Site icon newsroomkannada.com

ಯುವತಿಯನ್ನು 13 ಬಾರಿ ಚಾಕುವಿನಿಂದ ಇರಿದು ಕೊಂದ ಯುವಕ: ಘಟನೆಗೆ ಕಾರಣ ಕೇಳಿದ್ರೆ ಶಾಕ್‌ ಆಗ್ತೀರಾ

ನವದೆಹಲಿ: ಆಘಾತಕಾರಿ ಘಟನೆಯೊಂದರಲ್ಲಿ ಪ್ರೀತಿ ಮುಂದುವರೆಸಲು ನಿರಾಕರಿಸಿದ್ದಕ್ಕೆ ಕೋಪಗೊಂಡ ಯುವಕ ತನ್ನ ಗೆಳತಿಗೆ 13 ಬಾರಿ ಚಾಕುವಿನಿಂದ ಇರಿದಿರುವ ಘಟನೆ ದೆಹಲಿಯ ಲಾಡೋ ಸರಾಯ್ ಪ್ರದೇಶದಲ್ಲಿ ನಡೆದಿದೆ. ಇಂಟರ್​ವ್ಯೂ ಇತ್ತೆಂದು ಬೆಳಗ್ಗೆ 6.30ಕ್ಕೆ ಮನೆ ಬಿಟ್ಟಿದ್ದಳು, ಆರೋಪಿಯನ್ನು ಆಕೆ ಪ್ರೀತಿಸುತ್ತಿದ್ದಳು, ಕೆಲವು ದಿನದಿಂದ ಆತನಿಂದ ದೂರವಾಗಲು ಪ್ರಯತ್ನಿಸುತ್ತಿದ್ದಳು. ಈ ಕೋಪದಿಂದ ಮಹಿಳೆಯ ಮುಖ, ತೊಡೆ ಸೇರಿದಂತೆ ಹಲವೆಡೆ 13 ಬಾರಿ ಇರಿದಿದ್ದಾನೆ. ಆಕೆ ಅಪಾಯದಿಂದ ಪಾರಾಗಿದ್ದು, ಚಿಕಿತ್ಸೆ ಮುಂದುವರೆದಿದೆ.

ಯುವತಿಯ ತಾಯಿ ಶಕುಂತಲಾ ಮಾತನಾಡಿ, ಮಗಳು ಲಜಪತ್​ನಗರದಲ್ಲಿ ಇಂಟರ್​ವ್ಯೂಗೆಂದು ಹೋಗುತ್ತಿದ್ದಳು, ಕ್ಯಾಬ್​ನಲ್ಲಿ ಯುವಕ ಚೂರಿಯಿಂದ ಇರಿದಿರುವುದಾಗಿ ತಿಳಿಸಿದ್ದಾರೆ. ಆಫೀಸ್​ಗೆ ಹೋಗಲು ತಡವಾಗುತ್ತಿದೆ, ಮತ್ತೆ ನಿನ್ನೊಂದಿಗೆ ಮಾತನಾಡಲು ನನಗೆ ಇಷ್ಟವೂ ಇಲ್ಲ ಎಂದು ಎಷ್ಟೇ ಹೇಳಿದರೂ ಕ್ಯಾಬ್​ನಲ್ಲಿ ಕುಳಿತುಕೊಳ್ಳುವಂತೆ ಆಕೆಗೆ ಒತ್ತಾಯಿಸಿದ್ದ, ಕುಳಿತುಕೊಂಡ ಬಳಿಕ ಆಕೆಯ ಮೇಲೆ ದಾಳಿ ಮಾಡಿದ್ದಾನೆ. ಕಳೆದ 2 ವರ್ಷಗಳಿಂದ ಪ್ರೀತಿ ಮಾಡುವಂತೆ ಆಕೆಯನ್ನು ಪೀಡಿಸುತ್ತಿದ್ದ ಎಂದು ದೂರಿದ್ದಾಳೆ.

ಆಕೆ ಆ ಯುವಕನನ್ನು ಪ್ರೀತಿ ಮಾಡಿಲ್ಲ, ಮನೆಯಲ್ಲಿ ತಂದೆ ಇಲ್ಲದ ಕಾರಣ ನಮ್ಮೆಲ್ಲರ ಜವಾಬ್ದಾರಿ ಆಕೆಯ ಮೇಲಿದೆ, ಕೋರ್ಟ್​ ಮ್ಯಾರೇಜ್ ಆಗೋಣ ಎಂದು ಆತ ಕೇಳಿದ್ದ ಆದರೆ ಆಕೆ ಒಪ್ಪಿರಲಿಲ್ಲ. ಕ್ಯಾಬ್ ಚಾಲಕನೇ ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಮೂರು ವರ್ಷಗಳ ಹಿಂದೆ ಇಬ್ಬರು ಒಂದೇ ಆಫೀಸ್​ನಲ್ಲಿ ಕೆಲಸ ಮಾಡುತ್ತಿದ್ದಾಗ ಭೇಟಿಯಾಗಿದ್ದರು.

Exit mobile version