main logo

Koppa: 9 ಮಂದಿಗೆ ಮಂಗನ ಕಾಯಿಲೆ

Koppa: 9 ಮಂದಿಗೆ ಮಂಗನ ಕಾಯಿಲೆ

: ಕೊಪ್ಪ (Koppa) ತಾಲೂಕಿನ ಬರೇಗುಂಜಿ ಗ್ರಾಮದ ಏಳು ಜನರಿಗೆ ಮಂಗನ ಕಾಯಿಲೆ (KFD) ಬಂದಿದೆ. ಭಾನುವಾರ ಕಾಡಿಗೆ ಸೌದೆ‌ ತರಲು ಹೋದ 21 ಜನರ ರಕ್ತವನ್ನು ಆರೋಗ್ಯ ಇಲಾಖೆ ಅಧಿಕಾರಿಗಳು (Health Department) ತಪಾಸಣೆ ನಡೆಸಿದ್ದರು. 21 ಜನರಲ್ಲಿ ಏಳು ಮಂದಿಯಲ್ಲಿ ಮಂಗನ ಕಾಯಿಲೆ ದೃಡಪಟ್ಟಿದೆ. ಚಿಕ್ಕಮಗಳೂರು (Chikkamagaluru) ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 19ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಜನವರಿಯಿಂದ ಈವರೆಗೆ 74 ಜನರ ರಕ್ತ ತಪಾಸಣೆ ಮಾಡಲಾಗಿದೆ. ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಮಲೆನಾಡಿನಾದ್ಯಂತ ಕೆಎಫ್​ಡಿ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.

: ಕೆಎಫ್​ಡಿ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಮಲೆನಾಡಿನ ಮೂರು ತಾಲೂಕುಗಳಲ್ಲಿ ಆತಂಕ ಸೃಷ್ಟಿಸಿದೆ. ಶಿವಮೊಗ್ಗ-ಉತ್ತರಕನ್ನಡಕ್ಕೆ ಹೊಂದಿಕೊಂಡಿದೆ. ಇದರಿಂದ ಈ ಭಾಗದಲ್ಲೂ ಪ್ರತಿ ವರ್ಷ ಮಂಗನ ಕಾಯಿಲೆ ಸೋಂಕಿನ ಆತಂಕ ಇದ್ದೇ ಇರುತ್ತದೆ.

ಮಂಗನ ಕಾಯಿಲೆಗೆ 18 ವರ್ಷದ ಯುವತಿ ಸಾವು
ಒಂದು ವಾರದ ಹಿಂದೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಅರಳಿಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ‌ ಬೊಪ್ಪನಮನೆ ಗ್ರಾಮದಲ್ಲಿ ಮಂಗನ ಕಾಯಿಲೆಯಿಂದ 18 ವರ್ಷದ ಯುವತಿ ಮೃತಪಟ್ಟಿದ್ದರು. ಬೊಪ್ಪನೆಮನೆ ಗ್ರಾಮದ ನಿವಾಸಿ ಅನನ್ಯ ಮೃತ ಯುವತಿ. ಇದು ಮಂಗನ ಕಾಯಿಲೆಗೆ ಮೃತಪಟ್ಟ ಮೊದಲ ಪ್ರಕರಣವಾಗಿದೆ. ಚಳಿ ಜ್ವರದಿಂದ ಬಳಲುತ್ತಿದ್ದ ಯುವತಿಗೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಮೂರು ದಿನ ಚಿಕಿತ್ಸೆ ನೀಡಲಾಗಿತ್ತು. ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ್ ಕೆಎಂಸಿ ಆಸ್ಪತ್ರೆಗೆ ಪೋಷಕರು ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೆ ಯುವತಿ ಮೃತಪಟ್ಟಿದ್ದಾಳೆ.

Related Articles

Leave a Reply

Your email address will not be published. Required fields are marked *

error: Content is protected !!