ಮಂಗಳೂರು: ಕರಾವಳಿ ಸಂಗೀತ ಕಲಾವಿದರ ಒಕ್ಕೂಟದ ಸೆ.17ರ ಸ್ವರಕುಡ್ಲ ಸಂಗೀತ ಸ್ಪರ್ಧೆ ಹಾಗೂ ಸೆ.23 ಪುರ ಭವನದಲ್ಲಿ ಜರಗಲಿರುವ ವಾರ್ಷಿಕೋತ್ಸವದ ಆಮಂತ್ರಣ ಪತ್ರಿಕೆಯನ್ನು ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ಹಿರಿಯ ಅರ್ಚಕರು ಶ್ರೀ ವಾಸುದೇವ ಐತಾಳ್ ಅವರು ಬಿಡುಗಡೆಗೊಳಿಸಿದರು. ಕಾರ್ಯಕ್ರಮ ದಲ್ಲಿ ಉಪಾಧ್ಯಕ್ಷರು ಶ್ರೀ ಐವನ್ ಡಿಸೋಜ, ಪ್ರಧಾನ ಕಾರ್ಯದರ್ಶಿ ದೀಪಕ್ ರಾಜ್ ಉಳ್ಳಾಲ್, ಜೊತೆ ಕಾರ್ಯದರ್ಶಿ ಮಲ್ಲಿಕಾ ಶೆಟ್ಟಿ, ಗೌರವ ಸಲಹೆಗಾರರು ಮಾಜಿ ಅಧ್ಯಕ್ಷರು ಶ್ರೀ ಪುಷ್ಕಳ ಕುಮಾರ್ ತೋನ್ಸೆ, ನಿಕಟ ಪೂರ್ವ ಅಧ್ಯಕ್ಷರು ಶ್ರೀ ರಮೇಶ್ ಸಾಲಿಯನ್ ಮಾಜಿ ಉಪಾಧ್ಯಕ್ಷರು ಶ್ರೀ ಕೇಶವ ಕನಿಲ ಭಾಗವಹಿಸಿದ್ದರು