Site icon newsroomkannada.com

ಅಂಬಾನಿ ಮಗನ ಮದುವೆಗೆ ಬಂದ ಗಾಯಕಿ ರಿಯಾನಾಗೆ 74 ಕೋಟಿ ರೂಪಾಯಿ ಸಂಭಾವನೆ

ಮುಕೇಶ್​ ಅಂಬಾನಿ ಅವರ ಮನೆಯಲ್ಲಿ ಶುಭ ಕಾರ್ಯ ನಡೆಯುತ್ತಿದೆ ಎಂದರೆ ಅದಕ್ಕೆ ಬಹುಕೋಟಿ ರೂಪಾಯಿ ಖರ್ಚಾಗುತ್ತದೆ. ದೇಶ ವಿದೇಶದ ಸೆಲೆಬ್ರಿಟಿಗಳು ಬಂದು ಮನರಂಜನಾ ಕಾರ್ಯಕ್ರಮ ನೀಡುತ್ತಾರೆ. ಅಂಥ ಸೆಲೆಬ್ರಿಟಿಗಳಿಗೆ ದೊಡ್ಡ ಮೊತ್ತದ ಸಂಭಾವನೆ ನೀಡಲಾಗುತ್ತದೆ. ಈಗ ಜನಪ್ರಿಯ ಗಾಯಕಿ ರಿಯಾನಾ ಅವರು ಭಾರತಕ್ಕೆ ಬಂದಿದ್ದಾರೆ. ಮುಕೇಶ್​ ಅಂಬಾನಿ ಹಾಗೂ ನೀತಾ ಅಂಬಾನಿ ದಂಪತಿಯ ಕಿರಿಯ ಪುತ್ರ ಅನಂತ್​ ಅಂಬಾನಿ ಮದುವೆಯಲ್ಲಿ ಮನರಂಜನೆ ನೀಡಲು ರಿಯಾನಾ ಅವರನ್ನು ಕರೆಸಲಾಗಿದೆ. ಅವರಿಗೆ ಬರೋಬ್ಬರಿ 74 ಕೋಟಿ ರೂಪಾಯಿ ಸಂಭಾವನೆ ನೀಡಲಾಗಿದೆ ಎಂದು ವರದಿ ಆಗಿದೆ. ಈ ಸುದ್ದಿ ಕೇಳಿ ಎಲ್ಲರೂ ಹೌಹಾರಿದ್ದಾರೆ.

ರಿಯಾನಾ ಅವರಿಗೆ ವಿಶ್ವಾದ್ಯಂತ ಅಭಿಮಾನಿಗಳು ಇದ್ದಾರೆ. ಅವರ ಹಾಡುಗಳು ಸೂಪರ್​ ಹಿಟ್​ ಆಗಿವೆ. ರಿಯಾನಾ ಅವರ ಬಗ್ಗೆ ಯುವ ಜನತೆಗೆ ಸಿಕ್ಕಾಪಟ್ಟೆ ಕ್ರೇಜ್​ ಇದೆ. ಅನಂತ್​ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್​ ಅವರ ಮದುವೆಯಲ್ಲಿ ರಿಯಾನಾ ಮನರಂಜನಾ ಕಾರ್ಯಕ್ರಮ ನೀಡಲಿದ್ದಾರೆ. ದೂರದ ಬಾರ್ಬೆಡೋಸ್​ ದೇಶದಿಂದ ಬಂದಿರುವ ಅವರಿಗೆ ಈಗ 36 ವರ್ಷ. ವಿಶ್ವದ ಅತಿ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ರಿಯಾನಾ ಹೆಸರು ಕೂಡ ಇದೆ.

ಶ್ರೀಮಂತರ ಮದುವೆಗಳಲ್ಲಿ ಸೆಲೆಬ್ರಿಟಿಗಳು ಮನರಂಜನೆ ನೀಡುವುದು ಕಾಮನ್​. ಮುಕೇಶ್​ ಅಂಬಾನಿ ಅವರು ನೇರವಾಗಿ ವಿದೇಶದ ಟಾಪ್​ ಗಾಯಕರನ್ನು ಆಹ್ವಾನಿಸಿದ್ದಾರೆ. ಅವರಿಗೆ ಹತ್ತಾರು ಕೋಟಿ ರೂಪಾಯಿ ಸಂಭಾವನೆ ನೀಡುತ್ತಿದ್ದಾರೆ. ಸಿಂಗರ್​ ರಿಯಾನಾ ಅವರು ಕೇವಲ ಒಂದು ದಿನ ಸಂಗೀತ ಕಾರ್ಯಕ್ರಮ ನೀಡಲು 74 ಕೋಟಿ ರೂಪಾಯಿ ಪಡೆಯುತ್ತಿದ್ದಾರೆ ಎಂಬುದು ಅಚ್ಚರಿಯ ವಿಚಾರ.

Exit mobile version