Site icon newsroomkannada.com

ಇಸ್ರೇಲ್‌ ಪರ ಪೋಸ್ಟ್‌ ಹಾಕಿದ್ದ ಮಂಗಳೂರು ಮೂಲದ ವೈದ್ಯ ಬಹರೈನ್‌ ನಲ್ಲಿ ಅರೆಸ್ಟ್‌

ಮಂಗಳೂರು: ಇಸ್ರೇಲ್ ಪರ ಪೋಸ್ಟ್ ಹಾಕಿರುವ ಕಾರಣಕ್ಕೆ ಚೆನ್ನೈನಲ್ಲಿ ಹತ್ತು ವರ್ಷಗಳಿಂದ ವೈದ್ಯರಾಗಿರುವ ಕನ್ನಡಿಗ, ಮಂಗಳೂರು ಮೂಲದ ವೈದ್ಯ ಡಾ.ಸುನಿಲ್ ರಾವ್ ಅವರನ್ನು ಬಹರೈನ್‌ ಪೊಲೀಸರು ಬಂಧಿಸಿದ್ದಾರೆ. ಹಮಾಸ್‌ ಉಗ್ರರನ್ನು ವಿರೋಧಿಸಿ, ಇಸ್ರೇಲ್‌ ದೇಶದ ಪರವಾಗಿ ಬಾಸುನಿಲ್ ರಾವ್ ಹಾಕಿದ್ದ ಟ್ವಿಟರ್ ಪೋಸ್ಟ್ ಜಾಲತಾಣದಲ್ಲಿ ವೈರಲ್ ಆಗಿತ್ತು. ಕೆಲವರು ಈ ಪೋಸ್ಟ್ ಅನ್ನು ಬೆಹ್ಮನ್ ಆಡಳಿತಕ್ಕೆ ಟ್ಯಾಗ್ ಮಾಡಿ, ಕ್ರಮಕ್ಕೆ ಆಗ್ರಹ ಮಾಡಿದ್ದರು. ಪ್ಯಾಲೆಸ್ತೀನ್ ವಿರೋಧಿಸಿ ಪೋಸ್ಟ್ ಹಾಕಿದ್ದಾರೆಂದು ಆಡಳಿತದ ಗಮನಕ್ಕೆ ತಂದಿದ್ದರು.

ಮಂಗಳೂರಿನ ಕೆಎಂಸಿ ಕಾಲೇಜಿನಲ್ಲಿ ಎಂಡಿ ಮಾಡಿದ್ದ ಡಾ. ಸುನಿಲ್ ರಾವ್, ವಿಶಾಖಪಟ್ಟಣದಲ್ಲಿ ಎಂಬಿಬಿಎಸ್ ಪೂರೈಸಿದ್ದರು. ರಾಯಲ್ ಹಾಸ್ಪಿಟಲ್ ಬೆಹ್ಮನ್ ಸಂಸ್ಥೆಯಲ್ಲಿ 10 ವರ್ಷಗಳಿಂದ ಇಂಟರ್ನಲ್ ಮೆಡಿಸಿನ್ ವಿಭಾಗದಲ್ಲಿ ಸ್ಪೆಷಲಿಸ್ಟ್ ಆಗಿದ್ದರು. ಬೆಹ್ಮನ್ ಪೊಲೀಸರು ಬಂಧಿಸಿದ ಬೆನ್ನಲ್ಲೇ ಆಸ್ಪತ್ರೆ ಹುದ್ದೆಯಿಂದ ತೆಗೆದು ಹಾಕಲಾಗಿದೆ. ಭಾರತೀಯ ಮೂಲದ ಡಾ.ಸುನಿಲ್‌ ರಾವ್ ಬಂಧನ ಆಗಿರುವ ಬಗ್ಗೆ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಉಗ್ರರ ವಿರುದ್ಧ ಪೋಸ್ಟ್ ಹಾಕಿದ್ದಕ್ಕಾಗಿ ವೈದ್ಯರ ವಿರುದ್ಧ ಕ್ರಮ ಕೈಗೊಂಡಿರುವುದನ್ನು ಖಂಡಿಸಿದ್ದಾರೆ.

 

Exit mobile version