Site icon newsroomkannada.com

250ಕ್ಕೂ ಯುವತಿಯರಿಗೆ ವಂಚಿಸಿದ್ದವ ಅಂದರ್‌

ಬೆಂಗಳೂರು: ಮ್ಯಾಟ್ರಿಮೋನಿಯಲ್ಲಿ (Matrimony) ಸಿಕ್ಕ ವರನನ್ನು ಹುಡುಕಿಕೊಂಡು ಬಂದಿದ್ದ ಪೋಷಕರಿಗೆ ಪಂಗನಾಮ ಹಾಕುತ್ತಿದ್ದ ಖತರ್ನಾಕ್‌ ಒಬ್ಬನನ್ನು ಪೊಲೀಸರು (Bengaluru Police) ಬಂಧಿಸಿರುವ ಘಟನೆ ನಗರದಲ್ಲಿ ನಡೆದಿದೆ.
ರಾಜಾಜಿನಗರ (Rajajinagar) ನಿವಾಸಿ ಪವನ್ ಅಗರವಾಲ್ ಬಂಧಿತ ಆರೋಪಿ. ನಿಮ್ಮ ಮಗಳು ನನಗೆ ಇಷ್ಟ ಆಗಿದ್ದಾಳೆ, ಮದುವೆಯಾಗುತ್ತೇನೆ ಎಂದು ನಂಬಿಸಿ ಬರೋಬ್ಬರಿ 250ಕ್ಕೂ ಅಧಿಕ ಮಂದಿಗೆ ವಂಚಿಸಿದ್ದಾನೆ. ತಮಿಳುನಾಡು (Tamil Nadu) ಮೂಲದ ದಂಪತಿಗೆ ವಂಚನೆ ಕೇಸ್‌ ತನಿಖೆ ನಡೆಸುತ್ತಿದ್ದಾಗ ಪ್ರಕರಣ ಬೆಳಕಿಗೆ ಬಂದಿದೆ.
ಕೆಲ ದಿನಗಳ ಹಿಂದೆಯಷ್ಟೇ ತಮಿಳುನಾಡು ಕೊಯಮತ್ತೂರಿನ ದಂಪತಿ ಮಗಳ 2ನೇ ಮದುವೆಗೆ ಮ್ಯಾಟ್ರಿಮೋನಿಯಲ್ಲಿ ಹುಡುಗನನ್ನ ಹುಡುಕುತ್ತಿದ್ದರು. ಈ ವೇಳೆ ಬೆಂಗಳೂರಿನ ರಾಜಾಜಿನಗರ ನಿವಾಸಿ ಪವನ್ ಅಗರವಾಲ್ ಎಂಬಾತ ಪರಿಚಯವಾಗಿದ್ದ. ನಿಮ್ಮ ಮಗಳು ನನಗೆ ಇಷ್ಟವಾಗಿದ್ದಾಳೆ. ನಾನು ಮದುವೆ ಆಗುವುದಾಗಿ ವರ ಪವನ್‌ ಅಗರವಾಲ್‌ ಹೇಳಿದ್ದ. ಪವನ್‌ ಮಾತನ್ನು ನಂಬಿ ಮಾತುಕತೆಗೆ ಅಂತಾ ಯುವತಿಯ ಪೋಷಕರು ರೈಲಿನಲ್ಲಿ ಬೆಂಗಳೂರಿಗೆ ಬಂದಿದ್ದರು.

ಮೆಜೆಸ್ಟಿಕ್‌ ರೈಲು ನಿಲ್ದಾಣಕ್ಕೆ ಬಂದು ಫೋನ್‌ ಮಾಡಿದ ನಂತರ ಪವನ್, ನನಗೆ ಮನೆ ಹತ್ತಿರ ಕೆಲಸ ಇದೆ. ನನ್ನ ಬದಲು ನನ್ನ ಚಿಕ್ಕಪ್ಪ ಬಂದು ನಿಮ್ಮನ್ನ ಮನೆಗೆ ಕರೆದುಕೊಂಡು ಬರ್ತಾರೆ ಎಂದು ಹೇಳಿದ್ದ. ಅದರಂತೆ ಒಬ್ಬ ವ್ಯಕ್ತಿ ಮೆಜೆಸ್ಟಿಕ್‌ ರೈಲು ನಿಲ್ದಾಣಕ್ಕೆ ಬಂದಿದ್ದ. ಆತ ಬಂದ ಕೂಡಲೇ ಮತ್ತೆ ಕರೆ ಮಾಡಿದ ಪವನ್‌, ನನ್ನ ಚಿಕ್ಕಪ್ಪ ಟಿಕೆಟ್‌ ಬುಕ್ಕಿಂಗ್‌ ಮಾಡಬೇಕು, ಪರ್ಸ್‌ ಮರೆತು ಬಂದಿದ್ದಾರೆ. ನೀವು ಅವರಿಗೆ 10 ಸಾವಿರ ರೂ.‌ ಕೊಡಿ, ಮನೆಗೆ ಬಂದ ಮೇಲೆ ವಾಪಸ್ ಕೊಡುತ್ತೇನೆ ಅಂತ ಹೇಳಿದ್ದಾನೆ. ಪವನ್ ಮಾತು ನಂಬಿದ ದಂಪತಿ ಪವನ್ ಚಿಕ್ಕಪ್ಪ ಎಂದು ಹೇಳಿಕೊಂಡ ವ್ಯಕ್ತಿಗೆ 10 ಸಾವಿರ ರೂ. ಕೊಟ್ಟಿದ್ದಾರೆ.

ಹಣ ಪಡೆದ ವ್ಯಕ್ತಿ ಟಿಕೆಟ್‌ ಬುಕ್ಕಿಂಗ್‌ ಮಾಡಿ ಬರ್ತೀನಿ ಅಂತ ಹೋದವನು ಮತ್ತೆ ವಾಪಸ್‌ ಬರಲೇ ಇಲ್ಲ. ಪವನ್ ಮತ್ತು ಆತನ ಚಿಕ್ಕಪ್ಪ ಎಂದು ಹೇಳಿಕೊಂಡ ವ್ಯಕ್ತಿಗೆ ಕರೆ ಮಾಡಿದ್ರೆ ಫೋನ್‌ ಸ್ವಿಚ್ ಆಫ್‌ ಆಗಿತ್ತು. ಬಳಿಕ ತಮ್ಮ ಸಂಬಂಧಿ ಮನೆಗೆ ಹೋಗಿ ಘಟನೆ ಬಗ್ಗೆ ತಿಳಿಸಿದ್ದಾರೆ. ನಂತರ ಸಿಟಿ ರೈಲ್ವೆ ಸ್ಟೇಷನ್ ಪೊಲೀಸ್ ಠಾಣೆಗೆ ದೂರು ನೀಡಿ ಕೊಯಮತ್ತೂರಿಗೆ ವಾಪಸ್ ತೆರಳಿದ್ದರು.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಆರೋಪಿ ನರೇಶ್ ಗೋಸ್ವಾಮಿ ಎಂಬಾತನನ್ನು ಬಂಧಿಸಿದ್ದಾರೆ. ನಂತರ ಈತನನ್ನು ವಿಚಾರಣೆಗೆ ಒಳಪಡಿಸಿದಾಗಲೇ ಆಸಾಮಿ ಬರೋಬ್ಬರಿ 250 ಜನರಿಗೆ ಇದೇ ರೀತಿ ವಂಚನೆ ಮಾಡಿರೋದು ಬೆಳಕಿಗೆ ಬಂದಿದೆ.

Exit mobile version