ಸುರತ್ಕಲ್: ಶೌಚಾಲಯದಲ್ಲಿ ಮೊಬೈಲ್ ಇಟ್ಟವರನ್ನು ಪತ್ತೆ ಮಾಡುವುದನ್ನು ಬಿಟ್ಟು ಪೊಲೀಸ್ ಇಲಾಖೆ ಟ್ವೀಟ್ ಮಾಡಿದ ಸಾಮಾಜಿಕ ಕಾರ್ಯಕರ್ತೆಯ ಮನೆಯ ಮೇಲೆ ತನಿಖೆಯ ನೆಪದಲ್ಲಿ ದಾಳಿ ಮಾಡಿರುವುದು ಅತಿರೇಕದ ವರ್ತನೆಯಾಗಿದೆ . ಕಾಂಗ್ರೆಸ್ ಸರ್ಕಾರ ಹಿಂದೂ ಸಮುದಾಯದ ಮೇಲೆ ದಾಳಿ ನಡೆಸಲು ರಾಜ್ಯದ ಪೊಲೀಸ್ ಪಡೆಯನ್ನ ಬಳಸಲು ಸಜ್ಜಾಗಿರುವಂತಿದೆ ಎಂದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಭರತ್ ಶೆಟ್ಟಿ ವೈ.ಟೀಕಾ ಪ್ರಹಾರ ನಡೆಸಿದ್ದಾರೆ.
ಉಡುಪಿಯ ಕಾಲೇಜು ಒಂದರ ಶೌಚಾಲಯದಲ್ಲಿ ಗುಪ್ತವಾಗಿ ಮೊಬೈಲ್ ಕ್ಯಾಮೆರಾ ಇಟ್ಟುಚಿತ್ರೀಕರಣ ಮಾಡಲಾಗಿತ್ತು. ಎಂಬ ಬಗ್ಗೆ ಭಾರಿ ಚರ್ಚೆ ನಡೆಯುತ್ತಿರುವಂತೆ, ಇದೀಗ ಪ್ರಕರಣ ತಿರುಚಲು ಹಾಗೂ ಏನೂ ಆಗಿಲ್ಲವೆಂಬತೆ ಮಾಡಲು ಮೊಬೈಲ್ ಅದಲು ಬದಲು ಮಾಡಲಾಗಿದೆ ಎಂಬ ಸಂಶಯ ಜನರಲ್ಲಿ ಉಂಟಾಗಿದೆ .ಮೊದಲು ಇದಕ್ಕೆ ಉತ್ತರ ನೀಡಿ.
ಉಡುಪಿ ಪೊಲೀಸರು ಘಟನೆ ನಡೆದಿರುವುದಕ್ಕೆ ಸಾಕ್ಷ್ಯ ಇಲ್ಲ ಎಂದು ಹೇಳುತ್ತಿದ್ದಾರೆ.ಹಾಗಾದರೆ ದಿಢೀರ್ ಆಗಿ ವಿದ್ಯಾರ್ಥಿನಿಯರನ್ನು ವಜಾ ಗೊಳಿಸಲು ಕಾರಣ ಏನು, ಬೆಂಕಿಯಿಲ್ಲದೆ ಹೊಗೆಯಾಡಲು ಸಾಧ್ಯವಿಲ್ಲ.ಕೇರಳ ಮೂಲದ ವಿದ್ಯಾರ್ಥಿಗಳಾಗಿರುವುದರಿಂದ ಲವ್ ಜಿಹಾದ್ ಸಹಿತ,ವಿವಿಧ ವಿದ್ವಂಸಕ ಕೃತ್ಯ ಎಸಗಲು ಇದೊಂದು ಬ್ಲ್ಯಾಕ್ ಮೈಲ್ ಷಡ್ಯಂತ್ರವಾಗಿರುವ ಸಾಧ್ಯತೆಯಿದೆ.
