ಮಂಗಳೂರು: ಸ್ನೇಹಿತೆಯೊಂದಿಗೆ ಊಟ ಮಾಡಿ ಹೊರಡುತ್ತಿದ್ದ ಪತ್ರಕರ್ತರೊಬ್ಬರಿಗೆ “ನೈತಿಕ ಪೊಲೀಸ್” ನಡೆಸಿದ ಪ್ರಕರಣ ವರದಿಯಾಗಿದೆ. ಈ ಸಂಬಂಧ ಖಾಸಗಿ ವೆಬ್ಸೈಟ್ ವರದಿಗಾರ ಅಭಿಜಿತ್ ದೂರು ದಾಖಲಿಸಿದ್ದಾರೆ.
ಏನಾಗಿತ್ತು: ಜುಲೈ 28 ರಂದು, ಅಭಿಜಿತ್ ತನ್ನ ಸ್ನೇಹಿತೆಯೊಂದಿಗೆ ರೆಸ್ಟೋರೆಂಟ್ಗೆ ಹೋಗಿದ್ದರು. ಈ ವೇಳೆ ಸ್ಥಳಕ್ಕೆ ಬಂದ ಆರೋಪಿಗಳು ಅಭಿಜಿತ್ ನನ್ನು ಮುಸ್ಲಿಂ ಎಂದು ಭಾವಿಸಿ ನೀನು ಬ್ಯಾರಿ ಹಿಂದೂ ಹುಡುಗಿಯ ಜೊತೆ ಏನು ಮಾಡುತ್ತಿದ್ದೀಯಾ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಅಭಿಜಿತ್ ನಾನು ಬ್ಯಾರಿ ಅಲ್ಲ ಹಿಂದೂ ಎಂದು ಹೇಳಿದರೂ ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ. ಅಲ್ಲದೆ ಜೊತೆಗಿದ್ದ ಯುವತಿಗೂ ನಿಂದಿಸಿದ್ದಾರೆ. ಅಲ್ಲದೆ ಹಲ್ಲೆಗೂ ಯತ್ನಿಸಿದ್ದಾರೆ ಎಂದು ದೂರಲಾಗಿದೆ. ಈ ಸಂಬಂಧ ಕಾವೂರು ಪೊಲೀಸರು ಇಬ್ಬರನ್ನು ಬಂಧಿಸಿದ್ದು, ಕೋಟೆಕಾರು ನಿವಾಸಿ (7) ಚೇತನ್ ಮತ್ತು ಯೆಯ್ಯಾಡಿ ನಿವಾಸಿ (43) ನವೀನ್ ಎಂದು ಗುರುತಿಸಲಾಗಿದೆ. ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.