main logo

ಪಾರ್ಟಿ ವಿಡಿಯೋ Instagramನಲ್ಲಿ ಪೋಸ್ಟ್ ಮಾಡಿ ಪೊಲೀಸರ ಅತಿಥಿಗಳಾದ ಸ್ಟೂಡೆಂಟ್ಸ್!

ಪಾರ್ಟಿ ವಿಡಿಯೋ Instagramನಲ್ಲಿ ಪೋಸ್ಟ್ ಮಾಡಿ ಪೊಲೀಸರ ಅತಿಥಿಗಳಾದ ಸ್ಟೂಡೆಂಟ್ಸ್!

ಮಣಿಪಾಲ: ಇನ್ಸ್ಟಾಗ್ರಾಮ್ (Instagram) ಪೋಸ್ಟ್ ನೋಡಿ ಬಾರ್​ಗೆ ದಾಳಿ ಮಾಡಿದ ಮಣಿಪಾಲ ಪೊಲೀಸರು (Manipal Police) ಮಿಂಚಿನ ಕಾರ್ಯಾಚರಣೆ ನಡೆಸಿದ್ದಾರೆ.

ಎಸ್​.ಸ್ಟೇಸಿ ಬಾರ್​ನಲ್ಲಿ ಅನುಮತಿ ಇಲ್ಲದೆ ಡಿಜೆ ಪಾರ್ಟಿ ಮಾಡುತ್ತಿದ್ದ ಮಣಿಪಾಲದ ವಿದ್ಯಾರ್ಥಿಗಳು ಪಾರ್ಟಿ ಮಾಡಿದ ಹಾಗೂ ಹುಕ್ಕಾ, ಮದ್ಯ ಸೇವನೆಯ ವಿಡಿಯೋವನ್ನು ಇನ್ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಮಾಡಿದ್ದರು. ವೀಕೆಂಡ್ ಬಂದೋಬಸ್ತ್ ನಲ್ಲಿದ್ದ ಪೊಲೀಸರು ಈ ವಿಷಯ ತಿಳಿಯುತ್ತಿದ್ದಂತೆ ಮಿಂಚಿನ ಕಾರ್ಯಾಚರಣೆ ನಡೆಸಿ ಬಾರ್​ ಮೇಲೆ ದಾಳಿ ನಡೆಸಿದ್ದಾರೆ.

ಮಣಿಪಾಲ ವೃತ್ತ ನಿರೀಕ್ಷಕ ದೇವರಾಜ್ ನೇತೃತ್ವದ ತಂಡ ಉಡುಪಿ ತಾಲೂಕಿನ‌ ಮಣಿಪಾಲ ಸಮೀಪದ ವಿದ್ಯಾನಗರದಲ್ಲಿರುವ ಎಸ್​.ಸ್ಟೇಸಿ ಬಾರ್​ ಮೇಲೆ ದಾಳಿ ನಡೆಸಿದೆ.

ಈ ವೇಳೆ ಅನುಮತಿ ಇಲ್ಲದೆ ಪಾರ್ಟಿ ಮಾಡುತ್ತಿದ್ದ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆಯಲಾಗಿದೆ. ಹಾಗೂ ಬಾರ್​ನಲ್ಲಿ ಡಿಜೆ ಪಾರ್ಟಿ ಮಾಡಲು ಅನುಮತಿ ನೀಡಿದ ಬಾರ್ ಮಾಲೀಕರ ವಿರುದ್ಧ ಪ್ರಕರಣ ದಾಖಲಾಗಿದೆ. ಪ್ರತಿ ವೀಕೆಂಡ್​ನಲ್ಲೂ ಮಣಿಪಾಲ ಪೊಲೀಸರು ಮಣಿಪಾಲದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಒಟ್ಟಿನಲ್ಲಿ ವೀಕೆಂಡ್ ಮಸ್ತಿಯ ಖುಷಿಯಲ್ಲಿದ್ದ ಸ್ಟೂಡೆಂಟ್ಸ್ ‘ಇರಲಾರದೆ ಇರುವೆ ಬಿಟ್ಟುಕೊಂಡಂತೆ..’ ಸೋಷಿಯಲ್ ಮೀಡಿಯಾದಲ್ಲಿ ಗಮ್ಮತ್ತು ಮಾಡುವ ವಿಡಿಯೋ ಪೋಸ್ಟ್ ಮಾಡಿ ಇದೀಗ ಪೊಲೀಸರ ಅತಿಥಿಗಳಾಗುವಂತಾಗಿದೆ.

Related Articles

Leave a Reply

Your email address will not be published. Required fields are marked *

error: Content is protected !!