಕು. ಸಂಭಾಷಣೆ ಆರಂಭವಾದ ಬಳಿಕ ಗ್ರೂಪ್​ನ ಸದಸ್ಯರು ಪುಷ್ ನೊಟಿಫಿಕೇಷನ್ ಪಡೆಯುತ್ತಾರೆ.

ಬಳಕೆದಾರರು ತಮಗೆ ಬೇಕೆನಿಸಿದಾಗ ಇತರರಿಗೆ ಅಡ್ಡಿಯಾಗದಂತೆ ಸದ್ದಿಲ್ಲದೇ ವಾಯ್ಸ್​ ಚಾಟ್​ಗೆ ಸೇರಿಕೊಳ್ಳಬಹುದು ಮತ್ತು ನಿರ್ಗಮಿಸಬಹುದಾಗಿದೆ. ಚಾಟ್ ಸ್ಕ್ರೀನ್​ನ ಮೇಲ್ಭಾಗದಲ್ಲಿ (ಚಾಟ್ ಆ್ಯಕ್ಟೀವ್ ಆಗಿದ್ದಾಗ) ಚಾಟ್ ಕಂಟ್ರೋಲ್ ಆಯ್ಕೆ ಲಭ್ಯವಿರಲಿದೆ. ಚಾಟ್​ನಲ್ಲಿ ಭಾಗಿಯಾಗಿರುವವರು ಮತ್ತು ಕೇಳುತ್ತಿರುವವರಿಗೆ ಟೆಕ್ಷ್ಟ್​ ಮೆಸೇಜ್ ಮಾಡಲು ಅವಕಾಶವಿರುತ್ತದೆ. ಚಾಟ್​ನಲ್ಲಿ ಭಾಗವಹಿಸಿರುವವರು ಸ್ಕ್ರೀನ್​ನ ಕೆಳಭಾಗದಲ್ಲಿ ಗೋಚರಿಸುವ ಬ್ಯಾನರ್‌ ಮೂಲಕ ಚಾಟ್​​ನಲ್ಲಿರುವವರ ಪ್ರೊಫೈಲ್‌ಗಳನ್ನು ನೋಡಬಹುದಾಗಿದೆ.

Exit mobile version