Site icon newsroomkannada.com

ಮಾರಲ್ ಪೊಲೀಸಿಂಗ್ ಪ್ರಕರಣ, ಇಬ್ಬರ ಸೆರೆ

ಮಂಗಳೂರು: ಮಂಗಳೂರು ನಗರದಲ್ಲಿ ನೈತಿಕ ಪೊಲೀಸ್‌ ಗಿರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಅಳಪೆ ನಿವಾಸಿ ದೀಕ್ಷಿತ್‌ (32), ಲಾಯ್ಡ ಪಿಂಟೋ ಬಂಧಿತರು. ಕೃತ್ಯಕ್ಕೆ ಬಳಸಿದ್ದ ಸ್ಕೂಟರ್‌ ಮತ್ತು ಮೊಬೈಲ್‌ ಫೋನ್‌ ಅನ್ನು ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿದೆ.

ಮಂಗಳೂರಿನ ಪ್ರತಿಷ್ಠಿತ ವೈದ್ಯಕೀಯ ಕಾಲೇಜಿನ ಹಾಸ್ಪಿಟಲ್‌ ಮ್ಯಾನೇಜ್‌ಮೆಂಟ್‌ ಕೋರ್ಸ್‌ ವಿದ್ಯಾರ್ಥಿಯ ಮೇಲೆ ತಂಡ ದಿಂದ ಹಲ್ಲೆಯಾದ ಬಗ್ಗೆ ದೂರು ದಾಖಲಾಗಿದ್ದು, ಬೀಚ್ ಗೆ ತೆರಳಿದ್ದ ವಿದ್ಯಾರ್ಥಿಗಳನ್ನು ಹಿಂಬಾಲಿಸಿ ಬಂದು ತಂಡವೊಂದು ಹಲ್ಲೆ ನಡೆಸಿರುವ ಬಗ್ಗೆ ದೂರು ದಾಖಲಾಗಿತ್ತು. ವಿದ್ಯಾರ್ಥಿಗಳು ಪಣಂಬೂರು ಬೀಚ್ ವಿಹಾರಕ್ಕೆ ತೆರಳಿದ್ದರು.

ಈ ವೇಳೆ ವಿದ್ಯಾರ್ಥಿನಿಯರು ಅನ್ಯಕೋಮಿನ ವಿದ್ಯಾರ್ಥಿಗಳೊಂದಿಗೆ ವಿಹಾರಕ್ಕೆ ತೆರಳಿದ್ದಾರೆ ಎಂದು ಆರೋಪಿಸಿ ಬೀಚ್‌ ನಿಂದ ಹಿಂಬಾಲಿಸಿಕೊಂಡು ಬಂದ ತಂಡ ವಿದ್ಯಾರ್ಥಿ ಹಫೀಸ್‌ (20) ಮೇಲೆ ಬಿಜೈ ಕಾಪಿಕಾಡ್‌ನಲ್ಲಿ ಹಲ್ಲೆ ನಡೆಸಿತ್ತು. ಗಾಯಗೊಂಡ ವಿದ್ಯಾರ್ಥಿ ಉರ್ವ ಠಾಣೆಯಲ್ಲಿದೂರು ದಾಖಲಿಸಿದ್ದರು.

Exit mobile version