ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 10ರಲ್ಲಿ ಸ್ಪರ್ಧಿಸುತ್ತಿರುವ ಇಶಾನಿ ಮತ್ತು ಮೈಕಲ್ ಬಾಯ್‌ಫ್ರೆಂಡ್ ಗರ್ಲ್ ಫ್ರೆಂಡ್ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ.
ಇದೀಗ ಈ ವಿಚಾರದ ಬಗ್ಗೆ ಇಶಾನಿ ತಂದೆ ಪ್ರತಿಕ್ರಿಯೆ ನೀಡಿದ್ದಾರೆ. ‘ಮೈಕಲ್ ಮತ್ತು ಇಶಾನಿ ವಿಚಾರ ಮುಂದಿನ ದಿನಗಳಲ್ಲಿ ಸೀರಿಯಸ್ ಆಗಿ ನನ್ನ ತನಕ ಬಂದರೆ ಖಂಡಿಯಾ ನನ್ನ ಮಗಳಿಗೆ ಸಲಹೆ ಕೊಡುತ್ತೀನಿ. ಈ ವಿಚಾರವನ್ನು ಒಪ್ಪಿಕೊಳ್ಳಲು ನನಗೆ ಕಷ್ಟವಾಗುತ್ತದೆ’ ತಂದೆಯಾಗಿ ನನ್ನ ಮಗಳಿಗೆ ಏನು ಹೇಳಬೇಕು ಅದನ್ನು ಹೇಳೇ ಹೇಳ್ತೀನಿ. ನಿರ್ಧಾರ ಮಾಡುವ ವಯಸ್ಸು ಮಕ್ಕಳಿಗೆ ಇದೆ ಆದರೆ ನಮ್ಮ ಅಭಿಪ್ರಾಯ ಏನು ಎಂದು ನಾವು ತಿಳಿಸಬೇಕು ಎಂದು ಹೇಳಿದ್ದಾರೆ.
ನನಗೆ ಈಗಾಗಲೆ ಮಗ ಇದ್ದಾನೆ ಹೀಗಾಗಿ ಪ್ರೀತಿ ಕೊಟ್ಟು ಅರ್ಥ ಮಾಡಿಕೊಂಡು ಆಕೆಯನ್ನು ಚೆನ್ನಾಗಿ ನೋಡಿಕೊಳ್ಳುವಂತ ಹುಡುಗ ಆಗಿರಬೇಕು. ಮಗಳಿಗೋಸ್ಕರ ಕಾಂಪ್ರಮೈಸ್ ಮಾಡಿಕೊಳ್ಳುವುದು ಕಷ್ಟ ಆಗುತ್ತದೆ.
ಆಕೆ ನೇರ ಮಾತನಾಡುತ್ತಾಳೆ ಆದರೆ ಮಾನಸಿಕವಾಗಿ ಆಕೆ ತುಂಬಾ ವೀಕ್ ಇದ್ದಾಳೆ. ನನ್ನ ಮಗಳ ವೀಕ್‌ನೆಸ್ ಅಂದ್ರೆ ಅತಿಯಾಗಿ ವೀಕ್ ಮಾನಸಿಕವಾಗಿ ಎಲ್ಲರಿಗೂ ಕರಗುತ್ತಾಳೆ ಒಂದು ರೀತಿ ಮಗುನೇ ಆಕೆ ಎಂದು ಪ್ರತಿಕ್ರಿಯಿಸಿದ್ದಾರೆ.