main logo

ಅಪಘಾತದಿಂದ ಪುತ್ರ ಆಸ್ಪತ್ರೆಗೆ ದಾಖಲಾದ ಬೆನ್ನಲ್ಲೇ ತಾಯಿ ನೇಣಿಗೆ ಶರಣು..!

ಅಪಘಾತದಿಂದ ಪುತ್ರ ಆಸ್ಪತ್ರೆಗೆ ದಾಖಲಾದ ಬೆನ್ನಲ್ಲೇ ತಾಯಿ ನೇಣಿಗೆ ಶರಣು..!

ಪುತ್ತೂರು: ಅಪಘಾತದಲ್ಲಿ ಗಾಯಗೊಂಡು ಪುತ್ರ ಆಸ್ಪತ್ರೆಗೆ ದಾಖಲಾದ ಬೆನ್ನಲ್ಲೇ ತಾಯಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಪುತ್ತೂರಿನ ಪುರುಷರಕಟ್ಟೆ ಇಂದಿರಾನಗರದಲ್ಲಿ ಸಂಭವಿಸಿದೆ.

ಮೃತ ಮಹಿಳೆಯನ್ನು ಇಂದಿರಾನಗರದ ದಿ| ಪ್ರವೀಣ್‌ ಅವರ ಪತ್ನಿ ಕಾವ್ಯಾ (38) ಎಂದು ಗುರುತಿಸಲಾಗಿದೆ. ಪ್ರವೀಣ್‌ ಕೂಡ 7 ವರ್ಷಗಳ ಹಿಂದೆ ಆತ್ಮಹತ್ಯೆಗೆ ಶರಣಾಗಿದ್ದರು. ಇದೀಗ ಅದೇ ಸ್ಥಳದಲ್ಲಿ ಕಾವ್ಯಾ ಕೂಡ ಸಾವಿಗೀಡಾಗಿದ್ದಾರೆ.

ಪುತ್ರನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ : ಜೂ.30ರಂದು ಬೆದ್ರಾಳ ಸಮೀಪ ಸಂಭವಿಸಿದ ಅಪಘಾತವೊಂದರಲ್ಲಿ ಕಾವ್ಯ ಅವರ ಪುತ್ರ ಪ್ರತೀಕ್‌ ತೀವ್ರ ಗಾಯಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರ ಬೆನ್ನಲ್ಲೇ ಕಾವ್ಯಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರು ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ.

Related Articles

Leave a Reply

Your email address will not be published. Required fields are marked *

error: Content is protected !!