ನವದೆಹಲಿ: ವಿಶ್ವಕಪ್ ಕ್ರಿಕೆಟ್ ನಲ್ಲಿ ಭಾರತ ವಿರುದ್ಧ ಆರು ವಿಕೆಟ್‌ಗಳ ಜಯ ಸಾಧಿಸಿದ ಬಳಿಕ ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮಿನ್ಸ್‌ಗೆ ಕ್ರಿಕೆಟ್ ವಿಶ್ವಕಪ್ ಟ್ರೋಫಿಯನ್ನು ಹಸ್ತಾಂತರಿಸಿದ ನಂತರ ಪ್ರಧಾನಿ ನರೇಂದ್ರ ಮೋದಿ ಕೈಕುಲಕದೇ ವೇದಿಕೆಯಿಂದ ಹಿಂತಿರುಗುತ್ತಿರುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಮೋದಿ ವೇದಿಕೆಯಿಂದ ಹಿಂತಿರುಗುವಾಗ ಕೈಯಲ್ಲಿ ವಿಶ್ವಕಪ್ ಹಿಡಿದು ನಗುತ್ತಿರುವಾಗ ಮೋದಿ ಇನ್ನೊಂದು ಬದಿಗೆ ಹೋಗುತ್ತಿರುವುದನ್ನು ವಿಡಿಯೊದಲ್ಲಿ ಕಾಣಬಹುದು. ಭಾರತೀಯ ಜನತಾ ಯುವ ಮೋರ್ಚಾ ರಾಷ್ಟ್ರೀಯ ಉಪಾಧ್ಯಕ್ಷ ಅಭಿನವ್ ಪ್ರಕಾಶ್ ಅವರು ವಿಡಿಯೊವೊಂದನ್ನು ಹಂಚಿಕೊಂಡಿದ್ದು ಇದರಲ್ಲಿ ಟ್ರೋಫಿ ಹಸ್ತಾಂತರಿಸಿದ ಮೋದಿ ಕಮಿನ್ಸ್ ಕೈ ಕುಲುಕುತ್ತಿರುವುದು ಕಾಣುತ್ತದೆ. ಆದರೆ ವೈರಲ್ ವಿಡಿಯೊದಲ್ಲಿ ಕೈಕುಲುಕುವ ಭಾಗವನ್ನು ಮಾತ್ರ ಕಟ್ ಮಾಡಿ ಹರಿಬಿಡಲಾಗಿದೆ.
This is the unedited clip! pic.twitter.com/xUgVJTLSTV
— Abhinav Prakash (@Abhina_Prakash) November 19, 2023