ಈ ಪ್ರಕರಣ ಕುರಿತಂತೆ ರಾಜ್ಯ ಸರ್ಕಾರ ತಕ್ಷಣ ಎಸ್ ಐ ಟಿ ತನಿಖೆಗೆ ಆದೇಶಿಸಿ ಎಂದು ಒತ್ತಾಯಿಸಿದ್ದಾರೆ. ಪ್ರಕರಣವನ್ನು ಸರಕಾರ ಗಂಭೀರವಾಗಿ ತೆಗೆದುಕೊಳ್ಳುವ ಬದಲು ಉಡಾಫೆಯಾಗಿ ವರ್ತಿಸಿ ಮುಂದೊಂದು ದಿನ ಕಂಟಕಪ್ರಾಯವಾಗಬಹುದು. ಇದರ ಹಿಂದೆ ನಿಷೇಧಿತ ಸಂಘಟನೆ ಪಿ ಎಫ್ ಐ ಕೈವಾಡ ಇದ್ದರೆ ತನಿಖೆ ನಡೆಸಿ, ಹಿಂದೂ ಸಮುದಾಯದ ಯುವತಿಯರು ಬಲಿಪಶುವಾಗದಂತೆ ರಕ್ಷಣೆಯನ್ನು ನೀಡುವ ಕೆಲಸ ಮೊದಲು ಮಾಡಬೇಕಿದೆ ಎಂದು ಒತ್ತಾಯಿಸಿದ್ದಾರೆ.
ಟ್ವೀಟ್ ಮಾಡಿ ಸರಕಾರ,ತನಿಖಾ ಇಲಾಖೆ ಹಾಗೂ ಸಾರ್ವಜನಿಕ ರನ್ನು ಎಚ್ಚರಿಸುವ ಕೆಲಸ ಮಾಡಿದ ಮಾತ್ರಕ್ಕೆ, ರಾತ್ರಿ ಸಮಯದಲ್ಲಿ ಯುವತಿಯ ಮನೆಗೆ ತೆರಳಿ ತನಿಖೆಯ ನೆಪದಲ್ಲಿ ಕಿರುಕುಳ ನೀಡಿರುವುದು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಾಗದು.
ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೂಡಲೇ, ಭಾರತೀಯ ಜನತಾ ಪಕ್ಷಯ ಭದ್ರ ಕೋಟೆಯಾಗಿರುವ ಕರಾವಳಿ ಭಾಗವನ್ನು ಗುರಿಯಾಗಿಸಿ ಇರಿಸಿಕೊಂಡು ಹಿಂದೂ ಕಾರ್ಯಕರ್ತರ ಗಡಿಪಾರು, ಸುಳ್ಳು ಕೇಸುಗಳನ್ನು ದಾಖಲಿಸಲು ಪೂರ್ವ ತಯಾರಿ ನಡೆಸಿದೆ. ಇದರ ಮುಂದುವರಿದ ಭಾಗವಾಗಿ ಟ್ವೀಟ್ ಮಾಡಿದ ರಶ್ಮಿ ಸಮಂತ ಅವರನ್ನು ಕೂಡ ತನಿಖೆ ನೆಪದಲ್ಲಿ ಪ್ರಕರಣ ದಾಖಲಿಸಿ, ಇಡೀ ಪ್ರಕರಣವನ್ನು ತೀರಿಸಲು ಮುಂದಾಗಿರುವಂತಿದೆ. ಜಿಲ್ಲೆಯಲ್ಲಿ ಹಾಗೂ ಕರಾವಳಿಯಲ್ಲಿ ಸಂಘರ್ಷಮಯ ವಾತಾವರಣಕ್ಕೆ ಸರಕಾರ ಎಡೆ ಮಾಡಿಕೊಡಬಾರದು. ದ್ವೇಷ ರಾಜಕಾರಣದಿಂದ ಕಾನೂನು ಹದೆಗೆಟ್ಟಲ್ಲಿ ರಾಜ್ಯದ ಆಡಳಿತ ರೂಢ ಕಾಂಗ್ರೆಸ್ ಸರ್ಕಾರವೇ ಜವಾಬ್ದಾರಿಯಾಗಲಿದೆ ಎಂದು ಡಾಕ್ಟರ್ ಭರತ್ ಶೆಟ್ಟಿ ವೈ ಎಚ್ಚರಿಸಿದ್ದಾರೆ.
Strongly condemn the hounding of @RashmiDVS and her parents for tweeting news about incident in Udupi where 3 female Muslim students placed camera in washroom, recording unsuspecting Hindu girls. Since when tweeting the truth is Crime in Karnataka?
We are with Rashmi and urge…
— Dr Bharath Shetty Y. (@bharathshetty_y) July 25, 2023