ಮಂಗಳೂರು: ಉಳ್ಳಾಲದ ಮೇಲಂಗಡಿ ಮುಹಿಯುದ್ದೀನ್ ಜುಮಾ ಮಸೀದಿ (ಹೊಸಪಳ್ಳಿ) ಇದರ ರಾತೀಬು ಹರಕೆ ಕಾರ್ಯಕ್ರಮದ ಸಮಾರೋಪ ಸಮಾರಂಭ ನಡೆಯಿತು.
ವಿದ್ವಾಂಸ ಸಯ್ಯದ್ ಎನ್.ಪಿ.ಜಲಾಲುದ್ದೀನ್ ತಂಙಳ್ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇಸ್ಲಾಮಿನಲ್ಲಿ ಕಲಿಕೆ ಎಂಬುದು ನಿರಂತರ ಪ್ರಕ್ರಿಯೆ. ಶಿಕ್ಷಣ ನೀಡುವ ಸ್ಥಳ ಸ್ವರ್ಗದ ಹೂದೋಟವಾಗಿದೆ. ನಾವು ಎಷ್ಟು ಕಲಿತರೂ ಮತ್ತಷ್ಟು ಕಲಿಯಲಿಕ್ಕಿದೆ ಎಂದರು.
ಇದೇ ಸಂದರ್ಭದಲ್ಲಿ ಮಸೀದಿಗೆ ಸಹಾಯಹಸ್ತ ಚಾಚಿದ ಕಾಸರಗೋಡು ಸಿ.ಕೆ. ಮೊಹಮ್ಮದ್ ಅವರನ್ನು ಸನ್ಮಾನಿಸಲಾಯಿತು. ಮಸೀದಿಯ ಅಧ್ಯಕ್ಷ ಮುಸ್ತಫಾ ಅಬ್ದುಲ್ಲ ಅಧ್ಯಕ್ಷತೆ ವಹಿಸಿದ್ದರು. ಖತೀಬ್ ಮೊಹಮ್ಮದ್ ಆಲಿ ಮದನಿ, ಮಾಜಿ ಅಧ್ಯಕ್ಷ ಫಾರೂಕ್ ಉಳ್ಳಾಲ್, ಉಳ್ಳಾಲ ಎಸ್ ವೈಎಸ್ ಸಮಸ್ತದ ಅಧ್ಯಕ್ಷ ಕೆ.ಎಸ್ ಮೊಯಿದ್ದೀನ್, ಮೇಲಂಗಡಿ ಮಸೀದಿಯ ಉಪಾಧ್ಯಕ್ಷ ಅಬ್ದುರ್ರಹ್ಮಾನ್, ಸದಸ್ಯ ಆಸೀಫ್ ಅಬ್ದುಲ್ಲ ಮೊದಲಾದವರು ಉಪಸ್ಥಿತರಿದ್ದರು.
ಸಲಾಮ್ ಮದನಿ ಅಳಕೆ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಅಬ್ದರ್ರಹ್ಮಾನ್ ವಂದಿಸಿದರು.
ಸಲಾಮ್ ಮದನಿ ಅಳಕೆ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಅಬ್ದರ್ರಹ್ಮಾನ್ ವಂದಿಸಿದರು.