main logo

ಯುಎಇಯಲ್ಲಿ ಹೊಸ ದಾಖಲೆ ಬರೆದ “ಮಿಡ್ಲ್ ಕ್ಲಾಸ್ ಫ್ಯಾಮಿಲಿ “

ಯುಎಇಯಲ್ಲಿ ಹೊಸ ದಾಖಲೆ ಬರೆದ “ಮಿಡ್ಲ್ ಕ್ಲಾಸ್ ಫ್ಯಾಮಿಲಿ “

ದುಬೈ : ಯುವ ನಟ – ನಿರ್ದೇಶಕ ರಾಹುಲ್ ಅಮೀನ್ ನಿರ್ದೇಶಿಸಿ, ವಿನೀತ್ ಕುಮಾರ್ ನಾಯಕ ನಟನಾಗಿ ಅಭಿನಯಿಸಿದ “ಮಿಡ್ಲ್ ಕ್ಲಾಸ್ ಫ್ಯಾಮಿಲಿ” ತುಳು ಚಿತ್ರದ ಯುಎಇ ರಾಷ್ಟ್ರದ ಪ್ರೀಮಿಯರ್ ಪ್ರದರ್ಶನದ ಟಿಕೆಟ್ ಬಿಡುಗಡೆ ಕಾರ್ಯಕ್ರಮವು ಇತ್ತೀಚೆಗೆ ಜರುಗಿತು.

ಡಿಸೆಂಬರ್ .8 ರಂದು ದುಬೈನ ಮಾರ್ಕೊ ಪೋಲೊ ಹೊಟೇಲ್ ನ ಸಭಾಂಗಣದಲ್ಲಿ ನಡೆದ ಟಿಕೆಟ್ ಬಿಡುಗಡೆ ಕಾರ್ಯಕ್ರಮದಲ್ಲಿ ಉದ್ಘಾಟನೆಯನ್ನು ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿ, ಚಿತ್ರ ನಿರ್ಮಾಪಕರಾದ ಹರೀಶ್ ಶೇರಿಗಾರ್,ಹರೀಶ್ ಬಂಗೇರ , ಆತ್ಮನಂದ ರೈ,ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇಯ ದಿನೇಶ್ ಶೆಟ್ಟಿ ಕೊಟ್ಟಿಂಜ,ಬ್ರಾಹ್ಮಣ ಸಮಾಜದ ಸುಧಾಕರ ರಾವ್ ಪೇಜಾವರ,ಉದ್ಯಮಿಗಳಾದ ಡಾ. ಬು.ಅಬ್ದುಲ್ಲ, ಗುಣಶೀಲ್ ಶೆಟ್ಟಿ, ರಮಾನಂದ ಶೆಟ್ಟಿ, ಸಂದೀಪ್ ರೈ ನಂಜೆ,ಡಾ.ಶ್ರೀಮತಿ ರಶ್ಮಿ ನಂದ ಕಿಶೋರ್,ಕರ್ನಾಟಕ ಸಂಘ ದುಬೈ ಅಧ್ಯಕ್ಷರಾದ ಶಶಿಧರ್ ನಾಗರಾಜಪ್ಪರವರು ಹಾಗೂ ಚಿತ್ರ ತಂಡದ ನಿರ್ಮಾಪಕರು, ಸಹ ನಿರ್ಮಾಪಕರು, ಚಿತ್ರದ ನಟ ನಟಿಯರು ದೀಪವನ್ನು ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭವನ್ನು ಹಾರೈಸಿದರು.

ಚಿತ್ರದ ಫ್ಯಾಮಿಲಿ ವೀಡಿಯೋ ಹಾಡನ್ನು ಅಬುಧಾಬಿಯ ಉದ್ಯಮಿ ಸುಂದರ ಶೆಟ್ಟಿಯವರು ಬಿಡುಗಡೆಗೊಳಿಸಿದರು. ಕರ್ನಾಟಕ ಸಂಘ ರಾಸ್ ಅಲ್ ಕೈಮಾದ ಅಧ್ಯಕ್ಷರಾದ ಸಂತೋಷ್ ಹೆಗ್ಡೆ,ಸಂಘಟಕ ನೋಯಲ್ ಅಲ್ಮೇಡಾ,ಶಾನ್ ಪೂಜಾರಿ,ದೇವಿ ಪ್ರಸಾದ್ ಶೆಟ್ಟಿ, ಪಟ್ಲ ಫೌಂಡೇಷನ್ ಯುಎಇಯ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಮಾಡೂರುಗುತ್ತು, ವಸಂತ್ ಶೆಟ್ಟಿ, ಮುಂಬಯಿಯ ಖ್ಯಾತ ಪತ್ರಕರ್ತ ರೋನ್ಸ್ ಬಂಟ್ವಾಳ, ವರದರಾಜ್ ಶೆಟ್ಟಿಗಾರ್,ರಾಜೇಶ್ ಕುತ್ತಾರ್ ,ಪ್ರಕಾಶ್ ಪಕ್ಕಳ ,ದೀಪಕ್ ಪಾಲಡ್ಕ ಉಪಸ್ಥಿತರಿದ್ದರು.ಚಿತ್ರದ ವೀಡಿಯೋ ಹಾಡನ್ನು ನೋಡಿದ ಪ್ರೇಕ್ಷಕರು ಮುಕ್ತಕಂಠದಿಂದ ಶ್ಲಾಘಿಸಿದರು.

