ಮಂಗಳೂರು: ಜ.19 ರಂದು “ಸಂಗೀತ್ ಬಹಾರ್” ಇವೆಂಟ್ಸ್ (ರಿ) ಇದರ ಸೇವಾ ಯೋಜನೆಯ ಅಂಗವಾಗಿ “ಯಾದೇಂ” ರಿಮೆಂಬರಿಂಗ್ ಎಂಬ ಹಳೆಯ ಸುಮಧುರ ಗೀತೆಗಳ ರಸಮಂಜರಿ ಕಾರ್ಯಕ್ರಮ ಮಂಗಳೂರಿನ ಕುದ್ಮುಲ್ ರಂಗರಾವ್ ಸಭಾಂಗಣದಲ್ಲಿ ಸಂಜೆ 5 ರಿಂದ ನಡೆಯಲಿದೆ ಎಂದು ಸಂಗೀತ್ ಬಹಾರ್ ಸಂಸ್ಥೆ ಪ್ರಧಾನ ಕಾರ್ಯದರ್ಶಿ ರವೀಂದ್ರ ಪ್ರಭು ತಿಳಿಸಿದರು,
ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು ಕಾರ್ಯಕ್ರಮದಲ್ಲಿ ಜಿಲ್ಲೆಯ ಹಾಗೂ ರಾಜ್ಯದ ಖ್ಯಾತ ಸಂಗೀತ ಕಲಾವಿದರು ಭಾಗವಹಿಸಲಿದ್ದಾರೆ. ವಿಶಿಷ್ಟ ಸಾಮರ್ಥದ ಮಕ್ಕಳ ಸಹಾಯಾರ್ಥವಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಕಾರ್ಯಕ್ರಮಕ್ಕೆ ಉಚಿತ ಪ್ರವೇಶವಿರುತ್ತದೆ. ಈ ಕಾಯಕ್ರಮದಲ್ಲಿ ಸಂಗ್ರಹವಾಗುವ ಮೊತ್ತವನ್ನು ನಗರದ ಸಾನಿಧ್ಯ ಶಾಲೆಗೆ ನೀಡಲಾಗುವುದು ಎಂದರು. ಕಾರ್ಯಕ್ರಮ ಸಾಯಂಕಾಲ 5ರಿಂದ 9ರವರೆಗೆ ನಡೆಸಯಲಿದೆ ಎಂದು ವಿವರಿಸಿದರು.
ಬಹುಮಾನ ಅವಕಾಶ: ಆಗಮಿಸುವ ಸಂಗೀತಾಭಿಮಾನಿಗಳಿಗೆ ಅದೃಷ್ಟ ಚೀಟಿ ಇರಲಿದೆ. ವಿಜೇತರಿಗೆ ಚಿನ್ನದ ಉಂಗುರ, ಬೆಳ್ಳಿಯ ಉಂಗುರ ಹಾಗೂ ಇನ್ನಿತರ ಆಕರ್ಷಕ ಬಹುಮಾನಗಳನ್ನು ಗೆಲ್ಲುವ ಅವಕಾಶ ಇರುತ್ತದೆ ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಸ್ಥೆ ಪ್ರಧಾನ ಕಾರ್ಯದರ್ಶಿ ರವೀಂದ್ರ ಪ್ರಭು, ಖಾಲಿದ್ ಅಖ್ತರ್, ದಾಮೋದರ ಶೈಣೈ, ಸೀಮಾ ಶೈಣೈ ಸುದ್ದಿಗೋಷ್ಠಿಯಲ್ಲಿದ್ದರು.