Site icon newsroomkannada.com

ವಿವಾಹಿತ ಮಹಿಳೆ ಅನ್ಯಕೋಮಿನ ಯುವಕನೊಂದಿಗೆ ಪರಾರಿ: ಇದು ‘ಲವ್ ಜಿಹಾದ್ ಪ್ರಕರಣ’ ಮಹಿಳೆಯ ಪತಿ ಆರೋಪ

ಪುತ್ತೂರು : ವಿವಾಹಿತ ಮಹಿಳೆಯೊಬ್ಬರು ಅನ್ಯಧರ್ಮದ ಯುವಕನೊಂದಿಗೆ ಪರಾರಿಯಾಗಿರುವ ಬಗ್ಗೆ ವರದಿಯಾಗಿದೆ. ಪತ್ನಿಯನ್ನು ಲವ್ ಜಿಹಾದ್ ಬಲೆಗೆ ಬೀಳಿಸಿ ಈ ಕೃತ್ಯ ಎಸಗಲಾಗಿದೆ ಎಂದು ಮಹಿಳೆಯ ಪತಿ ಆರೋಪಿಸಿದ್ದಾರೆ. ಮಾತ್ರವಲ್ಲ ಇದನ್ನು ಪ್ರಶ್ನಿಸಲು ಹೋದ ಮಹಿಳೆಯ ಪತಿಗೆ ಹಲ್ಲೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.

 

ಪುತ್ತೂರು ಕೆಮ್ಮಾಯಿ ನಿವಾಸಿ ಸುರೇಶ್‌ ಭಟ್‌ ಅವರ ಪತ್ನಿ ಪ್ರತಿಮಾ ಭಟ್‌ ಅವರು ಪುತ್ತೂರಿನ ಕುರಿಯ ಬಳ್ಳಮಜಲು ನಿವಾಸಿ ಪುತ್ತೂರಿನಲ್ಲಿ ಆಂಬ್ಯುಲೆನ್ಸ್ ಚಾಲಕನಾಗಿದ್ದ ಸಿರಾಜುದ್ದೀನ್ ಜತೆ ಪರಾರಿಯಾಗಿದ್ದಾರೆ. ಕೆಲವು ದಿನಗಳ ಹಿಂದೆ ಈ ಘಟನೆ ನಡೆದಿದೆ. ಪುತ್ತೂರಿನ ಸಿಜು ಅಲಿಯಾಸ್‌ ಸಿರಾಜುದ್ದೀನ್ ಯಾನೆ ಬೈಂದೂರಿನ ಸೂರಜ್ ಪ್ರಕರಣದ ಪ್ರಮುಖ ಆರೋಪಿ. ಈ ಬಗ್ಗೆ ಮಾಹಿತಿ ಪಡೆದ ಮಹಿಳೆ ಪ್ರತಿಮಾ ಭಟ್‌ ಅವರ ಪತಿ ಸುರೇಶ್‌ ಭಟ್‌ ಪತ್ನಿಯನ್ನು ಪ್ರಶ್ನಿಸಲು ತೆರಳಿದ್ದ ವೇಳೆ ಮೇಲೆ ಅನ್ಯಕೋಮಿನ ಯುವಕ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆಗೈದು ಬೆದರಿಕೆಯೊಡ್ಡಿದ ಘಟನೆ ಬೈಂದೂರು ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಈ ಬಗ್ಗೆಯೂ ದೂರು ದಾಖಲಾಗಿದೆ.

Exit mobile version