Site icon newsroomkannada.com

ಮಣಿಪುರದಲ್ಲಿ ಕೇಂದ್ರ ವಿದೇಶಾಂಗ ವ್ಯವಹಾರ ಸಚಿವರ ಮನೆಗೆ ಬೆಂಕಿಯಿಟ್ಟ ಗುಂಪು

ಇಂಫಾಲ: ಮಣಿಪುರದಲ್ಲಿ ಸಂಘರ್ಷ ತೀವ್ರಗೊಂಡಿದ್ದು, ಇಂಫಾಲ ಪಟ್ಟಣದಲ್ಲಿರುವ ಕೇಂದ್ರ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ರಾಜ್‌ಕುಮಾರ್ ರಂಜನ್ ಸಿಂಗ್ ಅವರ ಮನೆಯನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿ ಬೆಂಕಿ ಹಚ್ಚಿದ್ದಾರೆ. ಪೊಲೀಸ್ ಅಧಿಕಾರಿಗಳ ಪ್ರಕಾರ, 200 ಪುರುಷರು ಮತ್ತು ಮಹಿಳೆಯರ ಗುಂಪೊಂದು ಗುರುವಾರ ತಡರಾತ್ರಿ ಕೇಂದ್ರ ಸಚಿವರ ನಿವಾಸದ ಮೇಲೆ ದಾಳಿ ಮಾಡಿ ಬೆಂಕಿ ಹಚ್ಚಿದೆ. ಈ ವೇಳೆ ಸಚಿವರು ಸಿಂಗ್ ದೆಹಲಿಯಲ್ಲಿದ್ದರು. ಸಚಿವರ ಮನೆಯ ಒಂದು ಭಾಗ ಸುಟ್ಟು ಹೋಗಿದ್ದರೂ, ಭದ್ರತಾ ಸಿಬ್ಬಂದಿ ಮತ್ತು ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಗುರುವಾರ ಮಧ್ಯಾಹ್ನ ಇಂಫಾಲ ಪಟ್ಟಣದ ಹೃದಯಭಾಗದಲ್ಲಿ ಮಣಿಪುರದ ರಾಪಿಡ್ ಆಕ್ಷನ್ ಫೋರ್ಸ್ ಮತ್ತು ಗುಂಪಿನ ನಡುವೆ ಘರ್ಷಣೆ ನಡೆದಿತ್ತು. ಅಲ್ಲದೆ ಎರಡು ಮನೆಗಳಿಗೆ ಕಿಚ್ಚು ಹಚ್ಚಿದ ಘಟನೆ ನಡೆದಿತ್ತು. ಮೇ 25ರಂದು ಸಚಿವರ ಮನೆ ಮೇಲೆ ದಾಳಿ ನಡೆಸಲು ಗುಂಪೊಂದು ಪ್ರಯತ್ನ ನಡೆಸಿತ್ತು. ಆದರೆ ಭದ್ರತಾ ಪಡೆಗಳು ಅದಕ್ಕೆ ತಡೆಯೊಡ್ಡಿತ್ತು. ಮಣಿಪುರದಲ್ಲಿ ಮೈಟೆಯಿ ಮತ್ತು ಕುಕಿ ಸಮುದಾಯಗಳ ನಡುವಿನ ಜನಾಂಗೀಯ ಸಂಘರ್ಷ ತೀವ್ರಗೊಂಡಿದ್ದು, ಹಲವು ಸಚಿವರ ಮನೆಗಳಿಗೆ ಬೆಂಕಿ ಹಚ್ಚಲಾಗಿದೆ.

Exit mobile version