ಕುಮಾರಧಾರ ನದಿಗೆ ಶಾಂತಿಮೊಗೇರು ಎಂಬಲ್ಲಿ ನಿರ್ಮಿಸಿರುವ ಬೃಹತ್ ಕಿಂಡಿ ಅಣೆಕಟ್ಟಿನಲ್ಲಿ ನೀರು ಸೋರಿಕೆಯಾಗಿ ಅಣೆಕಟ್ಟು ಬರಿದಾಗಿದೆ. ಇದಕ್ಕೆ ಮರಳು ದಂಧೆಯವರೇ ಪ್ರಮುಖ ಕಾರಣ. ತಕ್ಷಣ ಇದಕ್ಕೆ ಕಡಿವಾಣ ಹಾಕಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಬುಧವಾರ ನದಿ ತಟದಲ್ಲಿ ಸೇರಿದ್ದ ಸ್ಥಳೀಯರು ಅಣೆಕಟ್ಟಿಗೆ ಅಳವಡಿಸಿದ್ದ ಹಲಗೆಯನ್ನು ರಾತೋರಾತ್ರಿ ತೆಗೆದಿರುವುದಲ್ಲದೆ, ಹಲಗೆಯೊಂದರ ಅಡಿಯಲ್ಲಿ ಕಲ್ಲು ಇಡಲಾಗಿದೆ. ಅಲ್ಲದೆ ಕೆಲವು ಹಲಗೆಯ ಅಡಿಯಲ್ಲಿದ್ದ ರಬ್ಬರ್ ವಾಷರನ್ನು ತೆಗೆಯಲಾಗಿದೆ. ಇದು ಅಕ್ರಮ ಮರಳು ದಂಧೆಕೋರರ ಕೃತ್ಯ ವಾಗಿದೆ ಎಂದು ಆರೋಪಿಸಿದ್ದಾರೆ.
ಈ ವರ್ಷ ಮಾಧ್ಯಮದವರ ಸಕಾಲಿಕ ಎಚ್ಚರಿಕೆಯ ಹಿನ್ನೆಲೆಯಲ್ಲಿ ಹಲಗೆ ಜೋಡಣೆಯಂತೂ ಯಶಸ್ವಿಯಾಗಿತ್ತು. ಬರಪೂರ ನೀರು ಶೇಖರಣೆಯಾಗಿತ್ತು. ಸಂಬಂಧಪಟ್ಟ ಇಲಾಖೆಯವರು ಹೇಳುವ ಪ್ರಕಾರ ಅಣೆಕಟ್ಟೆಯಿಂದ ಮೇಲೆ ಸುಮಾರು 12 ಕಿಲೋ ಮೀಟರ್ ದೂರದವರೆಗೆ ನದಿಯಲ್ಲಿ ನೀರು ಶೇಖರಣೆಯಾಗಿದೆ.
ಏನಿಲ್ಲವೆಂದರೂ ನದಿಯ ಮೇಲಿನ ಭಾಗದ ಏಳೆಂಟು ಕಿಲೋ ಮೀಟರ್ ದೂರದವರೆಗೆ ಸಮೃದ್ದವಾದ ಕಾಣುತ್ತಿತ್ತು. ನೀರು ಶೇಖರಣೆ ಆದರೆ ನಾಲೈದು ದಿನಗಳಲ್ಲಿ ನೀರಿನ ಪ್ರಮಾಣ ಕಡಿಮೆ ಯಾಗಿ ಹಲವು ಅನುಮಾನಗಳಿಗೆ ಕಾರಣವಾಗಿತ್ತು.
ಕೃಷಿಕರ ಕೊಳವೆ ಬಾವಿ, ಕುಡಿಯುವ ನೀರಿನ ಬಾವಿ ಹಾಗೂ ಕೆರೆಗಳಲ್ಲಿ ಬಿರು ಬೇಸಿಗೆಯಲ್ಲೂ ಸಾಕಷ್ಟು ನೀರು ತುಂಬಿ ಕೃಷಿ ಭೂಮಿಗೆ ನೀರುಣಿಸಲು ಕೃಷಿಕರಿಗೆ ಜಲನಿಧಿ ಒಲಿದಿತ್ತು. ಇದರಿಂದ ಕೃಷಿಕರು ತೋಟಗಳಿಗೆ ಬರಪೂರ ನೀರುಣಿಸು ತ್ತಿದ್ದಾರೆ. ಆದರೆ
ಒಮ್ಮಿಂದೊಮ್ಮೆಲೆ ಇಳಿಮುಖವಾಗುವಾಗ ಕಂಗಾಲಾಗಿದ್ದಾರೆ.