ಚಿತ್ರದ ಪ್ರೀಮಿಯರ್ ಪ್ರದರ್ಶನದ ಪಾಸ್ ಗಳನ್ನು ಯುಎಇಯ ಚಿತ್ರದ ಪ್ರಾಯೋಜಕರಾದ ಶ್ರೀಮತಿ ಮೋನಿಷ ಶರತ್ ಶೆಟ್ಟಿ, ಹರೀಶ್ ಬಂಗೆರ,ಹರೀಶ್ ಶೇರಿಗಾರ್,ಗಿರೀಶ್ ನಾರಾಯಣ್,ದೀಪಕ್ ಕುಮಾರ್ ನೆರೆದ ಅತಿಥಿಗಳ ಸಮ್ಮುಖದಲ್ಲಿ ಬಿಡುಗಡೆಗೊಳಿಸಿದರು.

ವಿಶೇಷವೆಂದರೆ ಈ ಚಿತ್ರವು ಬಿಡುಗಡೆಯ ಮೊದಲೇ ಯುಎಇ ಯಲ್ಲಿ 30 ಲಕ್ಷಗಳ ಗಳಿಕೆಯನ್ನು ಯುಎಇ ಚಿತ್ರ ಪ್ರಸ್ತುತಿ ಪ್ರಾಯೋಜಕರ ಮೂಲಕ ಗಳಿಸಿದ್ದು ತುಳು ಚಿತ್ರರಂಗದಲ್ಲಿ ನೂತನ ದಾಖಲೆ ಬರೆದಿದ್ದು , ಟಿಕೆಟ್ ಬಿಡುಗಡೆಯ ದಿನವೇ 1500ಕ್ಕೂ ಹೆಚ್ಚಿನ ಟಿಕೆಟ್ ಮಾರಾಟದೊಂದಿಗೆ ದಾಖಲೆಯ ಪುಟ ಸೇರಿಕೊಂಡಿದೆ.

ನಾಯಕ ನಟ ವಿನೀತ್ ಕುಮಾರ್ ಮಾತನಾಡುತ್ತಾ ಹಿರಿಯವರ ಆರ್ಶಿವಾದೊಂದಿಗೆ ಒಂದು ಒಳ್ಳೆಯ ಚಿತ್ರವನ್ನು ನಿರ್ದೇಶನ ಮಾಡಿ ತುಳುನಾಡಿನ ಜನರಿಗೆ ನೀಡಲಿದ್ದೇವೆ .ಒಳ್ಳೆಯ ಚಿತ್ರವನ್ನು ತುಳುವರು ಕೈ ಬಿಡಲ್ಲ ಎಂಬ ಧೈರ್ಯದಿಂದ ಈ ಚಿತ್ರವನ್ನು ಜನವರಿ 18, 19 ರಂದು ಯುಎಇಯ ತುಳುವರಿಗೆ ನೀಡಲಿದ್ದೆವೆ.ಎಲ್ಲರೂ ಚಿತ್ರವನ್ನು ನೋಡಿ ಈ ಚಿತ್ರವನ್ನು ಗೆಲ್ಲಿಸಬೇಕೆಂದು” ವಿನಂತಿಸಿದರು.

ವಿನೀತ್ ಕುಮಾರ್ ನಾಯಕ ನಟನಾಗಿ ಮತ್ತು ಸಮತಾ ಅಮೀನ್ ನಾಯಕಿಯಾಗಿ ನಟಿಸುತ್ತಿರುವ ಈ ಚಿತ್ರದಲ್ಲಿ ನವೀನ್ ಡಿ.ಪಡೀಲ್, ಅರವಿಂದ ಬೋಳಾರ್,ಬೋಜರಾಜ ವಾಮಂಜೂರು,ಪ್ರಸನ್ನ ಶೆಟ್ಟಿ, ಸಂದೀಪ್ ಶೆಟ್ಟಿ, ರವಿ ರಾಮಕುಂಜ,ಚೈತ್ರ ಶೆಟ್ಟಿ, ಕದ್ರಿ ನವನೀತ ಶೆಟ್ಟಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ತಾಯ್ನಾಡಿನಿಂದ ಆಗಮಿಸಿದ ಚಿತ್ರದ ನಾಯಕ ವಿನೀತ್ ಕುಮಾರ್,ನಾಯಕಿ ಸಮತಾ ಅಮೀನ್,ನಿರ್ದೇಶಕ ರಾಹುಲ್ ಅಮೀನ್,ನಿರ್ಮಾಪಕ ಆನಂದ ಕುಂಪಲ,ಸಹಾ ನಿರ್ಮಾಪಕ ನಿತೀನ್ ರಾಜ್ ಶೆಟ್ಟಿ, ಸುಹಾನ್ ಪ್ರಸಾದ್, ಭರತ್ ಕುಮಾರ್ ಗಟ್ಟಿ,ಕಲಾ ನಿರ್ದೇಶಕ ಪವನ್ ಕುಮಾರ್ ಹಾಗೂ ಯುಎಇಯ ಚಿತ್ರದ ಸಹಾ ನಿರ್ಮಾಪಕರಾದ ಮಿತ್ರಂಪಾಡಿ ಜಯರಾಮ ರೈ,ಸ್ವಸ್ತಿಕ್ ಆಚಾರ್ಯರು ಯುಎಇಯಲ್ಲಿ ಇರುವ ಎಲ್ಲಾ ತುಳುವರು ಈ ಚಿತ್ರವನ್ನು ನೋಡಿ ಚಿತ್ರದ ಯಶಸ್ವಿಗೆ ಸಹಕರಿಸಬೇಕೆಂದು ವಿನಂತಿಸಿದರು.

