ಒರಿಗಾನ್: ಇಲ್ಲಿನ ಯುಜಿನಿಯಲ್ಲಿ (Eugene) ನಡೆದ ಡೈಮಂಡ್ ಲೀಗ್ (Diamond League) 2023ರ ಫೈನಲ್ ನಲ್ಲಿ ಒಲಂಪಿಕ್ (Olympics) ಗೋಲ್ಡ್ ಮೆಡಲಿಸ್ಟ್ ಮತ್ತು ವಿಶ್ವ ಚಾಂಪಿಯನ್ (World Champion) ಜಾವೆಲಿನ್ (Javelin) ಎಸೆತಗಾರ ನೀರಜ್ ಚೋಪ್ರಾ (Neeraj Chopra) ದ್ವಿತೀಯ ಸ್ಥಾನಿಯಾಗಿ ತಮ್ಮ ಸ್ಪರ್ಧೆಯನ್ನು ಮುಗಿಸಿದ್ದಾರೆ.
ಇಲ್ಲಿ ಚಾಂಪಿಯನ್ ಆಗಿ ಮೂಡಿಬಂದಿದ್ದರೆ ನೀರಜ್ ಚೋಪ್ರಾ ಅವರು ಡೈಮಂಡ್ ಟ್ರೋಫಿಯನ್ನು ಉಳಿಸಿಕೊಂಡ ಕೇವಲ ಮೂರನೇ ಸಾಧಕನಾಗಿ ಮೂಡಿ ಬರುತ್ತಿದ್ದರು. ಆದರೆ ಭಾರತೀಯ ಜಾವೆಲಿನ್ ತಾರೆಗೆ ಈ ಅವಕಾಶ ಸ್ವಲ್ಪದರಲ್ಲೇ ತಪ್ಪಿ ಹೋಯಿತು.
ಚೆಕ್ ಗಣರಾಜ್ಯದ ಜಾಕುಬ್ ವದ್ಲೆಚ್ ಈ ಡೈಮಂಡ್ ಟ್ರೋಫಿಯ ಚಾಂಪಿಯನ್ ಆಗಿ ಮೂಡಿಬಂದಿದ್ದಾರೆ.
ಆರು ಜನ ಫೈನಲಿಸ್ಟ್ ಗಳಿದ್ದ ಈ ಪಂದ್ಯಾಟದಲ್ಲಿ ನೀರಜ್ 83.30 ಮೀಟರ್ ದೂರ ಎಸೆದ ಎಸೆತಗಾರಿಕೆ ಬೆಸ್ಟ್ ಥ್ರೋ ಆಗಿ ಮೂಡಿಬಂದರೆ, ಜಾಕುಬ್ 84.24 ಮೀಟರ್ ದೂರ ಬೆಸ್ಟ್ ಎಸೆತಗಾರಿಕೆಯಿಂದ ಚಾಂಪಿಯನ್ ಆಗಿ ಮೂಡಿಬಂದರು.
ಯುಜಿನಿ ಡೈಮಂಡ್ ಲೀಗ್ ಫೈನಲ್ ಗಿಂತ ಮುಂಚೆ ಈ ಪೂರ್ತಿ ಸೀಸನ್ ನಲ್ಲಿ ನೀರಜ್ ಚೋಪ್ರಾ ಅವರ ಬೆಸ್ಟ್ ಎಸೆತಗಾರಿಗೆ 85 ಮೀಟರ್ ದಾಟಿರಲಿಲ್ಲ.
ಎರಡನೇ ಸ್ಥಾನಕ್ಕೆ ಫಿನ್ ಲ್ಯಾಂಡ್ ಒಲಿವರ್ ಹೆಲಾಂಡರ್ 83.74 ಮೀಟರ್ ದೂರ ಬೆಸ್ಟ್ ಎಸೆತಗಾರಿಕೆಯಲ್ಲಿ ಮೂರನೇ ಸ್ಥಾನಿಯಾದರು. ಎರಡನೇ ಸ್ಥಾನಕ್ಕಾಗಿ ನೀರಜ್ ಮತ್ತು ಒಲಿವರ್ ನಡುವೆ ‘ಕ್ಲೋಸ್ ಫೈಟ್’ ಏರ್ಪಟ್ಟಿತ್ತು.
ಟೋಕಿಯೋ ಒಲಂಪಿಕ್ಸ್ ನ ಸಿಲ್ವರ್ ಮೆಡಲಿಸ್ಟ್ ಜಾಕುಬ್ ಪಾಲಿಗಿದು ಮೂರನೇ ಡೈಮಂಡ್ ಟ್ರೋಫಿ ವಿಜಯವಾಗಿದೆ. ಕಳೆದ ತಿಂಗಳು ಮುಕ್ತಾಯಗೊಂಡ ಜ್ಯೂರಿಚ್ ಡೈಮಂಡ್ ಲೀಗ್ ನಲ್ಲಿ ಜಾಕುಬ್ ನೀರಜ್ ಅವರನ್ನು ಮಣಿಸಿ ಚಾಂಪಿಯನ್ ಆಗಿ ಮೂಡಿಬಂದಿದ್ದರು.