main logo

ಕರಾವಳಿ ಮೂಲದ ಅಯ್ಯೋ ಶ್ರದ್ಧಾ’ ಗೆ Most Creative Creator ಪ್ರಶಸ್ತಿ ನೀಡಿದ ಪ್ರಧಾನಿ ನರೇಂದ್ರ ಮೋದಿ!

ಕರಾವಳಿ ಮೂಲದ ಅಯ್ಯೋ ಶ್ರದ್ಧಾ’ ಗೆ Most Creative Creator ಪ್ರಶಸ್ತಿ ನೀಡಿದ ಪ್ರಧಾನಿ ನರೇಂದ್ರ ಮೋದಿ!

ಪ್ರಧಾನಿ ಮೋದಿ ಅವರೇ ‘ಅಯ್ಯೋ.. ಎಂದ ವಿಡಿಯೋ ನೋಡಿ

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶುಕ್ರವಾರ ರಾಷ್ಟ್ರ ರಾಜಧಾನಿಯ ಭಾರತ್ ಮಂಟಪದಲ್ಲಿ ರಾಜ್ಯದ ಪ್ರಖ್ಯಾತ ಆರ್‌ಜೆ ಹಾಗೂ ಕಂಟೆಂಟ್‌ ಕ್ರಿಯೇಟರ್‌ ಆಗಿರುವ ಕರಾವಳಿ ಮೂಲದ ‘ ಅಯ್ಯೋ ಶ್ರದ್ಧಾ’ ಎಂದೇ ಫೇಮಸ್‌ ಆಗಿರುವ ಶ್ರದ್ಧಾ ಜೈನ್‌ ಅವರಿಗೆ ಮಹಿಳಾ ವಿಭಾಗದಲ್ಲಿ ಅತ್ಯಂತ ಸೃಜನಶೀಲ ಕ್ರಿಯೇಟರ್‌ ಎನ್ನುವ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಪುರುಷರ ವಿಭಾಗದಲ್ಲಿ ಈ ಪ್ರಶಸ್ತಿಯನ್ನು ಬುವಾವಾ ಎಂದೇ ಪ್ರಸಿದ್ಧರಾಗಿರುವ ಆರ್‌ಜೆ ರೌನಕ್‌ಗೆ ಈ ಪ್ರಶಸ್ತಿ ನೀಡಲಾಗಿದೆ. ಕೆಲವೊಮ್ಮೆ ರಾಜಕೀಯ ಅಥವಾ ಸಾಮಾಜಿಕ ಸಮಸ್ಯೆಗಳಿಂದಾಗಿ ದೇಶದ ಒಟ್ಟಾರೆ ವಾತಾವರಣ ಹೇಗೆ ಉದ್ವಿಗ್ನವಾಗುತ್ತದೆ ಎನ್ನುವುದನ್ನು ಶ್ರದ್ಧಾ ಈ ವೇಳೆ ಉಲ್ಲೇಖಿಸಿದ್ದಾರೆ. ಈ ಹಂತದಲ್ಲಿ ತಮ್ಮ ಕಂಟೆಂಟ್‌ ಮೂಲಕ ಕಡಿಮೆ ಈ ವಾತಾವರಣವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಪ್ರಯತ್ನ ಪಡುವುದಾಗಿ ತಿಳಿಸಿದ್ದಾರೆ. ಮೊಟ್ಟಮೊದಲ ಬಾರಿಗೆ ಯೂಟ್ಯೂಬ್‌, ಇನ್ಸ್‌ಟಾಗ್ರಾಮ್‌ ಸೇರಿದಂತೆ ಹಲವು ಸೋಶಿಯಲ್‌ ಮೀಡಿಯಾ ವೇದಿಕೆಗಳಲ್ಲಿ ಜನಪರ ಕಂಟೆಂಟ್‌ಗಳ ಮೂಲಕ ಪ್ರಖ್ಯಾತರಾಗಿರುವ ವ್ಯಕ್ತಿಗಳಿಗೆ ನ್ಯಾಷನಲ್‌ ಕ್ರಿಯೇಟರ್‌ ಪ್ರಶಸ್ತಿಯನ್ನು ಪ್ರಧಾನಿ ನರೇಂದ್ರ ಮೋದಿ ವಿತರಣೆ ಮಾಡಿದರು. ಈ ಹಂತದಲ್ಲಿ ಮಾತನಾಡಿದ ಅವರು, ಮುಂದಿನ ಲೋಕಸಭೆ ಚುನಾವಣೆ ಇದೆ ಎನ್ನುವ ಕಾರಣಕ್ಕಾಗಿ ಇದನ್ನು ಮಾಡುತ್ತಿದ್ದೇನೆ ಎಂದು ಕೆಲವರು ಹೇಳ್ತಾರೆ. ಆದರೆ, ಮುಂದಿನ ವರ್ಷ ಶಿವರಾತ್ರಿಗೂ ನಾನೇ ಈ ಪ್ರಶಸ್ತಿ ಪ್ರದಾನ ಮಾಡಲಿದ್ದೇನೆ. ಇದು ಮೋದಿ ಗ್ಯಾರಂಟಿ ಎನ್ನುವ ಮೂಲಕ ಮತ್ತೊಮ್ಮೆ ಅಧಿಕಾರಕ್ಕೇರುವ ವಿಶ್ವಾಸ ವ್ಯಕ್ತಪಡಿಸಿದರು.

ಶ್ರದ್ಧಾ ಅವರನ್ನು ವೇದಿಕೆಗೆ ಸ್ವಾಗತಿಸುವ ವೇಳೆ ಸ್ವತಃ ಪ್ರಧಾನಿ ಮೋದಿ ಅವರೇ ‘ಅಯ್ಯೋ..’ ಎಂದು ಹೇಳಿದ್ದು ವಿಶೇಷವಾಗಿತ್ತು. ಇಡೀ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅತ್ಯಂತ ಮನರಂಜನಾತ್ಮಕವಾಗಿದ್ದರು. ಕಂಟೆಂಟ್‌ ಕ್ರಿಯೆಟರ್‌ಗೆ ಅಗತ್ಯವಾಗಿದ್ದ ಮಾತುಗಳು ಮೋದಿ ಅವರಿಂದ ಸರಾಗವಾಗಿ ಬರುತ್ತಿದ್ದವು. ಹೆಚ್ಚಿನ ಎಲ್ಲಾ ಕಂಟೆಂಟ್‌ ಕ್ರಿಯೆಟರ್‌ಗಳು ವೇದಿಕೆಗೆ ಬರುವಾಗ ಅವರ ಕಾರ್ಯಕ್ರಮದ ವಿಶೇಷತೆಗಳನ್ನು ಮೋದಿ ಹೇಳುತ್ತಿದ್ದರು. ಅದರೊಂದಿಗೆ ತಾವು ಸ್ಪೂರ್ತಿದಾಯಕ ಅಂಶಗಳಿರುವ ಕಂಟೆಂಟ್‌ಗಳನ್ನೇ ಇಷ್ಟಪಡುವುದಾಗಿ ತಿಳಿಸಿದರು.

Related Articles

Leave a Reply

Your email address will not be published. Required fields are marked *

error: Content is protected !!