ಯುಎಇಯ ಹೆಸರಾಂತ ನಾಟಕ ತಂಡ ಗಮ್ಮತ್ ಕಲಾವಿದೆರ್ ಯುಎಇಯ ಪ್ರಬುಧ್ಧ ಕಲಾವಿದರೂ ಕೂಡ ಈ ಚಿತ್ರದಲ್ಲಿ ಅಭಿನಯಿಸಿದ್ದು ಚಿದಾನಂದ ಪೂಜಾರಿ ವಾಮಂಜೂರು, ಗಿರೀಶ್ ನಾರಾಯಣ್,ಆಶಾ ಕೊರೆಯ,ಡೊನಿ ಕೊರೆಯ,ದೀಪ್ತಿ ದಿನ್ ರಾಜ್,ಕಿರಣ್ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಮನರಂಜನೆಯ ಕಾರ್ಯಕ್ರಮದ ಅಂಗವಾಗಿ ನೃತ್ಯ ಕಾರ್ಯಕ್ರಮ ಮತ್ತು ಯುಎಇಯ ಪ್ರಸಿದ್ಧ ಗಾಯಕ ಗಾಯಕಿಯರಿಂದ ಸಂಗೀತ ರಸಮಂಜರಿ ನಡೆಯಿತು.
ನಟ ವಿನೀತ್ ಕುಮಾರ್, ಗಿರೀಶ್ ನಾರಯಣ್ ಮತ್ತು ಸ್ವಸ್ತಿಕ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕ ರಾಹುಲ್ ಅಮೀನ್ ಧನ್ಯವಾದವಿತ್ತರು.

ಮಿಡ್ಲ್ ಕ್ಲಾಸ್ ಫ್ಯಾಮಿಲಿ ತುಳು ಚಿತ್ರರಂಗದ ಪ್ರಬುದ್ಧ ಕಲಾವಿದರು ಅಭಿನಯಿಸಿದ ಈ ತುಳು ಚಿತ್ರದ ಪ್ರಿಮಿಯರ್ ಪ್ರದರ್ಶನವು ಯುಎಇಯ ಅಬುಧಾಬಿ, ದುಬೈ, ಶಾರ್ಜಾದ ಚಿತ್ರಮಂದಿರಗಳಲ್ಲಿ ಜನವರಿ 18, 19 ರಂದು ಪ್ರದರ್ಶನ ಕಾಣಲಿದೆ.ಕರಾವಳಿಯ ಪ್ರಬುದ್ಧ ಚಿತ್ರ ನಟರನ್ನೊಳಗೊಂಡ ಮಿಡ್ಲ್ ಕ್ಲಾಸ್ ಫ್ಯಾಮಿಲಿ ತುಳು ಚಿತ್ರದಲ್ಲಿ ಕಥೆ ನಿರೀಕ್ಷೆ ಮೂಡಿಸಿ ಕಲಾ ರಸಿಕರನ್ನು ಕಾತರದಿಂದ ಕಾಯುವಂತಾಗಿಸಿದೆ ಎಂದು ಯು.ಎ.ಇ ಯಲ್ಲಿ ಚಿತ್ರ ಬಿಡುಗಡೆಯ ಜವಾಬ್ದಾರಿಯನ್ನು ಹೊತ್ತಿರುವ OMG ದುಬೈ ಸಂಸ್ಥೆ ಮತ್ತು ಸಂಘಟಕರಾದ ಶ್ರೀ ಸ್ವಸ್ತಿಕ್ ಆಚಾರ್ಯ ಪತ್ರಿಕಾ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.

ಹೆಚ್ಚಿನ ವಿವರಕ್ಕಾಗಿ ಸಂಪರ್ಕಿಸಿ : 0557869002, 0529157825.

Related Articles

Leave a Reply

Your email address will not be published. Required fields are marked *

error: Content is protected !!