Site icon newsroomkannada.com

ಹುಲಿ ಉಗುರಲ್ಲ ಜೀವಂತ ಹುಲಿಯನ್ನೆ ಕರೆದುಕೊಂಡು ವಾಕಿಂಗ್‌ ಹೊರಟ ನೋಡಿ

ಹುಲಿ ಬಂತು ಹುಲಿ ವಿಡಿಯೋ:

ಹುಲಿ ಉಗುರಲ್ಲ ಜೀವಂತ ಹುಲಿಯನ್ನೆ ಕರೆದುಕೊಂಡು ವಾಕಿಂಗ್‌ ಹೊರಟ ನೋಡಿ
ಇಸ್ಲಾಮಾಬಾದ್:‌ ರಾಜ್ಯದಲ್ಲಿ ಹುಲಿ ಉಗುರು ಧರಿಸಿರುವ ವಿಚಾರ ಭಾರಿ ಸದ್ದು ಮಾಡುತ್ತಿದೆ. ಅವರ ಕುತ್ತಿಗೆಯಲ್ಲಿ ಇದೆಯಂತೆ ಇವರ ಮನೆಯಲ್ಲಿ ಇದೆಯಂತೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಹಲವರ ಬಂಧನವೂ ಆಗಿದೆ. ಇತ್ತ ಪಾಕಿಸ್ತಾನದ ಬ್ಯಾಂಕ್‌ ಆಫ್‌ ಖೈಬರ್‌ ಪ್ರದೇಶದ ಸಮೀಪದ ರಸ್ತೆಯಲ್ಲಿ ವ್ಯಕ್ತಿಯೊಬ್ಬ ಸರಪಳಿಯಿಂದ ಕಟ್ಟಿದ್ದ ಹುಲಿಯ ಜೊತೆ ನಡೆದುಕೊಂಡು ಹೋಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.
ಸಾರ್ವಜನಿಕವಾಗಿ ಹುಲಿಯನ್ನು ರಸ್ತೆಯಲ್ಲಿ ಅಡ್ಡಾಡಲು ಕರೆದೊಯ್ದಿರುವ ಬಗ್ಗೆ ನೆಟ್ಟಿಗರು ಜನರ ಸುರಕ್ಷತೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಆಯಾಸದಿಂದ ಬಳಲಿರುವ ಹುಲಿ ತನ್ನ ಕೊರಳಿಗೆ ಹಾಕಿರುವ ಚೈನ್‌ ನಿಂದ ಬಿಡಿಸಿಕೊಳ್ಳಲು ಪ್ರಯತ್ನಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ಟಿಪ್‌ ಟಾಪ್‌ ಯಾತ್ರಾ ಹೆಸರಿನ ಇನ್ಸ್ಟಾಗ್ರಾಮ್‌ ಪೇಜ್‌ ನಲ್ಲಿ ಈ ವಿಡಿಯೋ ಶೇರ್‌ ಮಾಡಲಾಗಿದೆ. ಒಂದು ದಿನದ ಹಿಂದೆ ಶೇರ್‌ ಮಾಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಬ್ಯಾಂಕ್‌ ಆಫ್‌ ಖೈಬರ್‌ ಪ್ರದೇಶದ ಜನನಿಭಿಡ ರಸ್ತೆಯಲ್ಲಿ ವ್ಯಕ್ತಿಯೊಬ್ಬ ಚೈನ್‌ ನಿಂದ ಬಿಗಿದ ಹುಲಿಯ ಜತೆ ನಡೆದುಕೊಂಡು ಬರುತ್ತಿರುವುದು ವಿಡಿಯೋದಲ್ಲಿದೆ. ರೋಷದಲ್ಲಿರುವ ಹುಲಿ ರಸ್ತೆಯಲ್ಲಿ ತೆರಳುವ ವಾಹನಗಳ ಮೇಲೆ ದಾಳಿ ನಡೆಸಲು ಯತ್ನಿಸುತ್ತಿರುವುದು ವಿಡಿಯೋದಲ್ಲಿದೆ

Exit mobile version