main logo

ಮದುವೆ ವದಂತಿ: ಅಯ್ಯೋ ನನ್ನ ಕರ್ಮ ಎಂದ ಮಂಗ್ಲಿ

ಮದುವೆ ವದಂತಿ: ಅಯ್ಯೋ ನನ್ನ ಕರ್ಮ ಎಂದ ಮಂಗ್ಲಿ

ತನ್ನ ವಿಭಿನ್ನ ಕಂಠದಿಂದಲೇ ಅಭಿಮಾನಿಗಳ ಮನಗೆದ್ದಿರುವ ಮಂಗ್ಲಿ ಮದುವೆ ಬಗ್ಗೆ ನಿನ್ನೆಯಿಂದ ಭಾರೀ ಸುದ್ದಿ ಹರಿದಾಡುತ್ತಿದೆ. ಮಂಗ್ಲಿ ಮದುವೆ ಆಗ್ತಿದ್ದಾರಂತೆ. ಮಾವನ ಮಗನ ಜೊತೆಗೆ ಸಪ್ತಪದಿ ತುಳೀತಾರಂತೆ ಅಂತ ಎಲ್ಲ ಕಡೆ ಸುದ್ದಿ ಹರಿದಾಡುತ್ತಿತ್ತು. ಆದ್ರೆ ಈ ಸುದ್ದಿಗೆ ಮಂಗ್ಲಿ ಕೆಂಡಾಮಂಡಲರಾಗಿದ್ದಾರೆ.

ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಅಭಿಮಾನಿಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ಗಾಯಕಿಗೆ ಶುಭಾಶಯ ಕೋರುತ್ತಿದ್ದಾರೆ. ಈ ಬಗ್ಗೆ ಮಂಗ್ಲಿ ಪ್ರತಿಕ್ರಿಯಿಸಿದ್ದಾರೆ. ‘ಇದೆಲ್ಲಾ ಬರೀ ವದಂತಿ’ ಎಂದು ಆಕೆ ಪ್ರತಿಕ್ರಿಯಿಸಿದ್ದಾರೆ. ‘ನನ್ನ ಮದುವೆನಾ? ಅಯ್ಯೋ ನನ್ನ ಕರ್ಮ.. ಯಾವ ಮದುವೆನೂ ಇಲ್ಲ. ಇದೆಲ್ಲಾ ಸೋಶಿಯಲ್ ಮೀಡಿಯಾದಲ್ಲಿ ಹಬ್ಬಿಸುತ್ತಿರುವ ಸುಳ್ಳು ಸುದ್ದಿ. ನನ್ನ ಭಾವನನ್ನು ನಾನು ಮದುವೆ ಆಗೋದಾ? ಅದ್ಯಾರು ನನ್ನ ಭಾವ? ಆ ಸುದ್ದಿ ಹಬ್ಬಿಸಿದವರನ್ನೇ ತೋರ್ಸೋಕೆ ಹೇಳಿ’ ಎಂದು ಗರಂ ಆಗಿದ್ದಾರೆ. ಜೊತೆಗೆ ‘ಸದ್ಯಕ್ಕೆ ಮದುವೆ ಆಲೋಚನೆಯೇ ಇಲ್ಲ’ಎಂದಿದ್ದಾರೆ ಮಂಗ್ಲಿ.

Related Articles

Leave a Reply

Your email address will not be published. Required fields are marked *

error: Content is protected !!