ಮಂಗಳೂರು: ಕರಾವಳಿಯಾದ್ಯಂತ ನಾಗರ ಪಂಚಮಿ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಈ ಬಾರಿ ನಾಗರ ಪಂಚಮಿ ಆಚರಣೆ ಸಂದರ್ಭ ಮಳೆರಾಯ ಸಂಪೂರ್ಣ ಬಿಡುವು ನೀಡಿದ್ದು ವಿಶೇಷವಾಗಿತ್ತು.
ಭಕ್ತಾದಿಗಳು ತಮ್ಮ ತಮ್ಮ ಕುಟುಂಕ್ಕೆ ಸಂಬಂಧಿಸಿದ ನಾಗ ಬನಗಳಲ್ಲಿ, ಪ್ರಮುಖ ನಾಗ ಕ್ಷೇತ್ರಗಳಲ್ಲುಮತ್ತು ಸುಬ್ರಹ್ಮಣ್ಯ ದೇವಸ್ಥಾನಗಳಲ್ಲಿ ಹೂ-ಹಿಂಗಾರ-ಹಾಲು-ಸಿಯಾಳಗಳೊಂದಿಗೆ ತೆರಳಿ ಪೂಜೆ ಸಲ್ಲಿಸಿದರು.
ಮಂಗಳೂರು ಹೊರ ವಲಯದಲ್ಲಿರುವ ಕುಡುಪು ಅನಂತ ಪದ್ಮನಾಭ ದೇವಸ್ಥಾನದಲ್ಲಿ ಬೆಳಿಗ್ಗಿನಿಂದಲೇ ಭಕ್ತರು ಸಾಲುಗಟ್ಟಿ ನಿಂತು ನಾಗ ದೇವರಿಗೆ ಹಾಲು-ಸಿಯಾಳ-ಹಿಂಗಾರ ಸಮರ್ಪಿಸಿ ಕೃತಾರ್ಥರಾದರು.
ನಾಗಾರಾಧನೆಯಲ್ಲಿ ಸಾವಿರಾರು ವರ್ಷಗಳ ಇತಿಹಾಸವನ್ನು ಹೊಂದಿರುವ ಕುಡುಪು ದೇವಸ್ಥಾನವು ಸಂತಾನ ಪ್ರಾಪ್ತಿ, ಸರ್ಪ ದೋಷ ನಿವಾರಣೆಗೆ ಹೆಸರು ವಾಸಿಯಾಗಿರುವ ಕ್ಷೇತ್ರವಾಗಿದೆ.