ಉಳ್ಳಾಲ: ತಾಲೂಕಿನ ತೊಕ್ಕೊಟ್ಟಿನಲ್ಲಿ ಸೈಲೆಂಟಾಗಿ ಮಟ್ಕಾ ಧಂದೆ ವ್ಯಾಪಿಸಿದೆ.ಒಳಪೇಟೆಯ ಕೆಲ ಗೂಡಂಗಡಿ ,ಹೊಟೇಲುಗಳು ಮಟ್ಕಾ ಧಂದೆಯ ಕೇಂದ್ರವಾಗಿದ್ದು ಉಳ್ಳಾಲ ಪೊಲೀಸರು ಇದಕ್ಕೆ ಕಡಿವಾಣ ಹಾಕಬೇಕಿದೆ.
ಒಳಪೇಟೆಯಲ್ಲಿ ಅನೇಕ ಯುವಕರು ಬೆಳ್ಳಂ ,ಬೆಳಗ್ಗೆ ಶರಾಬು ಕುಡಿದು ಟೈಟಾಗಿ ಮಟ್ಕಾ ಚೀಟಿ ಬರೆಸಿ ಅದೃಷ್ಟ ಪರೀಕ್ಷೆಗೆ ಇಳಿದು ಕೈ ಸುಟ್ಟು ಕೊಂಡು ಮತ್ತೆ ಟೈಟಾಗಿ ರಸ್ತೆಯಲ್ಲೇ ದಿನ ಕಳೆಯುತ್ತಿದ್ದು ಮನೆಯ ಜವಬ್ದಾರಿಗಳನ್ನೇ ಮರೆತು ಬಿಟ್ಟಿದ್ದಾರೆ.ತೊಕ್ಕೊಟ್ಟು ಒಳಪೇಟೆಯ ಕೆಲ ಅಡ್ಡೆಗಳಲ್ಲಿ ಮಟ್ಕಾ ಧಂದೆ ಸೈಲೆಂಟಾಗಿ ನಡೆಯುತ್ತಿದ್ದು ಇದಕ್ಕೆ ಉಳ್ಳಾಲ ಪೊಲೀಸರು ಕಡಿವಾಣ ಹಾಕಿ ಹಾದಿ ತಪ್ಪುತ್ತಿರುವ ಯುವ ಪೀಳಿಗೆಯನ್ನ ಸರಿದಾರಿಗೆ ಕೊಂಡೊಯ್ಯುವ ಕಾರ್ಯ ನಡೆಸಬೇಕಿದೆ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.