ಮಂಗಳೂರು, ನ.9: ಕರ್ಣಾಟಕ ಬ್ಯಾಂಕಿನ ಮಂಗಳೂರು ಪ್ರಧಾನ ಕಚೇರಿಯಲ್ಲಿ ಜನರಲ್ ಮ್ಯಾನೇಜರ್ ಆಗಿದ್ದ ವ್ಯಕ್ತಿಯೊಬ್ಬರು ಕತ್ತು ಸೀಳಿಕೊಂಡು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಮಂಗಳೂರಿನ ಬೊಂದೇಲ್ ನಲ್ಲಿರುವ ಅಪಾರ್ಟೆಂಟಿನ ಮನೆಯಲ್ಲಿ ಇಂದು ಬೆಳಗ್ಗೆ ಕತ್ತು ಕೊಯ್ದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಪಂಪೈಲ್ ಪ್ರಧಾನ ಕಚೇರಿಯಲ್ಲಿ ಚೀಫ್ ಕಂಪ್ಲೇಂಟ್ ಆಫೀಸರ್ ಆಗಿದ್ದ ವಾದಿರಾಜ ಕೆ.ಎ(51) ಮೃತ ವ್ಯಕ್ತಿ ಇಂದು ಬೆಳಗ್ಗೆ ಹತ್ತು ಗಂಟೆ ವೇಳೆಗೆ ಪತ್ನಿ ಮಗುವಿನೊಂದಿಗೆ ಶಾಲೆಯಲ್ಲಿ ಪೇರೆಂಟ್ ಮೀಟಿಂಗ್ ಇದೆಯೆಂದು ತೆರಳಿದ್ದರು.
ಬ್ಯಾಂಕಿನ ವಾಹನ ಚಾಲಕ ವಾದಿರಾಜ್ ಕೆಳಗೆ ಬರುತ್ತಾರೆಂದು ಕಾಯುತ್ತ ಕುಳಿತಿದ್ದರು. ವಾದಿರಾಜ್ ಇನ್ನೂ ಬಂದಿಲ್ಲವೆಂದು ಚಾಲಕ ಮೇಲೆ ಹೋಗಿ ನೋಡಿದಾಗ ಕತ್ತು ಕೊಯ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಕೂಡಲೇ ಸ್ಥಳೀಯರು ಅವರನ್ನು ಆಸ್ಪತ್ರೆಗೆ ಒಯ್ದಿದ್ದಾರೆ. ಅದಾಗಲೇ ಬಹಳಷ್ಟು ರಕ್ತ ಹೋಗಿದ್ದರಿಂದ ಆಸ್ಪತ್ರೆ ತಲುಪುವಷ್ಟರಲ್ಲಿ ಸಾವನ್ನಪ್ಪಿದ್ದಾರೆ.
ಸ್ಥಳಕ್ಕೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ. ಕಳೆದ ಒಂದು ವರ್ಷದಿಂದ ವಾದಿರಾಜ್ ಕುಟುಂಬ ಬೋಂದೇಲ್ ಅಪಾರ್ಟೆಂಟ್ ನಲ್ಲಿ ಬಾಡಿಗೆ ಮನೆ ಪಡೆದಿತ್ತು, ಮಂಗಳೂರು ನಗರದ ಪಂಪಲ್ ನಲ್ಲಿರುವ ಕರ್ಣಾಟಕ ಬ್ಯಾಂಕ್ ಕೇಂದ್ರ ಕಚೇರಿಯಲ್ಲಿ ವಾದಿರಾಜ್ ಕರ್ತವ್ಯ ನಿರ್ವಹಿಸುತ್ತಿದ್ದರು.