Site icon newsroomkannada.com

ಪರಿಸರ ಜಾಗೃತಿಗಾಗಿ ಪಚ್ಚನಾಡಿಯಿಂದ ಪಕ್ಷಿಕೆರೆಗೆ ಕಾಲ್ನಡಿಗೆ ಬೃಹತ್ ಜಾಥಾಕ್ಕೆ ಚಾಲನೆ

ಮಂಗಳೂರು: ಪ್ರಕೃತಿಯು ಮನುಷ್ಯನಿಗೆ ಎಲ್ಲವನ್ನೂ ಕೊಟ್ಟಿದೆ. ಆದರೆ ಮನುಷ್ಯ ತನ್ನ ವೈಯಕ್ತಿಕ ತೆವಲಿಗಾಗಿ ಪರಿಸರದ ಮೇಲೆ ನಿರಂತರ ದಾಳಿ ನಡೆಸುತ್ತಿದ್ದಾನೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಪ್ರಕೃತಿ ಸರ್ವ ನಾಶವಾಗಲಿದೆ. ಇನ್ನಾದರೂ ನಾವು ಎಚ್ಚೆತ್ತುಕೊಳ್ಳಬೇಕಿದೆ ಎಂದು ದ.ಕ. ಜಿಪಂ ಉಪ ಕಾರ್ಯದರ್ಶಿ ಹಾಗೂ ಸ್ವಚ್ಛ ಭಾರತ್’ ಮಿಷನ್ (ಗ್ರಾ) ನೋಡಲ್ ಅಧಿಕಾರಿ ರಘು ಎ.ಇ. ಹೇಳಿದರು.

ದ.ಕ. ಜಿಪಂ, ಮಂಗಳೂರು ತಾಪಂ, ಮೂಡುಶೆಡ್ಡೆ ಗ್ರಾ.ಪಂ. ಸಹಕಾರದಲ್ಲಿ ಪೇಪರ್ ಸೀಡ್‌ ಸಂಸ್ಥೆಯು ಪರಿಸರ ಜಾಗೃತಿಗಾಗಿ ಪಚ್ಚನಾಡಿಯಿಂದ ಪಕ್ಷಿಕೆರೆಯವರೆಗೆ ಅ.15ರವರೆಗೆ ಹಮ್ಮಿಕೊಂಡ ಕಾಲ್ನಡಿಗೆ ಜಾಥಾಕ್ಕೆ ಗುರುವಾರ ಪಚ್ಚನಾಡಿಯಲ್ಲಿ ಚಾಲನೆ ನೀಡಿ ಮಾತನಾಡಿದರು.

ಮಂಗಳೂರು ತಾಪಂ ಇಒ ಮಹೇಶ್‌ ಕುಮಾರ ಹೊಳ್ಳ ಗ್ರಾಪಂ ಅಧ್ಯಕ್ಷ ಅನಿಲ್‌ ಕುಮಾರ್, ಉಪಾಧ್ಯಕ್ಷ ಬಬಿತಾ ಶೆಟ್ಟಿ, ಗ್ರಾಪಂ ಪಿಡಿಒ ಜಯಪ್ರಕಾಶ್‌, ಸ್ವಚ್ಛ ಭಾರತ್ ಮಿಷನ್ ಜಿಲ್ಲಾ ಐ ಇ ಸಿ ಸಂಯೋಜಕ ಡೊಂಬಯ್ಯ ಇಡ್ಕಿದು, ಜೀತ್ ಮಿಲನ್ ರೋಚ, ರಘುವೀರ್ ಸೂಟರ್ ಪೇಟೆ, ಪಕ್ಷಿಕೆರೆ ಪೇಪರ್ ಸೀಡ್ ಸಂಸ್ಥೆಯ ನಿತಿನ್ ವಾಸ್,ಸ್ವಚ್ಛ ಭಾರತ್‌ ಮಿಷನ್ ಜಿಲ್ಲಾ ಎಚ್‌‌.ಡಿ. ಸಂಯೋಜಕ ನವೀನ್ ಮತ್ತಿತರರು ಉಪಸ್ಥಿತರಿದ್ದರು.

Exit mobile version