ಮಂಗಳೂರು: ವೈಜ್ಞಾನಿಕ ಹೈನುಗಾರಿಕೆ ಮಾಹಿತಿ ಶಿಬಿರ ಹಾಗೂ ಸರಕಾರದ ಸವಲತ್ತು ವಿತರಣಾ ಕಾರ್ಯಕ್ರಮ. ಕೃಷಿ ವಿಜ್ಞಾನ ಕೇಂದ್ರ, ಮಂಗಳೂರು ಹಾಗೂ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಮುಲ್ಕಿ ಇವರ ಸಂಯುಕ್ತಾಶ್ರಯದಲ್ಲಿ ರೈತರಿಗೆ ವೈಜ್ಞಾನಿಕ ಹೈನುಗಾರಿಕೆಯಲ್ಲಿ ಮಾಹಿತಿ ಶಿಬಿರವನ್ನು ಪಶು ಆಸ್ಪತ್ರೆ ಕಿನ್ನಿಗೋಳಿಯಲ್ಲಿ ಆಯೋಜಿಸಲಾಯಿತು. ಈ ಕಾರ್ಯಕ್ರಮದಲ್ಲಿ ಆಯ್ದ ಹತ್ತು ಜನ ಪರಿಶಿಷ್ಟ ಜಾತಿ ಹೈನುಗಾರಿಕೆ ಭಾ. ಕೃ. ಅ. ಪ. ಕೃಷಿ ವಿಜ್ಞಾನ ಕೇಂದ್ರ, ಮಂಗಳೂರು ಇವರ ಪರಿಶಿಷ್ಟ ಜಾತಿ ಉಪಯೋಜನೆ ಅಡಿಯಲ್ಲಿ ಪಶುಗಳಿಗೆ ಕೊಟ್ಟಿಗೆಯಲ್ಲಿ ಬಳಸುವ ರಬ್ಬರ್ ಮ್ಯಾಟ್ ಗಳನ್ನು ವಿತರಿಸಲಾಯಿತು. ಡಾ. ವಿಶ್ವಾರಾಧ್ಯ ಮುಖ್ಯ ಪಶು ವೈದ್ಯಾಧಕಾರಿಗಳು ಕಿನ್ನಿಗೋಳಿ ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೃಷಿ ವಿಜ್ಞಾನ ಕೇಂದ್ರದ ಪಶು ವಿಜ್ಞಾನಿ ಡಾ. ಶಿವಕುಮಾರ್ ಆರ್. ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ, ವೈಜ್ಞಾನಿಕ ಹೈನುಗಾರಿಕೆ ಕುರಿತು ಮಾಹಿತಿ ನೀಡಿದರು. ಡಾ. ಗ್ರೀಶ್ಮರಾವ್, ಪಶುವೈದ್ಯಾಧಿಕಾರಿ, ಹಳೆಯಂಗಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಪಶು ಇಲಾಖೆಯ ಯೋಜನೆಗಳ ಕುರಿತು ಮಾಹಿತಿ ನೀಡಿದರು. ಡಾಕ್ಟರ್ ಗುರುರಾಜ್ ಪಿ.ಎಂ. ಹಿರಿಯ ಪಶುವೈದ್ಯಾಧಿಕಾರಿ, ಬೆಳುವಾಯಿ, ಡಾಕ್ಟರ್ ಸುಬ್ಬರಾಯ ಪೈ. ಪಶುವೈದ್ಯಾಧಿಕಾರಿ (ಆಂಬುಲೆನ್ಸ್ ) ಭಾಗವಹಿಸಿ ಪಶು ಆರೋಗ್ಯ ನಿರ್ವಹಣೆ ಕುರಿತು ಮಾಹಿತಿ ನೀಡಿದರು. ಕೃಷಿ ವಿಜ್ಞಾನ ಕೇಂದ್ರ ಮಂಗಳೂರು ಇದರ ವಿಜ್ಞಾನಿಗಳಾದ ಡಾಕ್ಟರ್ ಮಲ್ಲಿಕಾರ್ಜುನ್ ಕಾರ್ಯಕ್ರಮ ಸಂಯೋಜಿಸಿ ಕಾರ್ಯಕ್ರಮದ ಕುರಿತು ಪ್ರಸ್ತಾವಿಕ ನುಡಿ ಮಾತನಾಡಿದರು. ಪಶು ಸಖಿ ಮಾಲತಿ ಕಾರ್ಯಕ್ರಮಕ್ಕೆ ಶುಭ ಹಾರೈಸಿ ಅಧಿಕಾರಿಗಳಿಗೆ ವಂದನಾರ್ಪಣೆ ಮಾಡಿದರು. ಈ ಸಭೆಯಲ್ಲಿ 40 ಜನ ಉಪಸ್ಥಿತರಿದ್ದರು.