Site icon newsroomkannada.com

Mangalore: ಈಶಿಕಾ ಶೆಟ್ಟಿಗೆ ಮಿಸ್ ಟೀನ್ ಗ್ಲೋಬಲ್ ವರ್ಲ್ಡ್ ಇಂಡಿಯಾ ಓಶಿಯಾನ ಪ್ರಶಸ್ತಿ

ಮಂಗಳೂರು ಮಾರ್ಚ್ 05: ಮಂಗಳೂರಿಗೆ ಮತ್ತೊಂದು ಸೌಂದರ್ಯ ಪ್ರಶಸ್ತಿ ಬಂದಿದ್ದು, ಕರಾವಳಿ ಸುಂದರಿ ಈಶಿಕಾ ಶೆಟ್ಟಿಗೆ ಮಿಸ್ ಟೀನ್ ಗ್ಲೋಬಲ್ ವರ್ಲ್ಡ್ ಇಂಡಿಯಾ ಓಶಿಯಾನ ಪ್ರಶಸ್ತಿ ಲಭಿಸಿದೆ.
ದೆಹಲಿಯ ಬಾಲಕಟೋರ ಸ್ಟೇಡಿಯಂನಲ್ಲಿ ಫೆಬ್ರವರಿ 27ರಂದು ಗ್ಲೋಬಲ್ ಇಂಡಿಯಾ ಎಂಟರ್‌ಟೈನ್​​ಮೆಂಟ್ ಪ್ರೊಡಕ್ಷನ್ ಮತ್ತು ಆಲಿ ಶರ್ಮಾ ಜಂಟಿಯಾಗಿ ಪ್ರಸ್ತುತಪಡಿಸಿರುವ ಮಿಸ್ಸಸ್/ಮಿಸ್ಟರ್ ಮತ್ತು ಮಿಸ್ ಹಾಗೂ ಮಿಸ್ ಟೀನ್ ಗ್ಲೋಬಲ್ ವರ್ಲ್ಡ್ ಸೌಂದರ್ಯ ಸ್ಪರ್ಧೆಯಲ್ಲಿ ಮಂಗಳೂರಿನ ಈಶಿಕಾ ಶೆಟ್ಟಿ ‘ಮಿಸ್ ಟೀನ್ ಗ್ಲೋಬಲ್ ವರ್ಲ್ಡ್ ಇಂಡಿಯಾ ಓಶಿಯಾನ 2024’ ಪ್ರಶಸ್ತಿ ಗೆದ್ದರು. ಈ ಸೌಂದರ್ಯ ಸ್ಪರ್ಧೆಗೆ ದೇಶದ ನಾನಾ ರಾಜ್ಯಗಳ ಒಟ್ಟು 65 ಮಂದಿ ಸ್ಪರ್ಧಿಗಳು ಭಾಗವಹಿಸಿದ್ದರು. ಈ ಪೈಕಿ ಈಶಿಕಾ ಶೆಟ್ಟಿ ಪ್ರಥಮ ಪ್ರಶಸ್ತಿ ಪಡೆದರು.
ಕಾವೂರಿನ ಶಿವನಗರದಲ್ಲಿ ವಾಸವಾಗಿರುವ ಈಶಿಕಾ ಶೆಟ್ಟಿ, ಮಂಗಳೂರು ನಗರ ಪೊಲೀಸ್ ಇಲಾಖೆಯಲ್ಲಿ ಎ.ಎಸ್.ಐ ಆಗಿರುವ ಶರತ್ ಕುಮಾರ್ ಶೆಟ್ಟಿ ಹಾಗೂ ಶ್ವೇತಾ ಶರತ್ ಶೆಟ್ಟಿ ದಂಪತಿಯ ಪ್ರಥಮ ಪುತ್ರಿ. ಶಾರದಾ ವಿದ್ಯಾಲಯ ಮತ್ತು ಬೆಸೆಂಟ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ್ದು, ಪ್ರಸಕ್ತ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಪ್ರಥಮ ಪದವಿ ವ್ಯಾಸಂಗ ಮಾಡುತ್ತಿದ್ದಾರೆ.
2022ರಲ್ಲಿ ಮಂಗಳೂರಿನಲ್ಲಿ ನಡೆದ ಸೌದರ್ಯ ಸ್ಪರ್ಧೆಯಲ್ಲಿ ಮಿಸ್‌ ಟೀನ್ ಮಂಗಳೂರು ಆಗಿಯೂ ಹಾಗೂ 2023ರಲ್ಲಿ ಬೆಂಗಳೂರಿನಲ್ಲಿ ಎನ್.ಬಿ ಮಾಡೆಲಿಂಗ್ ಮ್ಯಾನೇಜ್ಮೆಂಟ್ ನಡೆಸಿರುವ ಸೌಂದರ್ಯ ಸ್ಪರ್ಧೆಯಲ್ಲಿ ಮಿಸ್ ಟೀನ್ ಕರ್ನಾಟಕ 2023ರ ಪ್ರಶಸ್ತಿ ಜಯಿಸಿದ್ದರು. ಬಾಲ್ಯದಿಂದಲೂ ಶಿಕ್ಷಣದ ಜೊತೆ ನಟನೆ, ನೃತ್ಯ ಹಾಗೂ ಮಾಡೆಲಿಂಗ್ ಕ್ಷೇತ್ರದಲ್ಲಿ ಅಪಾರ ಆಸಕ್ತಿ ಹೊಂದಿರುವ ಇವರು ಈಗಾಗಲೇ ಹಲವು ಸಾಧನೆಗಳನ್ನು ಮಾಡಿದ್ದಾರೆ.

Exit mobile version