ಮಂಗಳೂರು: ಸರ್ಕಾರ ಜನರ ಭಾವನೆಗಳಿಗೆ ವಿರುದ್ಧವಾಗಿ ಹೋದಲ್ಲಿ ಜಿಲ್ಲೆಯಲ್ಲಿ ಅಶಾಂತಿಯ ವಾತಾವರಣ ನಿರ್ಮಾಣವಾಗುವುದು ಖಂಡಿತ ಎಂದು ಸಂಸದ ನಳಿನ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ದೇಶದಲ್ಲಿ ಗೋ ಸಂಸ್ಕೃತಿ ಇದೆ, ಕೃಷಿ, ಜೀವನ,ಆರಾಧನೆ ಎಲ್ಲದಕ್ಕೂ ಗೋವು ಆಧಾರವಾಗಿದೆ. ಗೋ ರಕ್ಷಣೆಗಾಗಿ ಬಿಜೆಪಿ ಗೋ ಹತ್ಯೆ ನಿಷೇಧ ಕಾನೂನು ಜಾರಿ ಮಾಡಿತ್ತು ಮಹಾತ್ಮಾ ಗಾಂಧಿಯೂ ಗೋಸಂರಕ್ಷಣೆ ಆಗಬೇಕೆಂದು ಹೇಳಿದ್ದರು.
ಕೆಲ ಆಚರಣೆ ವೇಳೆ ಗೋ ಹತ್ಯೆ ಆಗುತ್ತಿದೆ. ಗೋವುಗಳ ರಕ್ಷಣೆಗಾಗಿ ನಾವು ಕಾನೂನು ತಂದಿದ್ದೆವು. ಕಾನೂನು ಜಾರಿಯಲ್ಲಿರುವಾಗ ಗೋ ಕಳ್ಳತನ, ಗೋ ಹತ್ಯೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.
ಈ ಬಗ್ಗೆ ಪ್ರಿಯಾಂಕ ಖರ್ಗೆ ಎಚ್ಚರಿಕೆಯಿಂದ ಮಾತನಾಡಬೇಕು. ಜನರ ಆಶಯಗಳಿಗೆ ಸರ್ಕಾರ ಗೌರವ ನೀಡಬೇಕು. ಪೊಲೀಸರೂ ಗೋ ಹಂತಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಜನರ ಭಾವನೆಗಳಿಗೆ ವಿರುದ್ಧವಾದ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಹೀಗಾದಲ್ಲಿ ಜಿಲ್ಲೆಯಲ್ಲಿ ಅಶಾಂತಿ ನಿರ್ಮಾಣ ಆಗುವುದು ಖಂಡಿತ ಎಂದು ತಿಳಿಸಿದರು.