ಮೂಡುಬಿದಿರೆ: ನೈತಿಕ ಪೊಲೀಸ್ ಗಿರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಇಲ್ಲಿನ ರಾಜೀವ್ ಗಾಂಧಿ ಸಂಕೀರ್ಣದ ಎದುರು ಕಾಲೇಜು ವಿದ್ಯಾರ್ಥಿನಿಯನ್ನು ಮಾತನಾಡಿಸಿದ್ದ ಕಾರಣಕ್ಕೆ ಅನ್ಯಕೋಮಿನ ವಿದ್ಯಾರ್ಥಿಯ ಮೇಲೆ ಆ.22ರಂದು ಹಲ್ಲೆ ನಡೆಸಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಅಭಿಲಾಷ್, ಪ್ರೇಮ್ ಭಂಡಾರಿ ಮತ್ತು ಸಂಜಯ್ ಎಂಬುವವರನ್ನು ಮೂಡುಬಿದಿರೆ ಪೊಲೀಸರು ಬಂಧಿಸಿದ್ದಾರೆ.
ಇಲ್ಲಿನ ಖಾಸಗಿ ಕಾಲೇಜಿನ ವಿದ್ಯಾರ್ಥಿನಿ ಆ.22ರಂದು ರಾತ್ರಿ ಬೆಂಗಳೂರು ಬಸ್ಸಿಗಾಗಿ ಕಾಯುತ್ತಿದ್ದ ಸಂದರ್ಭದಲ್ಲಿ ಕೋಟೆಬಾಗಿಲು ಸಮೀಪದ ಅನ್ಯಕೋಮಿನ ವಿದ್ಯಾರ್ಥಿಯೊಬ್ಬ ಈ ವಿದ್ಯಾರ್ಥಿನಿಯ ಜೊತೆ ಮಾತನಾಡಿದ್ದಾನೆ.
ಯುವತಿ ಬಸ್ಸು ಹತ್ತಿ ತೆರಳಿದ ಬಳಿಕ ಆ ಅನ್ಯಕೋಮಿನ ವಿದ್ಯಾರ್ಥಿಯನ್ನು ಹಿಂಬಾಲಿಸಿಕೊಂಡು ಬಂದ ಮೂವರು ಯುವಕರು ಇಲ್ಲಿನ ರಾಜೀವ ಗಾಂಧಿ ಸಂಕೀರ್ಣದ ಬಳಿ ಆತನ ಮೇಲೆ ಹಲ್ಲೆ ನಡೆಸಿದ್ದರು.
ಇದೀಗ ಈ ಘಟನೆಗೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದು ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.