ಚಿಕ್ಕಮಗಳೂರು: ಕುದುರೆ ಮುಖ ರಾಷ್ಟ್ರೀಯ ಉದ್ಯಾನವನದೊಳಗಿರುವ ನೇತ್ರಾವತಿ ಪೀಕ್ ಗೆ ಚಾರಣಕ್ಕೆ ಅವಕಾಶ ನೀಡಿದ ಅರಣ್ಯ ಇಲಾಖೆ ಸೀಮಿತ ಸಂಖ್ಯೆಯ ಜನರಿಗೆ ಮಾತ್ರ ಅವಕಾಶ ನೀಡಿರುವುದು ಪ್ರವಾಸಿಗರ ಆಕ್ರೋಶಕ್ಕೆ ಕಾರಣವಾದ ಘಟನೆ ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ಬಸ್ರಿಕಲ್ ಅರಣ್ಯ ಚೆಕ್‌ಪೋಸ್ಟ್‌ನಲ್ಲಿ ನಡೆದಿದೆ.
ನೇತ್ರಾವತಿ ಪೀಕ್ ಗೆ ಪ್ರವಾಸಿಗರು ತೆರಳಲು ಬಸ್ರಿಕಲ್ ಅರಣ್ಯ ಇಲಾಖೆಯಲ್ಲಿ ಹೆಸರು ನೋಂದಣಿ ಮಾಡುವುದು ಅಗತ್ಯ. ನಂತರ ಗೈಡ್‌ಗಳು ಪ್ರವಾಸಿಗರನ್ನು ನೇತ್ರಾವತಿ ಪೀಕ್ ಗೆ ಕರೆದೊಯ್ಯುತ್ತಾರೆ. ಆದರೆ ದಿನಕ್ಕೆ ಮನ್ನೂರು ಮಂದಿಗೆ ಮಾತ್ರ ಚಾರಣಕ್ಕೆ ಪ್ರವೇಶ ಒದಗಿಸಲು ಅರಣ್ಯ ಇಲಾಖೆ ಅನುಮತಿ ನೀಡುತ್ತದೆ. ಆದರೆ ಈ ಮೊದಲೇ ಮುಂಗಡ ಬುಕ್ಕಿಂಗ್ ಮಾಡಿದ ಚಾರಣಿಗರಿಗೂ ಅರಣ್ಯ ಇಲಾಖೆ ಅಧಿಕಾರಿಗಳು ಪ್ರವೇಶ ಅವಕಾಶ ಒದಗಿಸಿಲ್ಲ ಎಂಬ ಆರೋಪ ಎದುರಾಗಿದೆ. ಇದರಿಂದ ಚಾರಣಕ್ಕೆ ಆಗಮಿಸಿದ್ದವರಿಗೆ ನಿರಾಸೆಯಾಗಿದೆ.