ಹೆಬ್ರಿ: ಆಗುಂಬೆ ಘಾಟಿ 7ನೇ ತಿರುವಿನಲ್ಲಿ ಗುಜರಿ ಫ್ಯಾಕ್ಟರಿ ಮಾಲಿಕನೊಬ್ಬ ಆಕಸ್ಮಿಕವಾಗಿ 30 ಅಡಿ ಪ್ರಪಾತಕ್ಕೆ ಬಿದ್ದ ಘಟನೆ ಭಾನುವಾರ ಸಂಜೆ ವೇಳೆ ನಡೆದಿದೆ. ಮಹಮ್ಮದ್ ಪಾಷಾ ಎಂಬಾತ ರಸ್ತೆ ಬದಿಯಲ್ಲಿದ್ದ ನಿಂತಿದ್ದ ವೇಳೆ ಪ್ರಪಾತಕ್ಕೆ ಬಿದ್ದಿದ್ದಾರೆ. ಸ್ಕ್ಯಾಪ್ ಗಾಡಿಯಯನ್ನು ಟ್ರ್ಯಾಕ್ಟರ್ ಜೋಯಿಂಗ್ ಮಾಡುತ್ತಿದ್ದ ವೇಳೆ ಗಾಡಿ ಬ್ರೇಕ್ ಫೇಲ್ ಆದ ಹಿನ್ನೆಲೆಯಲ್ಲ ಮಹಮ್ಮದ್ ಪಾಷಾ ಅವರಿಗೆ ಗುದ್ದಿದೆ. ಈ ಕಾರಣದಿಂದ ಈ ಅವಘಡ ಸಂಭವಿಸಿದೆ.
ಆಗುಂಬೆ ಘಾಟ್ ನಿಂದ 25 ರಿಂದ 30 ಅಡಿ ಕೆಳಗಡೆ ಬಿದ್ದ ಪಾಷಾಗೆ ಗಂಭೀರ ಗಾಯವಾಗಿದ್ದು ಮೇಲಿನಿಂದ ಬಿದ್ದ ರಭಸಕ್ಕೆ ಪಾಷಾ ಅವರ ಸೊಂಟ ಮತ್ತು ತಲೆಗೆ ಪೆಟ್ಟು ಬಿದ್ದಿದೆ, ಕೂಡಲೇ ಸ್ಥಳದಲ್ಲಿದ್ದಲಿದ್ದ ಹಿಂದೂ ಜಾಗರಣೆ ವೇದಿಕೆಯ ಸದಸ್ಯರು ಪಾಷಾ ಅವರನ್ನು ರಕ್ಷಿಸಿದ್ದಾರೆ. ಹಿಂದು ಜಾಗರಣಾ ವೇದಿಕೆಯ ನಿತ್ಯಾನಂದ ನೇತೃತ್ವದ ತಂಡದಿಂದ ಆಗುಂಬೆ ಘಾಟ್ ಕೆಳಗಡೆ ಇಳಿದು ಬೆಡ್ ಶೀಟ್ ಹಾಗೂ ಹಗ್ಗದ ಸಹಾಯದಿಂದ ಮೇಲೆತ್ತಿದ್ದಾರೆ. ಹಿಂದು ಜಾಗರಣಾ ವೇದಿಕೆ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.
ಆಗುಂಬೆ ಘಾಟಿ 7 ನೇ ತಿರುವಿನಲ್ಲಿ ಪ್ರಪಾತಕ್ಕೆ ಬಿದ್ದ ವ್ಯಕ್ತಿ,
