ಬೆಳ್ತಂಗಡಿ: ಧರ್ಮಸ್ಥಳ ದ್ವಾರದ ಬಳಿ ಬಸ್ ನಿಲ್ದಾಣದಲ್ಲಿ ನೈತಿಕ ಪೊಲೀಸ್ ಗಿರಿ ನಡೆದಿರುವುದಾಗಿ ವರದಿಯಾಗಿದೆ. ಬೆಳ್ತಂಗಡಿಯ ಮುಸ್ಲಿಂ ಆಟೋ ಚಾಲಕನೊಬ್ಬ ರಾತ್ರಿ 9 ಗಂಟೆಗೆ ತನ್ನ ಆಟೋದಲ್ಲಿ ಹಿಂದೂ ಹುಡುಗಿಯನ್ನು ಕೂರಿಸಿಕೊಂಡು ಹೋಗುತ್ತಿದ್ದಾಗ ತಂಡವೊಂದು ತಡೆ್ದು ಉಜಿರೆ ನಿವಾಸಿ ಮೊಹಮ್ಮದ್ ಆಶಿಕ್ (22 ವರ್ಷ) ಎಂಬಾತನ ಮೇಲೆ ಹಲ್ಲೆ ನಡೆಸಿದೆ ಎಂದು ತಿಳಿದು ಬಂದಿದೆ. ಸದ್ಯ ಧರ್ಮಸ್ಥಳದಲ್ಲಿ ಪೊಲೀಸ್ ಠಾಣಾ ವ್ಯಾಪಿಯಲ್ಲಿ ಘಟನೆ ನಡೆದಿದೆ.
