newsroomkannada.com

ವಿದ್ಯಾರ್ಥಿಯನ್ನು ಅಪಹರಿಸಿ ಹಿಗ್ಗಾ-ಮುಗ್ಗ ಥಳಿತ – ಗಾಂಜಾ ನಶೆಯಲ್ಲಿ ಕೃತ್ಯ ಎಸಗಿದರೇ ಆರೋಪಿಗಳು?

ಮಂಗಳೂರು: ವಿದ್ಯಾರ್ಥಿಗಳ ಗುಂಪೊಂದು ಇನ್ನೋರ್ವ ವಿದ್ಯಾರ್ಥಿಗೆ ಥಳಿಸಿದ ಘಟನೆ ಅಡ್ಯಾರ್ ಬಳಿ ನಡೆದಿದೆ. ನಗರದ ಸಂತ ಅಲೋಶಿಯಸ್ ಕಾಲೇಜಿನಲ್ಲಿ ವ್ಯಾಸಾಂಗ ಮಾಡುತ್ತಿರುವ ಕಾಸರಗೋಡು ಉಪ್ಪಳ ನಿವಾಸಿ ಇಬ್ರಾಹಿಂ ಪಾಹಿಂ ಎಂಬಾತನಿಗೆ ಗಾಂಜಾ ನಶೆಯಲ್ಲಿದ್ದ ವಿದ್ಯಾರ್ಥಿಗಳ ತಂಡ ಹಲ್ಲೆ ನಡೆಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಅನಾನ್ ಹಾಗೂ ತಹೀಶ್ ನೇತೃತ್ವದ ತಂಡ ಈ ಹಲ್ಲೆ ನಡೆಸಿದ್ದು, ಹುಡುಗಿಯೊಬ್ಬಳ ವಿಚಾರಕ್ಕೆ ಸಂಬಂಧಿಸಿದಂತೆ ಈ ಹಲ್ಲೆ ನಡೆದಿದೆ ಎಂಬ ಮಾಹಿತಿ ಇದೀಗ ಲಭ್ಯವಾಗಿದೆ.

ಇಬ್ರಾಹಿಂ ಪಾಹಿಂನನ್ನು ಅಪಹರಿಸಿದ ತಂಡ ಬಳಿಕ ಅತನನ್ನು ಅಡ್ಯಾರ್ ಬಳಿಯ ಫ್ಲ್ಯಾಟ್ ಒಂದಕ್ಕೆ ಕರೆದೊಯ್ದು ಅಲ್ಲಿ ಆತನಿಗೆ ಹಿಗ್ಗಾಮುಗ್ಗ ಥಳಿಸಿದ್ದಾರೆ. ಈ ಸಂದರ್ಭದಲ್ಲಿ ಆರೋಪಿಗಳು ಗಾಂಜಾ ನಶೆಯಲ್ಲಿದ್ದರು ಎಂಬ ಮಾಹಿತಿಯೂ ಇದೀಗ ಲಭ್ಯವಾಗಿದೆ.

ಸದ್ಯ ಹಲ್ಲೆಗೊಳಗಾದ ಯುವಕ ಅಪಾಯದಿಂದ ಪಾರಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಬಂದರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ಓರ್ವ ಆರೊಪಿಯನ್ನು ಬಂಧಿಸಲಾಗಿದ್ದುಉಳಿದವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

Exit mobile version