main logo

ಪತ್ನಿಗೆ ಅಕ್ರಮ ಸಂಬಂಧದ ಅನುಮಾನ, ಗೌತಮ್ ಮಾಡಿದ ಅಮಾನವೀಯ ಕೃತ್ಯ

ಪತ್ನಿಗೆ ಅಕ್ರಮ ಸಂಬಂಧದ ಅನುಮಾನ, ಗೌತಮ್ ಮಾಡಿದ ಅಮಾನವೀಯ ಕೃತ್ಯ

ಪತ್ನಿಗೆ ಅಕ್ರಮ ಸಂಬಂಧವಿದೆ ಎಂದು ಅನುಮಾನಿಸಿ ವ್ಯಕ್ತಿಯೊಬ್ಬ ಕೋಪದ ಕೈಗೆ ಬುದ್ಧಿಕೊಟ್ಟು ಪತ್ನಿಯ ತಲೆಯನ್ನು ಕಡಿದು, ರುಂಡವನ್ನು ಹಿಡಿದುಕೊಂಡು ಬೀದಿಯಲ್ಲಿ ಮೆರವಣಿಗೆ ಮಾಡಿದ್ದಾನೆ. ಪಶ್ಚಿಮ ಬಂಗಾಳದ ಪೂರ್ವ ಮಿಡ್ನಾಪುರ ಜಿಲ್ಲೆಯ ಪಟಾಶಪುರದಲ್ಲಿ ಬುಧವಾರ (ಫೆಬ್ರವರಿ 14) ಈ ಆಘಾತಕಾರಿ ಘಟನೆ ನಡೆದಿದ್ದು, ಗೌತಮ್ ಗುಚೈತ್ ಎಂಬವನು ತನ್ನ ಪತ್ನಿಯ ರುಂಡವನ್ನು ಕತ್ತರಿಸಿ, ರುಂಡವನ್ನು ಹಿಡಿದುಕೊಂಡು ಊರಿಡಿ ಮೆರವಣಿಗೆ ಮಾಡಿದ್ದಾನೆ. ಈ ದೃಶ್ಯವನ್ನು ಕಣ್ಣಾರೆ ಕಂಡ ಸ್ಥಳೀಯರು ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಸ್ಥಳೀಯರಿಂದ ಮಾಹಿತಿ ಪಡೆದ ಪಟಾಶಪುರ ಠಾಣೆ ಪೋಲೀಸರು ತಕ್ಷಣ ಆಗಮಿಸಿ ಆತನನ್ನು ಬಂಧಿಸಿದ್ದಾರೆ. ಗೌತಮ್ ಮೊದಲು ಮಾರಕಾಸ್ತ್ರದಿಂದ ಪತ್ನಿ ಫುಲ್ರಾಣಿ ಗುಚೈತ್ ತಲೆ ಕಡಿದು, ರುಂಡವನ್ನು ಹಿಡಿದು ಸಾರ್ವಜನಿಕವಾಗಿ ಬೀದಿಗಳಲ್ಲಿ ತಿರುಗಾಡಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ವೃತ್ತಿಯಲ್ಲಿ ಬೀದಿ ಬದಿ ವ್ಯಾಪಾರಿಯಾಗಿರುವ ಗೌತಮ್ ಗುಚೈತ್ ಕಳೆದ ಕೆಳದಿನಗಳಿಂದ ಪತ್ನಿಗೆ ಅಕ್ರಮ ಸಂಬಂಧವಿದೆಯೆಂದು ಅನುಮಾನಿಸಿ ಆಕೆಯ ಜೊತೆ ದಿನನಿತ್ಯ ಜಗಳವಾಡುತ್ತಿದ್ದ. ಹೀಗೆ ಮೊನ್ನೆ ಬುಧವಾರ (ಫೆಬ್ರವರಿ 14) ಕೋಪದ ಕೈಗೆ ಬುದ್ಧಿ ಕೊಟ್ಟು ಪತ್ನಿಯ ತಲೆಯನ್ನೇ ಕಡಿದಿದ್ದಾನೆ. ತುಂಡರಿಸಿದ ತಲೆ ಹಾಗೂ ಕೊಲೆ ಮಾಡಲು ಬಳಸಿದ ಆಯುಧವನ್ನು ವಶಪಡಿಸಿಕೊಂಡ ಪೋಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಜೊತೆಗೆ ಆರೋಪಿಯ ಪೋಷಕರನ್ನೂ ವಿಚಾರಣೆಗೆ ಒಳಪಡಿಸಿದ್ದಾರೆ.

Related Articles

Leave a Reply

Your email address will not be published. Required fields are marked *

error: Content is protected !!