ಬುಧವಾರ ನದಿ ತಟದಲ್ಲಿ ಸೇರಿದ ಗ್ರಾಮಸ್ಥರ ಪರವಾಗಿ ಹರೀಶ್ ಕೆರೆನಾರು, ಲೋಹಿತಾಶ್ವ ಕಡೆಂಜಿಕಟ್ಟ, ಬಾಲಚಂದ್ರ ನೂಜಿ, ಶೀನಪ್ಪ ಕುಂಬಾರ ಮಾತನಾಡಿ, ಬೃಹತ್ ಕಿಂಡಿ ಅಣೆಕಟ್ಟು ರೈತರಿಗೆ ವರದಾನವಾಗಿದೆ. ಕಳೆದ ಮೂರು ನಾಲ್ಕು ತಿಂಗಳಿಂದ ಸಮೃದ್ದ ವಾಗಿ ಶೇಖರಣೆಯಾಗಿದ್ದನೀರು, ಕಳೆದ ಮೂರು ನಾಲ್ಕು ದಿನಗಳಲ್ಲಿ ಖಾಲಿಯಾಗಿದೆ. ಅಣೆಕಟ್ಟಿಗೆ ಜೋಡಣೆ ಮಾಡಿರುವ
ಅಣೆಕಟ್ಟಿನ ನೀರು ಸೋರಿಕೆ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ಹಲಗೆಯ ವಾಷರ್‌ಗಳನ್ನು ತೆಗೆಯಲಾಗುತ್ತಿದೆ. ಕೆಲವೆಡೆ ಹಲಗೆಯ ಕೆಳಗೆ ಕಲ್ಲುಗಳನ್ನು ಇಟ್ಟು ನೀರು ಹರಿದುಹೋಗುವಂತೆ ಮಾಡಲಾಗಿದೆ. ನೀರು ಖಾಲಿಯಾಗಿರುವುದರಿಂದ ಕೃಷಿ ಪಂಪುಗಳಿಗೆ ನೀರು ಸಾಕಾಗದೆ ಪಂಪುಗಳು ಸುಟ್ಟು ಹೋಗಿವೆ.
ಒಂದಿಬ್ಬರ ಸ್ವಾರ್ಥದ ಪರಿಣಾಮ ಈ ಅವಸ್ಥೆಯಾಗಿದೆ. ಮರಳು ದಂಧೆಕೋರರು ಇದರ ಹಿಂದೆ ಇದ್ದಾರೆ.
ನಾವು ದೇವಸ್ಥಾನ ನಿರ್ಮಾಣಕ್ಕೆ ಮರಳು ತಗೆಯುತ್ತೇವೆ ಎಂದು ಕೇಳಿದರೆ ಸೇತುವೆ ಬಳಿ ಸಾಧ್ಯವಿಲ್ಲ ಎಂದು ಹೇಳುವ ಅಧಿ ಕಾರಿಗಳಿಗೆ ಇಲ್ಲಿ ಮರಳುಗಾರಿಕೆ ಕಾಣುತ್ತಿಲ್ಲ. ಹಲಗೆ ತೆಗೆಯುವವರನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕಾನೂನು ಬಿ ಕ್ರಮ ಜರಗಿಸಬೇಕು ಅಗ್ರಹಿಸಿದರು.
ಶಾಂತಿಮೊಗರು ಬೃಹತ್ ಕಿಂಡಿ ಅಣೆಕಟ್ಟೆಯ ಗೇಟುಗಳನ್ನು ಅಕ್ರಮವಾಗಿ ತೆಗೆದು ಅಣೆಕಟ್ಟೆಯಲ್ಲಿದ್ದ ನೀರು ಬರಿದಾಗಿರುವ ಬಗ್ಗೆ ಸ್ಥಳ ಪರಿಶೀಲನೆ ನಡೆಸಿದ್ದ ಅಧಿಕಾರಿಗಳು ಜಿಲ್ಲಾಧಿಕಾರಿವರಿಗೆ ವರದಿ ಸಲ್ಲಿಸಿದ್ದಾರೆ. ಕುಕೃತ್ಯ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಬೆಳ್ಳಾರೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.