ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎರಡು ಪ್ರತಿಷ್ಠಿ ತ ಪ್ರಶಸ್ತಿಗೆ ಪಾತ್ರವಾಗಿದೆ. ವಿಮಾನ ನಿಲ್ದಾಣವು ಕ್ವಾಲಿಟಿ ಮ್ಯಾನೇಜ್ಮೆಂಟ್ ಹಾಗೂ ಫೈನಾನ್ಸ್ ಟ್ರಾನ್ಸ್ಫರ್ಮೇಶನ್ ಎಂಬ ಎರಡು ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದಿದೆ. ಟೋಟಲ್ ಕ್ವಾಲಿಟಿ ಮ್ಯಾನೇಜ್ಮೆಂಟ್ (ಟಿಕ್ಯೂಎಂ) ಶೃಂಗಸಭೆಯಲ್ಲಿ ವಿಮಾನ ನಿಲ್ದಾಣಕ್ಕೆ ರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪ್ರಶಸ್ತಿ ಲಭಿಸಿದೆ.
ಬೆಂಗಳೂರಿನಲ್ಲಿ ಕ್ವಾಲಿಟಿ ಸರ್ಕಲ್. ಫೋರಂ ಆಫ್ ಇಂಡಿಯಾ (ಕ್ಯೂಸಿಎಫ್‌ಐ) ಆಯೋಜಿಸಿದ್ದ ಟಿಕ್ಯೂಎಂ ಶೃಂಗಸಭೆಯಲ್ಲಿ ವಿಮಾನ ನಿಲ್ದಾಣವು ಈ ಚಿನ್ನದ ಪ್ರಶಸ್ತಿಯನ್ನು ಪಡೆದಿದ್ದು, 2024ರಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಮಟ್ಟದ ಟಿಕ್ಯೂಎಂ ಸ್ಪರ್ಧೆಯಲ್ಲಿ ಭಾಗವಹಿಸಲು ಆಯ್ಕೆಯಾಗಿದೆ.
ವಿಮಾನ ನಿಲ್ದಾಣದ ಸೈಟ್ ಫೈನಾನ್ಸ್ ಕಂಟ್ರೋಲರ್ ಸಚಿನ್ ಕುಮಾರ್ ಗುಪ್ತಾ ಅವರು ಶುಕ್ರವಾರ ನಡೆದ ಫ್ಯೂಚರ್ ಆಫ್ ಫೈನಾನ್ಸ್ ಫ್ಯೂಚರ್ ಶೃಂಗಸಭೆ ಮತ್ತು ಪ್ರಶಸ್ತಿಗಳು 2023 ರ 10ನೇ ಆವೃತ್ತಿಯಲ್ಲಿ ವರ್ಷದ ಫೈನಾನ್ಸ್ ಟ್ರಾನ್ಸ್ಫರ್ಮೇಶನ್ ಪ್ರಶಸ್ತಿ ವಿಜೇತರಾಗಿದ್ದಾರೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಇಂಟಿಗ್ರೇಟೆಡ್ ಕಾರ್ಗೋ ಟರ್ಮಿನಲ್ (ಐಸಿಟಿ) ಸರಕು ಸಾಗಣೆಯಲ್ಲಿ ಪ್ರಗತಿಯನ್ನು ದಾಖಲಿಸಿದ್ದು, ಪ್ರಸಕ್ತ ಸಾಲಿನಲ್ಲಿ 1676.21 ಟನ್ ದೇಶೀಯ ಸರಕುಗಳನ್ನು ನಿರ್ವಹಣೆ ಮಾಡಿದೆ.