Site icon newsroomkannada.com

ಹೂಕೋಸು ಕಿತ್ತಿದ್ದಕ್ಕೆ ತಾಯಿಯನ್ನೆ ವಿದ್ಯುತ್‌ ಕಂಬಕ್ಕೆ ಕಟ್ಟಿ ಥಳಿಸಿದದ ಪಾಪಿ ಮಗ

ಒಡಿಶಾ: ಕೃಷಿ ಭೂಮಿಯಲ್ಲಿ ಹೂಕೋಸು ಕಿತ್ತಿದ್ದಕ್ಕೆ ಮಗನೊಬ್ಬ ತಾಯಿಯನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಥಳಿಸಿರುವ ಹೃದಯ ವಿದ್ರಾವಕ ಘಟನೆ ಒಡಿಶಾದಲ್ಲಿ ನಡೆದಿದೆ. 70 ವರ್ಷದ ಮಹಿಳೆ ಸರಸಪಸಿ ಗ್ರಾಮದ ತನ್ನ ಕಿರಿಯ ಮಗನ ಜಮೀನಿನಿಂದ ಹೂಕೋಸು ತಂದು ತಿಂದ ಬಳಿಕ ವಿವಾದ ಉಂಟಾಗಿದೆ. ವಾಗ್ವಾದ ಹೆಚ್ಚಾಗುತ್ತಿದ್ದಂತೆ ಆಕೆಯ ಮಗ ಆಕೆಯನ್ನು ವಿದ್ಯುತ್ ಕಂಬಕ್ಕೆ ಕಟ್ಟಿಹಾಕಿ ಥಳಿಸಿದ್ದಾನೆ.

ಮಧ್ಯಪ್ರವೇಶಿಸಲು ಯತ್ನಿಸಿದ ಗ್ರಾಮಸ್ಥರಿಗೆ ಮಗ ಬೆದರಿಕೆಯೊಡ್ಡಿದ್ದ, ಮಹಿಳೆಯನ್ನು ರಕ್ಷಿಸಿ ಬಾಸುದೇವಪುರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗಾಗಿ ಕಳುಹಿಸಲಾಗಿದೆ ಎಂದು ಗ್ರಾಮಸ್ಥರು ಪೊಲೀಸರಿಗೆ ತಿಳಿಸಿದ್ದಾರೆ.

Exit mobile version